ಜಾಗತಿಕ ವಿದ್ಯಮಾನಗಳನ್ನಾಧರಿಸಿ  ಭಾರತ ತನ್ನ ಪ್ರಭಾವ ವೃದ್ಧಿಸಿಕೊಳ್ಳಬೇಕಿದೆ
ಮೈಸೂರು

ಜಾಗತಿಕ ವಿದ್ಯಮಾನಗಳನ್ನಾಧರಿಸಿ ಭಾರತ ತನ್ನ ಪ್ರಭಾವ ವೃದ್ಧಿಸಿಕೊಳ್ಳಬೇಕಿದೆ

March 25, 2019

ಮೈಸೂರು: ಪ್ರಸ್ತುತ ಜಾಗತಿಕ ವಿದ್ಯಮಾನಗಳನ್ನು ಅವಲೋ ಕಿಸಿ ವಿಶ್ವ ಮಟ್ಟದಲ್ಲಿ ಭಾರತ ತನ್ನ ಪ್ರಭಾವ ವೃದ್ಧಿಸಿಕೊಳ್ಳಲು ಒತ್ತು ನೀಡಬೇಕಿದೆ ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾನಿಲಯದ (ಜೆಎನ್‍ಯು) ಪಶ್ಚಿಮ ಏಷ್ಯಾ ಅಧ್ಯಯನ ಕೇಂದ್ರದ ಮಾಜಿ ಅಧ್ಯಕ್ಷ ಪ್ರೊ. ಎ.ಕೆ.ಪಾಷ ಅಭಿಪ್ರಾಯಪಟ್ಟರು.

ಮೈಸೂರಿನ ಮಹಾರಾಜ ಕಾಲೇಜಿನ ಸ್ನಾತಕೋತ್ತರ ಪದವಿಯ ಅಂತಾರಾಷ್ಟ್ರೀಯ ಸಂಬಂಧಗಳು ವಿಭಾಗ, ವಿದ್ಯಾವರ್ಧಕ ಕಾನೂನು ಕಾಲೇಜು, ಆಡಳಿತ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ `ಭಾರತೀಯ ವಿದೇಶಾಂಗ ನೀತಿ: 21ನೇ ಶತ ಮಾನದಲ್ಲಿ ನಿರಂತರತೆ ಮತ್ತು ಬದಲಾ ವಣೆ’ ಕುರಿತಂತೆ ಸೋಮವಾರ ಹಮ್ಮಿಕೊಂ ಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪಾರಂಪರಿಕ ಗುಣಗಳೊಂದಿಗೆ ಭಾರತ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳುವ ವಿದೇ ಶಾಂಗ ನೀತಿ ಅಳವಡಿಸಿಕೊಂಡಿದೆ. ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ತಮ್ಮ ವಿದೇಶಾಂಗ ನೀತಿಯಲ್ಲಿ ಭಾರತದ ಪ್ರಾಚೀನ ಮೌಲ್ಯಗಳನ್ನು ಪ್ರತಿಪಾದಿಸಿ ದರು. ಸೋವಿಯತ್ ಒಕ್ಕೂಟದೊಂದಿಗೆ ಭಾರತ ಹೊಂದಿದ್ದ ಉತ್ತಮ ಸೌಹಾರ್ದ ಶೀತಲ ಸಮರದ ಬಳಿಕ ಕ್ಷೀಣವಾಯಿತು. ಅನಂತರ ಭಾರತವೂ ತನ್ನ ವಿದೇಶಾಂಗ ನೀತಿಯಲ್ಲಿ ಅಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಂಡಿತು ಎಂದು ತಿಳಿಸಿದರು.

ಭಾರತವು 1991ರ ಬಳಿಕ ಆರ್ಥಿಕ ಸುಧಾರಣೆಗೆ ಒತ್ತು ನೀಡಿದ್ದು, ಇದಕ್ಕೆ ಪೂರಕವಾಗಿ ಇಸ್ರೇಲ್‍ನೊಂದಿಗೆ ರಾಜ ತಾಂತ್ರಿಕ ಸಂಬಂಧಕ್ಕೆ ಆದ್ಯತೆ ನೀಡಿದೆ. ಅಮೆರಿಕದೊಂದಿಗೆ ಸಂಬಂಧ ವೃದ್ಧಿಸ ಲಾಗುತ್ತಿದ್ದು, ಇದು ದೇಶ ಬಲಿಷ್ಠಗೊಳ್ಳಲು ಹಾಗೂ ಭವಿಷ್ಯದ ದೃಷ್ಟಿಯಿಂದ ಮಹತ್ವ ದ್ದಾಗಿದೆ. ವಿದೇಶಾಂಗ ನೀತಿಯಲ್ಲೇ ಭಾರತ ವೊಂದು ಪ್ರಜಾಸತ್ತಾತ್ಮಕ ಹಾಗೂ ಜಾತ್ಯಾ ತೀತ ರಾಷ್ಟ್ರವಾಗಿ ಅನಾವರಣಗೊಳ್ಳುತ್ತದೆ. 1950ರಿಂದ 70ರ ಅವಧಿಯಲ್ಲಿ ಭಾರತ ಜಾಗತಿಕವಾಗಿ ಪ್ರಭಾವಶಾಲಿ ಆಗಿಲ್ಲದಿದ್ದರೂ ಆ ಸಂದರ್ಭದಲ್ಲಿ ಹಲವು ಅಂತಾ ರಾಷ್ಟ್ರೀಯ ಸಂಘರ್ಷಗಳನ್ನು ನಿವಾರಿಸು ವಲ್ಲಿ ತನ್ನ ಕೊಡುಗೆ ನೀಡಿದೆ ಎಂದರು.

ಭಾರತದ ವಿದೇಶಾಂಗ ನೀತಿಯಲ್ಲಿ ದೇಶದ ಇತಿಹಾಸ, ಸಂಸ್ಕøತಿ ಹಾಗೂ ನಾಗರಿಕತೆ ಪ್ರತಿಬಿಂಬ ಕಾಣಬಹುದು. ಹೀಗಾಗಿ ಭಾರತೀಯ ನೀತಿ ನಿರೂಪ ಕರು, ರಾಜತಾಂತ್ರಿಕರು ಭಾರತವನ್ನಷ್ಟೇ ಪ್ರತಿನಿಧಿಸದೆ ಇಡೀ ಭಾರತದ ನಾಗರಿಕತೆ ಯನ್ನೇ ಪ್ರತಿನಿಧಿಸುತ್ತಾರೆ. ಭಾರತೀಯ ರಾಯಭಾರಿಗಳು ಉತ್ತಮ ಕೌಶಲ ಉಳ್ಳವ ರಾಗಿದ್ದು, ಭಾರತವನ್ನು ಇಡೀ ವಿಶ್ವದ ಆಭರಣ ಎಂದು ಬಣ್ಣಿಸಲಾಗಿದೆ. ಭಾರತ ವಿಜ್ಞಾನ, ಜ್ಯೋತಿಷ್ಯಶಾಸ್ತ್ರ, ಖಗೋಳಶಾಸ್ತ್ರ ಹಾಗೂ ತತ್ವಶಾಸ್ತ್ರಗಳಲ್ಲಿ ಪ್ರಖ್ಯಾತಿ ಹೊಂದಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ 100 ರೂ. ಹಾಗೂ ಬೋಧಕರು ಹಾಗೂ ಸಂಶೋಧಕರಿಗೆ 200 ರೂ. ನೋಂದಣಿ ಶುಲ್ಕ ನಿಗದಿ ಮಾಡಲಾಗಿತ್ತು. 50ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತಕುಮಾರ್ ಉದ್ಘಾಟಿಸಿದರು. ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನಿತಾ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಭಾರತದ ಅಂತಾರಾಷ್ಟ್ರೀಯ ಕೇಂದ್ರದ ನಿವೃತ್ತ ನಿರ್ದೇಶಕ ಎ.ಮಾಧವನ್, ಮಹಾರಾಜ ಕಾಲೇಜಿನ ಸ್ನಾತಕೋತ್ತರ ಪದವಿಯ ಅಂತಾರಾಷ್ಟ್ರೀಯ ಸಂಬಂಧ ಗಳು ವಿಭಾಗದ ಸಂಯೋಜಕಿ ಡಾ. ಭಾರತಿ ಹೀರೆಮಠ್ ಹಾಜರಿದ್ದರು.

Translate »