ಶಾಸಕ ಶಿವಲಿಂಗೇಗೌಡರ ವಿರುದ್ಧ ಕ್ರಮಕ್ಕೆ ಆಗ್ರಹ
ಹಾಸನ

ಶಾಸಕ ಶಿವಲಿಂಗೇಗೌಡರ ವಿರುದ್ಧ ಕ್ರಮಕ್ಕೆ ಆಗ್ರಹ

March 25, 2019

ಅರಸೀಕೆರೆ: ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ.ಶಿವ ಲಿಂಗೇಗೌಡರ ಅವರು ಪ್ರಧಾನಿ ಮೋದಿ ಹೆಸರೇಳಿಕೊಂಡು ಬರುವ ಬಿಜೆಪಿ ಕಾರ್ಯ ಕರ್ತರಿಗೆ ಕಪಾಳ ಮೋಕ್ಷ ಮಾಡಿ ಎಂದು ದೈಹಿಕ ಹಲ್ಲೆಗೆ ಪ್ರಚೋದನೆ ಹೇಳಿಕೆ ನೀಡಿ ದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಾಸನ ಜಿಲ್ಲಾ ಬಿಜೆಪಿ ವಕ್ತಾರ ಮತ್ತು ವಕೀಲ ಎನ್.ಡಿ.ಪ್ರಸಾದ್ ನೇತೃತ್ವದಲ್ಲಿ ಕಾರ್ಯ ಕರ್ತರು ಸಹಾಯಕ ಚುನಾವಣಾಧಿಕಾರಿ ಮಂಜುನಾಥ್ ಅವರ ಮೂಲಕ ಚುನಾ ವಣಾ ಆಯೋಗಕ್ಕೆ ಮನವಿ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾ ಡಿದ ಎನ್.ಡಿ.ಪ್ರಕಾಶ್, ಓರ್ವ ಚುನಾಯಿತ ಪ್ರತಿನಿಧಿಯಾಗಿ ಚುನಾವಣೆಯ ನೀತಿ ಸಂಹಿತೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಮಹತ್ವವನ್ನು ತಿಳಿದು ಗೌರವಯುತ ವಾಗಿ ನಡೆದುಕೊಳ್ಳಬೇಕು. ತಮ್ಮ ಇತಿಮಿತಿ ಯನ್ನು ಮೀರಿ ಇಂತಹ ಗೂಂಡಾಗಿರಿಯ ಪ್ರಚೋದನಾತ್ಮಕ ಹೇಳಿಕೆಯನ್ನು ಶಾಸಕ ಶಿವಲಿಂಗೇಗೌಡ ಅವರು ನೀಡಿದ್ದಾರೆ. ಈ ಹೇಳಿಕೆಯಿಂದÀ ಜಿಲ್ಲೆ ಸೇರಿದಂತೆ ರಾಜ್ಯ ದಲ್ಲಿ ಶಾಂತಿ ಮತ್ತು ನ್ಯಾಯ ಸಮ್ಮತ ಚುನಾ ವಣೆ ನಡೆಯಲು ಕಂಟಕ ಪ್ರಾಯವಾಗಿದೆ. ಇದರಿಂದ ಸಂವಿಧಾನಕ್ಕೆ ಅಪಮಾನ ಮಾಡಿ ದಂತಾಗಿದೆ ಎಂದು ದೂರಿದರು.

ಚುನಾವಣಾ ನೀತಿ ಸಂಹಿತೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಶಾಸಕರ ವಿರುದ್ಧ ಚುನಾ ವಣಾಧಿಕಾರಿಗಳು ಸುಮೋಟೋ ಪ್ರಕರಣ ವನ್ನು ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಬೇಕು. ಇದಕ್ಕೆ ತಪ್ಪಿದಲ್ಲಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದು ಶಾಸಕರ ಗೂಂಡಾಗಿರಿಯ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡರನ್ನು ಹಾಗೂ ಕಾರ್ಯ ಕರ್ತರನ್ನು ರಾಜಕೀಯವಾಗಿ ಮುಗಿಸಲು ಪೂರ್ವಭಾವಿ ಷಡ್ಯಂತರವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಸಂಚು ಮಾಡಿಕೊಂಡಿದೆ. ಈಗಾಗಲೇ ಮೈತ್ರಿ ಸರ್ಕಾರ ಗೂಂಡಾಗಿರಿಯ ಸಂಸ್ಕøತಿ ಮತ ದಾರರು ಮತ್ತು ಸಾರ್ವಜನಿಕರ ಮುಂದೆ ಬಹಿರಂಗವಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಮನೋಜ್‍ಕುಮಾರ್, ನೂತನ ನಗರಸಭೆ ಸದಸ್ಯ ಸಿ.ಗಿರೀಶ್ ಹಾಗೂ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ನಿರ್ಮಲ್ ಜೈನ್ ಉಪಸ್ಥಿತರಿದ್ದರು.

Translate »