ಬಿಜೆಪಿ ಬೃಹತ್ ರೋಡ್ ಶೋ, ಮೋದಿ… ಮೋದಿ… ಘೋಷಣೆ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ: ಬಿಜೆಪಿ ಅಭ್ಯರ್ಥಿ ಎ.ಮಂಜು
ಹಾಸನ

ಬಿಜೆಪಿ ಬೃಹತ್ ರೋಡ್ ಶೋ, ಮೋದಿ… ಮೋದಿ… ಘೋಷಣೆ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ: ಬಿಜೆಪಿ ಅಭ್ಯರ್ಥಿ ಎ.ಮಂಜು

March 25, 2019

ಹಾಸನ: ಲೋಕಸಭಾ ಕ್ಷೇತ್ರ ಚುನಾವಣೆಗೆ ಜಿಲ್ಲೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ಎ.ಮಂಜು ನಾಮಪತ್ರ ಸಲ್ಲಿಸುವ ಮುನ್ನ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ರೋಡ್ ಶೋ ನಡೆಯಿತು. ಮೆರವಣಿಗೆಯುದ್ದಕ್ಕೂ ಸಾವಿರಾರು ಬಿಜೆಪಿ ಕಾರ್ಯ ಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಘೋಷಣೆ ಕೂಗುತ್ತಾ ಸಂಭ್ರಮಿಸಿದರು.

ನಗರದ ಬಿಎಂ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅಭ್ಯರ್ಥಿ ಎ.ಮಂಜು ಮಾತನಾಡಿ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡ ಬೇಕು ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ಕರೆ ನೀಡಿದರು.

ಕುಟುಂಬ ರಾಜಕಾರಣವನ್ನು ಅಂತ್ಯ ಮಾಡುವು ದಕ್ಕಾಗಿ ಪ್ರತಿಯೊಬ್ಬರೂ ಇಂದೇ ಪ್ರತಿಜ್ಞೆ ಮಾಡಬೇಕು. ಪ್ರತಿಯೊಬ್ಬ ಕಾರ್ಯಕರ್ತನು ತಾನೇ ಮೋದಿ ಎಂದು ಭಾವಿಸಿ ಮನೆ ಮನೆಗೆ ತೆರಳಿ ಮತಯಾಚಿಸಬೇಕು. ಇಂದು ಇಲ್ಲಿ ಸೇರಿರುವ ಬೃಹತ್ ಜನಸ್ತೋಮ ನೋಡಿ ಗೆದ್ದುಬಿಟ್ಟಿದ್ದೇವೆಂದು ಕೈ ಕಟ್ಟಿ ಕೂರಬೇಡಿ ಎಂದರು.

ನಾನು ಕಾಂಗ್ರೆಸ್‍ನಲ್ಲಿ ಎಲ್ಲವನ್ನೂ ಅನುಭವಿಸಿ ಹೊರಗೆ ಹೋಗಿದ್ದೇನೆ ಎನ್ನುತ್ತಿದ್ದಾರೆ. ಆದರೆ ನನ್ನನ್ನು ಕಾಂಗ್ರೆಸ್ ಮಂತ್ರಿ ಮಾಡಿದ ನಂತರ ಜಿಪಂ ಕೇವಲ 2 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್, 16 ಸ್ಥಾನಗಳಲ್ಲಿ ಜಯ ಗಳಿಸಿತು. ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಜಿಲ್ಲೆಯಲ್ಲಿ ಬೇರೆ ಪಕ್ಷದವರು ವಿಧಾನ ಪರಿಷತ್ ಸದಸ್ಯರಾಗಿರಲಿಲ್ಲ. ನನ್ನ ಅವಧಿಯಲ್ಲಿ ಜನರು ವಿಧಾನ ಪರಿಷತ್ ಸದಸ್ಯರಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದರು ಎಂದು ತಿಳಿಸಿದರು.

2014ರ ಲೋಕಸಭಾ ಚುನಾವಣೆಯಲ್ಲಿ ನನಗೆ 4.09 ಲಕ್ಷ ಮತ ದೊರಕಿತ್ತು. ಆವರೆಗೆ 3.5 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದ ದೇವೇಗೌಡರ ಗೆಲುವನ್ನು ಕೇವಲ 1ಲಕ್ಷಕ್ಕಿಳಿಸಿದೆ. ಅವರು ಕೇವಲ 52 ಸಾವಿರ ಮತಗಳ ಮುನ್ನಡೆಯಲ್ಲಿ ಮಾತ್ರ ಗೆದ್ದರು. ಪ್ರಸ್ತುತದ ಚುನಾವಣೆಯಲ್ಲಿ ಎಲ್ಲರೂ ಬಿಜೆಪಿ ಬೆಂಬ ಲಿಸುವ ಮೂಲಕ ದೇಶದ ಹೊಸ ಇತಿಹಾಸ ಬರೆಯು ತ್ತಿರುವ 130 ಕೋಟಿ ಜನರ ಕಣ್ಮಣಿ ಮೋದಿಯವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಸೇರುವ ಮೊದಲು ನನ್ನ ಕ್ಷೇತ್ರದ ಜನರು, ಮುಖಂಡರೊಂದಿಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಂಡಿದ್ದೇನೆ. ಈಗ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕು. ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ 24 ಗಂಟೆಗಳಲ್ಲಿ ಬಿಎಸ್‍ವೈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಅದಕ್ಕಾಗಿ ಎಲ್ಲರೂ ಬಿಜೆಪಿ ಬೆಂಬಲಿಸಬೇಕು ಎಂದರು.

ಮೇಲ್ಮಟ್ಟದಲ್ಲಿ ಕಾಂಗ್ರೆಸ್ ನಾಯಕರು, ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಬಹುದು. ಆದರೆ ತಳಮಟ್ಟದ ಕಾರ್ಯಕರ್ತರು ರಾಜಿ ಯಾಗುವುದಿಲ್ಲ. ಮೊಕದ್ದಮೆ ಹೂಡಿ ಅವರಿಗೆ ಕಿರುಕುಳ ಕೊಟ್ಟಿರುವುದನ್ನು ಅವರು ಮರೆಯುವು ದಿಲ್ಲ. ಜಿಲ್ಲೆಯಲ್ಲಿ ಶೇ. 70ರಷ್ಟು ಮತದಾರರು ದೇವೇಗೌಡರ ಕುಟುಂಬದ ವಿರುದ್ಧವಾಗಿದ್ದಾರೆ. ಎಲ್ಲಾ ತಾಲೂಕುಗಳಲ್ಲಿರುವ ಕಾಂಗ್ರೆಸ್ ಮತದಾರರು ಇದನ್ನು ಅರ್ಥ ಮಾಡಿ ಕೊಂಡು ನಮಗೆ ಬೆಂಬಲ ನೀಡಬೇಕು ಎಂದರು.

ಸಿಎಂರಿಂದ ಅಂಬರೀಷ್ ಕೊಡುಗೆ ಪ್ರಶ್ನೆ: ಬಿಎಸ್‍ವೈ

ಚಿತ್ರನಟ ಅಂಬರೀಷ್ ಬದುಕಿದ್ದಾಗ ಹೊಗಳು ತ್ತಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಈಗ ಅವರ ಕೊಡುಗೆ ಬಗ್ಗೆಯೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂ ರಪ್ಪ ವಾಗ್ದಾಳಿ ನಡೆಸಿದರು. ಎ.ಮಂಜು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಎ.ಮಂಜು ಪರ ಅಲೆ ನೋಡಿದಾಗ ನನಗೆ ಆಶ್ಚರ್ಯ ಆಯಿತು. ನಾವು ಬೇರೆ ಜಿಲ್ಲೆಯ ಜನರನ್ನು ತಂದಿಲ್ಲ. ಆದರೆ, ದೇವೇ ಗೌಡರು ತುಮಕೂರಿನಲ್ಲಿ ನಾಮಪತ್ರ ಸಲ್ಲಿಸುವಾಗ ಬೇರೆ ಬೇರೆ ಜಿಲ್ಲೆಯ ಜನರ ಕರೆಸಿ, ಕೆಲಸ ಮಾಡಿದ್ದಾರೆ ಎಂದರು.

ನನಗೆ ವಿಶ್ವಾಸ ಇದೆ. ಈ ಬಾರಿ ಮೋದಿ ಗಾಳಿ ಯಿಂದ ದೇಶದಲ್ಲಿ ಮುನ್ನೂರಕ್ಕೂ ಹೆಚ್ಚು, ರಾಜ್ಯದಲ್ಲಿ ಇಪ್ಪತ್ತೆರಡಕ್ಕೂ ಹೆಚ್ಚು ಸ್ಥಾನ ಗಳಿಸುತ್ತೇವೆ. ಕುಟುಂಬ ರಾಜಕಾರಣವನ್ನು ಜನ ಸಹಿಸಲ್ಲ. ಅಂಬರೀಷ್ ಬದುಕಿದ್ದಾಗ ಹೊಗಳಿದ ಕುಮಾರಸ್ವಾಮಿ, ಈಗ ಅಂಬರೀಷ್ ಕೊಡುಗೆ ಬಗ್ಗೆ ಪ್ರೆಶ್ನೆ ಮಾಡುತ್ತಿದ್ದಾರೆ. ಇದು ಅವರಿಗೆ ತಿರುಗುಬಾಣ ಆಗಲಿದೆ. ಹಾಸನ ಜಿಲ್ಲೆಯಲ್ಲೂ ಅವರ ತುಘಲಕ್ ದರ್ಬಾರು ಇದೆ. ಇದನ್ನು ಸಹಿಸದ ಜನ ಬಿಜೆಪಿಗೆ ಮತ ಹಾಕುತ್ತಾರೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ನಂತರ ಸರ್ಕಾರ ಉರು ಳಲಿದೆ, ಕಾದು ನೋಡಿ ಎಂದು ಭವಿಷ್ಯ ನುಡಿದ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ವಿಚಾರ ವಾಗಿ ಕಾದು ನೋಡಿ ಏನು ಬೇಕಾದರೂ ಆಗಬ ಹುದು. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಭಿನ್ನಾ ಭಿಪ್ರಾಯ ತಾರಕಕ್ಕೇರಲಿದೆÉ. ಆಪರೇಷನ್ ಇಲ್ಲ. ಆದರೆ, ಇಪ್ಪತ್ತು ಜನ ಕಾಂಗ್ರೆಸ್ ಶಾಸಕರ ಅಸಮಾಧಾನದ ಬಗ್ಗೆ ನೀವೇ ತೋರಿಸಿದ್ದೀರಾ. ಇದೆಲ್ಲ ಆಗುತ್ತದೆ. ಸ್ವಲ್ಪ ತಾಳ್ಮೆಯಿಂದ ಕಾಯಿರಿ. ರಾಜ್ಯದಲ್ಲಿ ನಾವು 22 ಸ್ಥಾನ ಗೆದ್ದ ನಂತರ ಏನು ಬೇಕಾದರೂ ಆಗಬಹುದು ಎಂದರು.

Translate »