ಸುಮಲತಾ ಅಂಬರೀಶ್ ಪರವಾಗಿ ನಿಂತಿರುವ 6 ಯುವ ಕಾಂಗ್ರೆಸ್ ಪದಾಧಿಕಾರಿಗಳ ಉಚ್ಚಾಟನೆ
ಮೈಸೂರು

ಸುಮಲತಾ ಅಂಬರೀಶ್ ಪರವಾಗಿ ನಿಂತಿರುವ 6 ಯುವ ಕಾಂಗ್ರೆಸ್ ಪದಾಧಿಕಾರಿಗಳ ಉಚ್ಚಾಟನೆ

March 25, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ನಿಂತಿರುವ ಯುವ ಕಾಂಗ್ರೆಸ್ ಪದಾಧಿಕಾರಿಗಳ ಉಚ್ಛಾಟನೆ ಪರ್ವ ಮುಂದುವರೆದಿದೆ.ನಿನ್ನೆ ಇಂಡುವಾಳು ಸಚ್ಚಿದಾನಂದ, ಹನಕೆರೆ ಶಶಿಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದ ಕಾಂಗ್ರೆಸ್, ಇಂದು ಕೂಡ ಯುವ ಕಾಂಗ್ರೆಸ್‍ನ 6 ಪದಾಧಿಕಾರಿಗಳನ್ನು ಉಚ್ಚಾಟನೆ ಮಾಡಿ ಯುವ ಕಾಂಗ್ರೆಸ್ಸಿನ ರಾಜ್ಯ ಕಾರ್ಯದರ್ಶಿ ಗೀತಾ ರಾಜಣ್ಣ ಆದೇಶ ಹೊರಡಿಸಿದ್ದಾರೆ.

ಯುವ ಕಾಂಗ್ರೆಸ್‍ನ ಜಿಲ್ಲಾ ಉಪಾಧ್ಯಕ್ಷ ಅರವಿಂದ್ ಕುಮಾರ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್, ನಾಗಮಂಗಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶರತ್ ರಾಮಣ್ಣ, ಮಂಡ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿಜಯ್ ಕುಮಾರ್, ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಕೃಷ್ಣೇಗೌಡ ಮತ್ತು ಮಳವಳ್ಳಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮಹದೇವ ಪ್ರಸಾದ್ ಅವರನ್ನು ಉಚ್ಚಾಟನೆ ಮಾಡಲಾಗಿದೆ.

ಶುಕ್ರವಾರ ಮುಖಂಡ ಹಿಂಡವಾಳು ಸಚ್ಚಿದಾನಂದ ಅವರನ್ನು ಉಚ್ಚಾಟನೆ ಮಾಡ ಲಾಗಿತ್ತು. ಉಚ್ಚಾಟನೆಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚ್ಚಿದಾನಂದ, ನನ್ನಂತಹ ಲಕ್ಷಾಂತರ ಕಾರ್ಯಕರ್ತರು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತಾರೆ. ಅವರನ್ನೂ ಉಚ್ಚಾಟನೆ ಮಾಡಿ ಪಕ್ಷಕ್ಕೆ ಬೀಗ ಜಡಿಯುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಪಕ್ಷದಿಂದ ನನ್ನ ಉಚ್ಚಾಟನೆ ಮಾಡಿರುವುನ್ನು ಸ್ವಾಗತಿಸುತ್ತೇನೆ. ಇಂತಹ ದಬ್ಬಾಳಿಕೆಗೆಲ್ಲಾ ನಾವು ಕೇರ್ ಮಾಡಲ್ಲ. ಆದರೆ ಜೆಡಿಎಸ್‍ನವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರಲ್ಲ ಅವರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತೀರಾ? ಕಾಂಗ್ರೆಸ್ ಕಾರ್ಯಕರ್ತರು ತೊಂದರೆ ಅನುಭವಿಸುತ್ತಿದ್ದಾಗ ರಾಜ್ಯದ ಯಾವ ನಾಯಕರೂ ಸಹಾಯಕ್ಕೆ ಬರುವುದಿಲ್ಲ. ಆದರೆ ಜೆಡಿಎಸ್‍ನವರಿಗೆ ತೊಂದರೆ. ಆದರೆ ಅವರ ಕುಟುಂಬವೇ ಬಂದು ಆತ್ಮಸ್ಥೈರ್ಯ ತುಂಬುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಅನಾಥರಾಗಿದ್ದಾರೆ ಎಂದು ಸಚ್ಚಿದಾನಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಇಡೀ ಸಮಸ್ತ ಮಂಡ್ಯ ಜನತೆ ಸ್ವಾಭಿಮಾನಕ್ಕೆ ಬೆಲೆ ಕೊಡಲಿದ್ದಾರೆ. ಜೆಡಿಎಸ್‍ಗೆ ಬುದ್ಧಿ ಕಲಿಸಲಿದ್ದಾರೆ. ಸುಲಮತಾ ಅವರ ಗೆಲುವ ಶತಸಿದ್ಧ. ಈ ವಿಷಯ ತಿಳಿದು ಹತಾಶರಾಗಿರುವ ಜೆಡಿಎಸ್‍ನವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಉಚ್ಚಾಟನೆಯ ಅಸ್ತ್ರ ಪ್ರಯೋಗಿಸಲು ಕಾರಣವಾಗಿದೆ ಎಂದಿದ್ದಾರೆ.

Translate »