ನೀತಿ ಸಂಹಿತೆ ಉಲ್ಲಂಘನೆ 203 ಪ್ರಕರಣ ದಾಖಲು,  1,06,96,362 ರೂ. ಮೌಲ್ಯದ ಮದ್ಯ ವಶ
ಮೈಸೂರು

ನೀತಿ ಸಂಹಿತೆ ಉಲ್ಲಂಘನೆ 203 ಪ್ರಕರಣ ದಾಖಲು, 1,06,96,362 ರೂ. ಮೌಲ್ಯದ ಮದ್ಯ ವಶ

March 21, 2019

ಮೈಸೂರು: ಮಾರ್ಚ್ 10ರಿಂದ 19ರವರೆಗೆ ಮೈಸೂರು ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 203 ಪ್ರಕರಣ ಗಳನ್ನು ದಾಖಲಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 33 ಅಬಕಾರಿ ದಾಳಿ ನಡೆಸಲಾಗಿದ್ದು, 151 ಮಂದಿ ಬಂಧಿಸಿ ಸುಮಾರು 1,06,96,362 ರೂ. ಮೌಲ್ಯದ ಮದ್ಯವನ್ನು ವಶಪಡಿಸಿ ಕೊಳ್ಳಲಾಗಿದೆ. 232 ದ್ವಿಚಕ್ರ ವಾಹನ ಗಳು, 2 ಆಟೋಗಳು ಹಾಗೂ 3 ಕಾರು ಗಳು ಸೇರಿ 14,76,000 ರೂ. ಮೌಲ್ಯದ 28 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ರೌಡಿಶೀಟರ್‍ಗಳ ಗಡಿಪಾರಿಗೆ ಶಿಫಾರಸು
ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲೆಯ ಹಲವು ಹಳೆಯ ಪ್ರಕರಣದಲ್ಲಿ ಭಾಗಿಯಾಗಿದ್ದ 31 ರೌಡಿಶೀಟರ್‍ಗಳ ಗಡಿಪಾರು ಮಾಡುವಂತೆ ಮೈಸೂರು ಜಿಲ್ಲಾ ವರಿಷ್ಠಾ ಧಿಕಾರಿ ಅಮಿತ್‍ಸಿಂಗ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಶಿಫಾರಸು ಮಾಡಿದ್ದಾರೆ.

ಮೈಸೂರು ಜಿಲ್ಲೆ ಕೆ.ಆರ್.ನಗರದ 8 ಮಂದಿ, ಹುಣಸೂರಿನ 5, ಪಿರಿ ಯಾಪಟ್ಟಣದ 1, ಹೆಚ್.ಡಿ. ಕೋಟೆಯ 2, ನಂಜನಗೂಡು 4, ಟಿ.ನರಸೀಪುರ 7, ಮೈಸೂರು ಗ್ರಾಮಾಂತರ 4 ಮಂದಿ ಸೇರಿದಂತೆ ಒಟ್ಟು 31 ಮಂದಿ ಯನ್ನು ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿ ದ್ದಾರೆ. ವಿಚಾರಣೆ ನಡೆಸಿದ ಜಿಲ್ಲಾಧಿ ಕಾರಿ ಅಭಿರಾಂ ಜಿ.ಶಂಕರ್, ಮಾ. 30ಕ್ಕೆ ತೀರ್ಪು ಮುಂದೂಡಿದ್ದಾರೆ.

Translate »