ಪೌರಕಾರ್ಮಿಕ ದಂಪತಿಗೆ ಎ.ಮಂಜು ಪಾದಪೂಜೆ
ಹಾಸನ

ಪೌರಕಾರ್ಮಿಕ ದಂಪತಿಗೆ ಎ.ಮಂಜು ಪಾದಪೂಜೆ

March 25, 2019

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಎ.ಮಂಜು ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಹಳೆ ಮಟನ್ ಮಾರ್ಕೆಟ್ ವೃತ್ತ ಕೃಷ್ಣ ಆಸ್ಪತ್ರೆ ಹಿಂಭಾಗ ಇರುವ ಪೌರಕಾರ್ಮಿಕರ ಮನೆಗೆ ಭೇಟಿ ನೀಡಿ ಪೌರ ಕಾರ್ಮಿಕ ದಂಪತಿಗಳಾದ ಚಂದ್ರು ಹಾಗೂ ಅಶ್ವಿನಿ ಅವರಿಗೆ ಪಾದ ಪೂಜೆ ಮಾಡಿದರು.

ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಇದೇ ರೀತಿ ಪೌರ ಕಾರ್ಮಿಕರ ಪಾದ ತೊಳೆದಿದ್ದರು. ಅವರನ್ನೇ ನಾನು ಕೂಡ ಹಿಂಬಾಲಿಸುತ್ತಿದ್ದು, ಅವರ ಆದರ್ಶಗಳನ್ನು ಪಾಲಿಸುತ್ತಿದ್ದೇನೆ ಎಂದರು.

Translate »