ಆಟ್ರ್ಜ್ ಗ್ಯಾಲರಿಯಲ್ಲಿ ವೈವಿಧ್ಯತೆಯಿಂದ  ಕೂಡಿದ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ
ಮೈಸೂರು

ಆಟ್ರ್ಜ್ ಗ್ಯಾಲರಿಯಲ್ಲಿ ವೈವಿಧ್ಯತೆಯಿಂದ ಕೂಡಿದ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ

March 25, 2019

ಮೈಸೂರು: ಮೈಸೂರಿನ ಗೋಕುಲಂ 3ನೇ ಹಂತದಲ್ಲಿ ರುವ ಆಟ್ರ್ಜ್ ಗ್ಯಾಲರಿಯಲ್ಲಿ ವೈವಿಧ್ಯ ಮಯ ಕಲಾಕೃತಿಗಳ ಅನಾವರಣವಾಗಿದೆ.

ಕಲಾವಿದರು ಹಾಗೂ ಕಲಾಸಕ್ತರನ್ನು ಒಗ್ಗೂಡಿಸುವುದರೊಂದಿಗೆ ಕಲೆಯನ್ನು ಪೋಷಿಸುವ ಮಹತ್ವದ ಉದ್ದೇಶದಿಂದ ಏರ್ಪಡಿಸಲಾಗಿರುವ `ಮಾರ್ಚ್ ಕಲಾ ಪ್ರದರ್ಶನ’ದಲ್ಲಿ ವಿವಿಧ ಸೃಜನಾತ್ಮಕ ಕಲಾವಿದರ ಮನಮೋಹಕ ಚಿತ್ರಕತೆ, ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಇಂದಿನಿಂದ ಏ.13ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಕಲಾ ಸೊಬ ಗನ್ನು ಕಣ್ತುಂಬಿಕೊಳ್ಳಬಹುದಾಗಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಕಲಾವಿದರ ಮನದಾಳ: ಕಣ್ಣಿಗೆ ಕಂಡದ್ದು, ಎಲ್ಲೋ ಕೇಳಿದ್ದು, ಮನದಲ್ಲಿ ಮೂಡಿ ದ್ದನ್ನು ಸಾಹಿತಿಗಳು ಅಕ್ಷರದಲ್ಲಿ ತಿಳಿಸಿದರೆ, ಕಲಾವಿದರು ಚಿತ್ರಕಲೆ, ಕಲಾಕೃತಿಗಳ ಮೂಲಕ ಸಮಾಜಕ್ಕೆ ಒಪ್ಪಿಸುತ್ತಾರೆ. ಹಾಗೆಯೇ ಆಟ್ರ್ಜ್ ಗ್ಯಾಲರಿಯಲ್ಲಿರುವ ಒಂದೊಂದು ಚಿತ್ರ ಹಾಗೂ ಕಲಾಕೃತಿ ನೋಡುಗರಲ್ಲಿ ವಿಭಿನ್ನ ಭಾವನೆಗಳನ್ನು ಮೂಡಿಸುತ್ತವೆ. ಹಾಸನ ಜಿಲ್ಲೆ, ಹಳೇ ಬೀಡಿನಲ್ಲಿರುವ ಗಣಪತಿ ಮೂರ್ತಿಯನ್ನು ಕಲಾವಿದ ಕೆ.ಸಿ.ಮಹದೇವ ಶೆಟ್ಟಿ ಬೃಹತ್ ಕ್ಯಾನ್ವಾಸ್ ಮೇಲೆ ಪಡಿಮೂಡಿಸಿರು ವುದು ಆಕರ್ಷಕವಾಗಿದೆ.

ತೊಗಲುಗೊಂಬೆ ಕಲೆಯಿಂದ ಪ್ರೇರೇ ಪಿತರಾದ ಎಂ.ಎಲ್. ಮಾಧವಿ ಅವರು ಪೌರಾಣಿಕ ಪ್ರಸಂಗದ ಜೊತೆಗೆ ಕಾಲಾಂ ತರದಲ್ಲಾಗುವ ಬದಲಾವಣೆಯನ್ನು ಚಿತ್ರ ಕಲೆಯಲ್ಲಿ ಮನ ಮುಟ್ಟಿಸಿದ್ದಾರೆ. ಟಿಪ್ಪು ಸುಲ್ತಾನ್ ಕತ್ತಿ ಹಿಡಿದು ಹುಲಿಯೊಂದಿಗೆ ಕಾದಾಡುವ, ಬೇಟೆ ನಾಯಿ ದಾಳಿ ನಡೆಸುವ ಚಿತ್ರಗಳ ಜೊತೆಗೆ ಬಂದೂಕಿನ ಚಿತ್ರವನ್ನು ಬಿಡಿಸುವ ಮೂಲಕ ಬದ ಲಾವಣೆಯನ್ನು ತಿಳಿಸಿಕೊಟ್ಟಿದ್ದಾರೆ. ತ್ರೇತಾ ಯುಗದ ರಾವಣ, ಸೀತಾಮಾತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟಿದ್ದ ಪ್ರಸಂಗವನ್ನು ಬಿಂಬಿಸುವ `ಅಶೋಕ ವಾಟಿಕಾ’ ಶೀರ್ಷಿಕೆಯುಳ್ಳ ಮತ್ತೊಂದು ಚಿತ್ರ ಕಣ್ಮನ ಸೆಳೆಯುತ್ತದೆ.

ರಂಗಣ್ಣ ತಾತನ ಭಾವಶಿಲ್ಪ: ಕಲಾವಿದ ವೀರಣ್ಣ ಎಂ.ಅರ್ಕಸಾಲಿ ನಿರ್ಮಿಸಿರುವ ರಂಗಣ್ಣ ತಾತನ ಭಾವಶಿಲ್ಪ ನೋಡಿದವರ ಮನಸ್ಸಿನಲ್ಲಿ ಇದರ ಬಗ್ಗೆ ತಿಳಿಯಬೇಕೆಂಬ ಕುತೂಹಲ ಕಾಡುತ್ತದೆ. ಬೆಂಗಳೂರಿನ ಚಿತ್ರ ಕಲಾ ಪರಿಷತ್ತಿನ 90ರ ದಶಕದ ವಿದ್ಯಾರ್ಥಿ ಗಳಿಗೆ ರಂಗಣ್ಣ ತಾತನ ಬಗ್ಗೆ ತಿಳಿದಿರು ತ್ತದೆ. ನೂರಾರು ವಿದ್ಯಾರ್ಥಿಗಳು ರಂಗಣ್ಣ ತಾತನನ್ನು ಕೂರಿಸಿಕೊಂಡು ಅವರ ಚಿತ್ರ ಬಿಡಿಸಿದ್ದಾರೆ, ಭಾವಶಿಲ್ಪ ನಿರ್ಮಿಸಿದ್ದಾರೆ. ಇವರಲ್ಲಿ ಒಬ್ಬರಾದ ವೀರಣ್ಣ ತಾವು ನಿರ್ಮಿಸಿರುವ ಭಾವಶಿಲ್ಪವನ್ನು ಸಂರಕ್ಷಿ ಸಿಟ್ಟುಕೊಂಡಿದ್ದು, ಇದೀಗ ಆಟ್ರ್ಜ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ನಿವೃತ್ತ ಸೈನಿಕರಾಗಿದ್ದ ರಂಗಣ್ಣ ತಾತ ಒಬ್ಬಂಟಿಗ ರಾಗಿದ್ದರು. ಇಳಿ ವಯಸ್ಸಿನಲ್ಲಿ ಚಿತ್ರಕಲಾ ಪರಿಷತ್‍ನ ಆವರಣವೇ ಅವರ ಮನೆ ಯಾಗಿತ್ತು. ವಿದ್ಯಾರ್ಥಿಗಳೇ ಸಂಬಂಧಿ ಗಳಾಗಿದ್ದೆವು. ಅಜಾನುಬಾಹುವಾಗಿದ್ದ ಅವರಿಗೆ ವಯಸ್ಸಾಗಿದ್ದರೂ ಜೀವನೋ ತ್ಸಾಹ ಕುಗ್ಗಿರಲಿಲ್ಲ. ಎಲ್ಲರೊಂದಿಗೆ ಅವಿನಾ ಭಾವ ಸಂಬಂಧ ಬೆಸೆದಿದ್ದರು. ವಿದ್ಯಾರ್ಥಿ ಯಾಗಿದ್ದಾಗ ನಿರ್ಮಿಸಿದ್ದ ರಂಗಣ್ಣ ತಾತನ ಭಾವಶಿಲ್ಪವನ್ನು ಕಾಪಾಡಿಕೊಂಡಿದ್ದೇನೆ ಎಂದು ವೀರಣ್ಣ ಸ್ಮರಿಸಿಕೊಂಡರು.

ಡಾ.ರಾಜ್‍ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ ಸಂದರ್ಭವನ್ನು `ಯಾರಿಂದ ಯಾರಿಗೆ ಬಿಡುಗಡೆ’ ಶೀರ್ಷಿಕೆಯಡಿ ಬಸವರಾಜ್ ಮುಸವಾಳ್ಗಿ ಚಿತ್ರಿಸಿರುವುದು ಚಿಂತನೆಗೆ ಹಚ್ಚುವಂತಿದೆ. ವಿ.ಜಿ.ಶ್ರೀಧರ್ ಕ್ಯಾಮರಾದಲ್ಲಿ ಸೆರೆಹಿಡಿ ದಿರುವ ಲ್ಯಾನ್ಸ್‍ಡೌನ್, ದೇವರಾಜ ಮಾರು ಕಟ್ಟೆ ಹಾಗೂ ಕೆಎಸ್‍ಆರ್‍ಪಿ ಅಶ್ವಾರೋಹಿ ದಳದ ಕಚೇರಿ ಪಾರಂಪರಿಕ ಕಟ್ಟಡಗಳ ಚಿತ್ರಗಳು ಸೇರಿದಂತೆ ಡಾ.ವಿಠಲರೆಡ್ಡಿ ಚುಲಕಿ, ಕಾವೇರಪ್ಪ, ಶಿವಕುಮಾರ್ ಕೆಸರ ಮಾಡು, ಡಾ.ಬಿ.ಆರ್.ಗೀತಾಂಜಲಿ, ಕೆ. ಸುರೇಶ್, ಎನ್.ಪರಮೇಶ್ವರ, ದಯಾ ನಂದ ನಾಗರಾಜು ಇನ್ನಿತರ ಸೃಜನಶೀಲ ಕಲಾವಿದರ ಚಿತ್ರಕಲೆ ಹಾಗೂ ಕಲಾಕೃತಿ ಗಳು
`ಮಾರ್ಚ್ ಕಲಾ ಪ್ರದರ್ಶನ’ಕ್ಕೆ ಮೆರಗು ನೀಡಿವೆ.

`ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರು 20 ದಿನಗಳ ಈ ಕಲಾ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿದರು. ಮೈಸೂರು ಲಿಟರರಿ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಆಟ್ರ್ಜ್ ಗ್ಯಾಲರಿಯ ಸಂಸ್ಥಾಪಕಿ ಶೋಭಾ ಸುಬ್ಬಯ್ಯ ಮತ್ತಿತ ರರು ಉಪಸ್ಥಿತರಿದ್ದರು.

Translate »