ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡುವ ಮಾತೇ ಇಲ್ಲ
ಮೈಸೂರು

ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡುವ ಮಾತೇ ಇಲ್ಲ

March 21, 2019

ಮೈಸೂರು: ರಾಜ್ಯ ದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಕಾರ್ಯಕರ್ತರು ಒಂದಾಗು ತ್ತಾರೆ ಎಂಬ ಗ್ಯಾರಂಟಿಯೇ ಇಲ್ಲ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ 1,2,3,4,5 ಮತ್ತು 20ನೇ ವಾರ್ಡ್‍ನ ಬಿಜೆಪಿ ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿದ ಅವರು, ಈಗಾ ಗಲೇ ಜೆಡಿಎಸ್-ಕಾಂಗ್ರೆಸ್ ಪ್ರಬಲವಾ ಗಿದ್ದ ಜಾಗದಲ್ಲಿಯೇ ಕಿತ್ತಾಡಿಕೊಂಡಿ ದ್ದಾರೆ. ಅಧಿಕಾರ ದಾಹದಿಂದ ಹೊಂದಾ ಣಿಕೆ ಮಾಡಿಕೊಂಡಿದ್ದಾರೆ. ಆದರೆ, ಕಾರ್ಯಕರ್ತರ ಮನಸ್ಥಿತಿಯನ್ನು ಬದ ಲಾಯಿಸಲು ಸಾಧ್ಯವಿಲ್ಲ ಎಂದರು.

ಮಂಡ್ಯದಲ್ಲಿ ಕಾಂಗ್ರೆಸ್ ಸುಮಲತಾ ಅಂಬರೀಶ್ ಅವರಿಗೆ ಅನ್ಯಾಯ ಮಾಡಿ ರುವುದರಿಂದ ಅಲ್ಲಿಯ ಕಾಂಗ್ರೆಸ್ ಕಾರ್ಯ ಕರ್ತರು ಜೆಡಿಎಸ್‍ಗೆ ಖಂಡಿತವಾಗಿಯೂ ಬುದ್ಧಿ ಕಲಿಸುತ್ತಾರೆ. ಹಾಗೆಯೇ ಮೈತ್ರಿ ಸರ್ಕಾರದಲ್ಲಿ ರಾಜ್ಯಾದ್ಯಂತ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದರ ಉಪಯೋಗವನ್ನು ಬಿಜೆಪಿ ಪಡೆಯಲಿದೆ ಎಂದು ತಿಳಿಸಿದರು.

ದೇಶ ಮತ್ತು ರಾಜ್ಯದ ಜನತೆ ನರೇಂದ್ರ ಮೋದಿಯವರ ಕಾರ್ಯಕ್ರಮಗಳನ್ನು ಮೆಚ್ಚಿದ್ದಾರೆ. ಕಳೆದ ಐದು ವರ್ಷದಲ್ಲಿ ಸಂಸದರಾಗಿದ್ದ ಪ್ರತಾಪ್ ಸಿಂಹ ಹಲ ವಾರು ಜನಪರ ಕಾರ್ಯಕ್ರಮಗಳನ್ನು ನೀಡಿ ದ್ದಾರೆ. ನಾನು ಸಹ ಮುಡಾ ಅಧ್ಯಕ್ಷನಾಗಿ ಹಾಗೂ ಈ ಭಾಗದ ಶಾಸಕನಾಗಿ ಸಮಾ ಜಮುಖಿ ಕೆಲಸಗಳನ್ನು ಮಾಡಿದ್ದೇನೆ. ಇವೆಲ್ಲವನ್ನು ಕ್ರೋಡೀಕರಿಸಿದರೇ ಜೆಡಿಎಸ್ -ಕಾಂಗ್ರೆಸ್‍ನಿಂದ ಯಾರೇ ಸ್ಪರ್ಧಿಸಿ ದರೂ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಬಾರಿ ಲೋಕಸಭಾ ಚುನಾ ವಣೆಯಲ್ಲಿ 282 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಈ ಬಾರಿಯ ಚುನಾ ವಣೆಯಲ್ಲಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಹುಮತಗಳ ಅಂತರದಿಂದ ಜಯ ಗಳಿಸುತ್ತೇವೆ. ಚಾಮರಾಜ ಕ್ಷೇತ್ರದಲ್ಲಿ 1 ಲಕ್ಷ ಮತಗಳನ್ನು ಪಡೆಯುತ್ತೇವೆ ಎಂಬ ವಿಶ್ವಾಸವಿದ್ದು, ಮತ್ತೆ ನರೇಂದ್ರ ಮೋದಿ ಯವರು ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ನಮ್ಮ ಕ್ಷೇತ್ರದ ಬೂತ್‍ಗಳನ್ನು ಮಜ ಬೂತ್ ಮಾಡುವ ಉದ್ದೇಶದಿಂದ ಪ್ರತಿ ವಾರ್ಡ್ ನಲ್ಲಿ ಬೂತ್ ಸಮಿತಿಗಳನ್ನು ರಚನೆ ಮಾಡಲಾಗು ತ್ತಿದೆ. ಬಿಜೆಪಿ ಪಕ್ಷ ತಳಮಟ್ಟದಿಂದ ಬೆಳೆದಿದ್ದು, ಇಲ್ಲಿನ ಕಾರ್ಯಕರ್ತರು ಯಾವುದೇ ಗೊಂದಲ ವಿಲ್ಲದೆ ಅಣ್ಣ-ತಮ್ಮಂದಿರಂತೆ ಪಕ್ಷಕ್ಕಾಗಿ ಹಾಗೂ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆ ಯಲ್ಲಿ ಕೆಲಸ ಮಾಡಿರುವುದಕ್ಕಿಂತ ಹೆಚ್ಚಾಗಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.

ಸಭೆಯಲ್ಲಿ ನಗರಪಾಲಿಕೆ ಸದಸ್ಯ ಎಂ.ಯು.ಸುಬ್ಬಯ್ಯ, ಮುಖಂಡರಾದ ಮಹದೇವಪ್ಪ, ಜಯಪ್ಪ, ವಾಣೀಶ್ ಮತ್ತಿತರರು ಉಪಸ್ಥಿತರಿದ್ದರು.

Translate »