ಬನ್ನೂರು: ಪಟ್ಟಣ ಸಮೀಪದ ತುರಗನೂರಿನ ವಿಸಿ ನಾಲೆಗೆ ತಕ್ಷಣವೇ ನೀರು ಹರಿಸುವಂತೆ ಆಗ್ರಹಿಸಿ ತುರಗನೂರು ರೈತ ಮುಖಂಡರು ಕಾವೇರಿ ನೀರಾವರಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಮುಖಂಡ ಬಿ.ಆರ್.ಮಂಜುನಾಥ್, ತಾಲೂಕಿನ ರೈತರು ನೀರಿಲ್ಲದೇ ಪರದಾಡುವಂತಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ, ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಜನ-ಜಾನುವಾರುಗಳಿಗೆ ಕುಡಿ ಯಲೂ ನೀರಿಲ್ಲದೇ ನಿತ್ಯವೂ ಪರದಾಡುವ ಸ್ಥಿತಿ ಇದೆ. ಇಷ್ಟೆಲ್ಲಾ ಸಮಸ್ಯೆ ಇರುವುದು ಗೊತ್ತಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದರು. ನಿಗಮದ ಅಧಿಕಾರಿಗಳು ಕೂಡಲೇ…
ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಿಗೆ ಶಾಸಕ ರಾಮದಾಸ್ ಶುಭ ಹಾರೈಕೆ
March 22, 2019ಮೈಸೂರು: ರಾಜ್ಯದಾದ್ಯಂತ ಇಂದಿನಿಂದ ಎಸ್‍ಎಸ್ ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ರುವ ಸೇಂಟ್ ಮೇರೀಸ್ ಶಾಲೆಗೆ ಗುರು ವಾರ ಬೆಳಿಗ್ಗೆ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ, ಶುಭಕೋರಿದರು. ಗೊಂದಲ ಹಾಗೂ ಒತ್ತಡಕ್ಕೆ ಒಳಗಾಗದೇ ಪರೀಕ್ಷೆ ಎದುರಿಸುವಂತೆ ಸಲಹೆ ನೀಡಿದರು. ಮೊದಲ ದಿನ ಪ್ರಥಮ ಭಾಷೆಯ ಪರೀಕ್ಷೆ ನಡೆಯಿತು. ಈ ಹಿನ್ನೆಲೆಯಲ್ಲಿ ಕೆಲ ಬೆಂಬ ಲಿಗರೊಂದಿಗೆ ಸೇಂಟ್ ಮೇರೀಸ್ ಶಾಲೆಯ ಬಳಿ ಆಗಮಿಸಿದ ಎಸ್.ಎ.ರಾಮ ದಾಸ್ ಪರೀಕ್ಷಾ…
ಆಕಸ್ಮಿಕ ಬೆಂಕಿ: ಗುಡಿಸಲು ಭಸ್ಮ
March 22, 2019ಮೈಸೂರು: ಮೈಸೂರಿನ ಭಾರತ್ ನಗರದಲ್ಲಿ ಆಕಸ್ಮಿಕ ಬೆಂಕಿ ಯಿಂದ ಗುಡಿಸಲೊಂದು ಭಸ್ಮವಾಗಿದ್ದು, ಈ ಸಂಬಂಧ ಮೈಸೂರು ಗ್ರಾಮಾಂ ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತ್‍ನಗರದ ಸ್ಲಂ ಬೋರ್ಡ್ ಕಾಂಪ್ಲೆಕ್ಸ್ ಸಮೀಪ ಆಟೋ ಚಾಲಕ ಸೈಯ್ಯದ್ ರಫೀಕ್ ಅಹಮದ್ ಕುಟುಂಬ ಗುಡಿಸಲು ನಿರ್ಮಿಸಿಕೊಂಡು ವಾಸವಿತ್ತು. ಮಾ.16 ರಂದು ಸೈಯ್ಯದ್ ಕೆಲಸಕ್ಕೆ ಹೋದ ಬಳಿಕ ಅವರ ಪತ್ನಿ ಮುಬೀನಾ ತಾಜ್ ಗಂಧದ ಕಡ್ಡಿ ವ್ಯಾಪಾರಕ್ಕೆ ತೆರಳಿ ದ್ದರು. ಮಕ್ಕಳು ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಗುಡಿಸಲು ಬೆಂಕಿಗೆ ಆಹುತಿಯಾಗಿದೆ. ಪರಿಣಾಮ…
ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಅಭಿನಂದನಾ ಸಮಾರಂಭ
March 22, 2019ಮೈಸೂರು: ಮೈಸೂರಿನ ಸಂಗೀತ ಮತ್ತು ನೃತ್ಯ ಸಂಸ್ಥೆಗಳ ಒಕ್ಕೂಟದ ವತಿಯಿಂದ ಮಾ. 25ರಂದು ಸಂಜೆ 6.30 ಗಂಟೆಗೆ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂ ಗಣದಲ್ಲಿ ಪದ್ಮಶ್ರೀ ಪುರಸ್ಕøತ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಅಭಿ ನಂದನಾ ಸಮಾರಂಭವನ್ನು ಏರ್ಪಡಿಸ ಲಾಗಿದೆ. ಸಾನ್ನಿಧ್ಯವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಉಸ್ತಾದ್ ಫಯಾಜ್ ಖಾನ್, ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಭಾಗವಹಿಸಲಿದ್ದು, ಕಲಾ ಪೋಷಕರಾದ ಕೆ.ವಿ. ಮೂರ್ತಿ ಅಧ್ಯಕ್ಷತೆ ವಹಿಸುವರು.
ಮಾ.24ರಂದು ವಿಶೇಷ ‘ಸ್ವಾತಿ’ ಪೂಜೆ
March 22, 2019ಮೈಸೂರು: ಮೈಸೂರು ನಗರದ ಜಯಲಕ್ಷ್ಮೀಪುರಂ, ಕಾಳಿದಾಸ ರಸ್ತೆ ಯಲ್ಲಿರುವ ಮೇಲುಕೋಟೆಯ ಯದುಗಿರಿ ಯತಿ ರಾಜ ಮಠದ ಶಾಖಾ ಮಠದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಾ.24ರಂದು ಶ್ರೀ ವಿಳಂಭಿ ನಾಮಸಂವತ್ಸರ, ಶುಕ್ಲ ಪಕ್ಷ, ಪಾಲ್ಗುಣ ಮಾಸ ಭಾನುವಾರ ‘ಸ್ವಾತಿ’ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಶ್ರೀ ಶ್ರೀಯವರ ಆದೇಶಾನುಸಾರ ಅಂದು ಬೆಳಿಗ್ಗೆ 7.30 ಗಂಟೆಗೆ ಮಹಾ ಸುದರ್ಶನ ಸಂಕಲ್ಪ ಹೋಮ, ವಿಶೇಷ ಅಭಿಷೇಕ ಸೇವೆ, ಬೆಳಿಗ್ಗೆ 12.30 ಗಂಟೆಗೆ ಶ್ರೀಯವರಿಗೆ ವಿಶೇಷ ಅಲಂಕಾರ ಸೇವೆ, ಮಧ್ಯಾಹ್ನ 1.00 ಗಂಟೆಗೆ…
ಸುಮಲತಾ ನಾಮಪತ್ರ ಸಲ್ಲಿಕೆ
March 21, 2019ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿ ಸಿದ ಸುಮಲತಾ ಅಂಬರೀಷ್ ಅವರು, ಕಾಂಗ್ರೆಸ್, ರೈತ ಸಂಘದ ಕಾರ್ಯಕರ್ತರು, ಅಂಬರೀಷ್ ಅಭಿಮಾನಿ ಗಳಲ್ಲದೆ ಎಲ್ಲಾ ಸಮಾಜದ ಜನಸಾಗರದ ನಡುವೆ ಬೃಹತ್ ರ್ಯಾಲಿ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು. ಇಂದು ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇ ಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಂಡ್ಯಕ್ಕೆ ಆಗಮಿಸಿದ ಸುಮಲತಾ, ಬೆಳಿಗ್ಗೆ 11.20ರಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು….
ಮಂಡ್ಯ ಜನತೆಗಾಗಿ ನನ್ನ ಸ್ಪರ್ಧೆ
March 21, 2019ಮಂಡ್ಯ: ಅಂಬರೀಷ್ ತಮ್ಮ ಜೀವನದಲ್ಲಿ ಯಾರ ಬಳಿಯೂ ಕೈಚಾಚಿಲ್ಲ. ಶತ್ರುಗಳಿಗೂ ಕೊಡುತ್ತಿದ್ದ ಕೊಡುಗೈ ದಾನಿ ಅವರು. ಆದರೆ ಅವರ ಧರ್ಮಪತ್ನಿಯಾಗಿ ನಾನು ನಿಮ್ಮ ಬಳಿ ಕೈಚಾಚುತ್ತಿದ್ದೇನೆ. ನನ್ನನ್ನು ಆಶೀರ್ವದಿಸಿ. ಜೀವನ ಪೂರ್ತಿ ನಿಮ್ಮ ಸೇವೆ ಮಾಡುತ್ತೇನೆ. ನಿಮ್ಮನ್ನು ಬಿಟ್ಟು ನಾನು ಎಲ್ಲೂ ಹೋಗಲ್ಲ ಎಂದು ಮಂಡ್ಯ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭಾವುಕರಾಗಿ ನುಡಿದರು. ಇಂದು ಬೆಳಿಗ್ಗೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಧ್ಯಾಹ್ನ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ನಡೆದ…
ಶ್ರೀನಿವಾಸಪ್ರಸಾದ್, ಪ್ರತಾಪ್‍ಸಿಂಹ, ಸದಾನಂದಗೌಡ, ಶೋಭಾ ಕರಂದ್ಲಾಜೆ ಸ್ಪರ್ಧಿಸಲು ಅವಕಾಶ
March 21, 2019ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ನೀಡದಿರಲು ನಿರ್ಧರಿಸಿ ರುವ ರಾಷ್ಟ್ರೀಯ ಬಿಜೆಪಿ ತನ್ನ ಅಭ್ಯರ್ಥಿ ಯನ್ನು ಕಣಕ್ಕಿಳಿಸಲು ನಿರ್ಧರಿಸಿರುವುದಲ್ಲದೆ, ಕರ್ನಾಟಕದ ಹಾಲಿ ಎಲ್ಲಾ ಸಂಸದರಿಗೂ ಮತ್ತೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅಧ್ಯಕ್ಷತೆ ಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲೂ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಲ್ಲದೆ, ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಅಧಿಕೃತವಾಗಿ ಪಟ್ಟಿ ಹೊರ…
ಚಾಮುಂಡೇಶ್ವರಿಗೆ ಸುಮಲತಾ ಪೂಜೆ ಸಲ್ಲಿಕೆ
March 21, 2019ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಸುಮಲತಾ ಅಂಬ ರೀಷ್ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಬುಧವಾರ ಬೆಳಿಗ್ಗೆ ಪೂಜೆ ಸಲ್ಲಿಸಿದರು. ನಿನ್ನೆ ತಿರುಪತಿಗೆ ತೆರಳಿ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ವಾಪಸ್ಸಾದ ನಂತರ ಇಂದು ಬೆಳಿಗ್ಗೆ 8.30ಕ್ಕೆ ಚಾಮುಂಡಿ ಬೆಟ್ಟಕ್ಕೆ ಪುತ್ರ ಅಭಿಷೇಕ್ ಹಾಗೂ ನಿರ್ಮಾ ಪಕ ರಾಕ್‍ಲೈನ್ ವೆಂಕಟೇಶ್ ಅವ ರೊಂದಿಗೆ ಆಗಮಿಸಿದ ಸುಮಲತಾ, ಮೊದ ಲಿಗೆ ಗಣಪತಿಗೆ ಪೂಜೆ, ಬಳಿಕ ಚಾಮುಂಡೇ ಶ್ವರಿ ದೇವಿಗೆ ಪೂಜೆ…
ನೀತಿ ಸಂಹಿತೆ ಉಲ್ಲಂಘನೆ 203 ಪ್ರಕರಣ ದಾಖಲು, 1,06,96,362 ರೂ. ಮೌಲ್ಯದ ಮದ್ಯ ವಶ
March 21, 2019ಮೈಸೂರು: ಮಾರ್ಚ್ 10ರಿಂದ 19ರವರೆಗೆ ಮೈಸೂರು ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 203 ಪ್ರಕರಣ ಗಳನ್ನು ದಾಖಲಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 33 ಅಬಕಾರಿ ದಾಳಿ ನಡೆಸಲಾಗಿದ್ದು, 151 ಮಂದಿ ಬಂಧಿಸಿ ಸುಮಾರು 1,06,96,362 ರೂ. ಮೌಲ್ಯದ ಮದ್ಯವನ್ನು ವಶಪಡಿಸಿ ಕೊಳ್ಳಲಾಗಿದೆ. 232 ದ್ವಿಚಕ್ರ ವಾಹನ ಗಳು, 2 ಆಟೋಗಳು ಹಾಗೂ 3 ಕಾರು ಗಳು ಸೇರಿ 14,76,000 ರೂ. ಮೌಲ್ಯದ 28 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ….










