ಮೈಸೂರು

ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡುವ ಮಾತೇ ಇಲ್ಲ
ಮೈಸೂರು

ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡುವ ಮಾತೇ ಇಲ್ಲ

March 21, 2019

ಮೈಸೂರು: ರಾಜ್ಯ ದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಕಾರ್ಯಕರ್ತರು ಒಂದಾಗು ತ್ತಾರೆ ಎಂಬ ಗ್ಯಾರಂಟಿಯೇ ಇಲ್ಲ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ 1,2,3,4,5 ಮತ್ತು 20ನೇ ವಾರ್ಡ್‍ನ ಬಿಜೆಪಿ ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿದ ಅವರು, ಈಗಾ ಗಲೇ ಜೆಡಿಎಸ್-ಕಾಂಗ್ರೆಸ್ ಪ್ರಬಲವಾ ಗಿದ್ದ ಜಾಗದಲ್ಲಿಯೇ ಕಿತ್ತಾಡಿಕೊಂಡಿ ದ್ದಾರೆ. ಅಧಿಕಾರ ದಾಹದಿಂದ ಹೊಂದಾ ಣಿಕೆ ಮಾಡಿಕೊಂಡಿದ್ದಾರೆ. ಆದರೆ, ಕಾರ್ಯಕರ್ತರ ಮನಸ್ಥಿತಿಯನ್ನು ಬದ ಲಾಯಿಸಲು ಸಾಧ್ಯವಿಲ್ಲ ಎಂದರು. ಮಂಡ್ಯದಲ್ಲಿ ಕಾಂಗ್ರೆಸ್ ಸುಮಲತಾ ಅಂಬರೀಶ್ ಅವರಿಗೆ…

ಎರಡನೇ ದಿನ ಮೂವರು ನಾಮಪತ್ರ ಸಲ್ಲಿಕೆ
ಮೈಸೂರು

ಎರಡನೇ ದಿನ ಮೂವರು ನಾಮಪತ್ರ ಸಲ್ಲಿಕೆ

March 21, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮೂವರು ಸ್ವತಂತ್ರ ಅಭ್ಯರ್ಥಿಗಳಾಗಿ ಎರಡನೇ ದಿನವಾದ ಇಂದು ನಾಮಪತ್ರಗಳನ್ನು ಸಲ್ಲಿಸಿದರು. ಮೈಸೂರಿನ ಶ್ರೀನಿವಾಸಯ್ಯ ಹಾಗೂ ಪಿರಿಯಾ ಪಟ್ಟಣದ ಪಿ.ಯಡೂರಪ್ಪ ಅವರು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಪಕ್ಷೇತರರಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮಂಗಳವಾರ ಕಾಂಗ್ರೆಸ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ 2 ನಾಮಪತ್ರ ಸಲ್ಲಿಸಿದ್ದ ಅಯೂಬ್‍ಖಾನ್ ಅವರು ಇಂದೂ ಪಕ್ಷೇತರನಾಗಿ ಎರಡು ಉಮೇದುವಾರಿಕೆಯನ್ನು ಸಲ್ಲಿಸಿದರು. ಅದರನ್ವಯ ಎರಡು ದಿನಗಳಲ್ಲಿ ಒಟ್ಟು ಐದು ಮಂದಿ ಯಿಂದ…

ಜೆಡಿಎಸ್-ಕಾಂಗ್ರೆಸ್ ಒಡಕೇ ಬಿಜೆಪಿ ಗೆಲುವಿಗೆ ವರದಾನ
ಮೈಸೂರು

ಜೆಡಿಎಸ್-ಕಾಂಗ್ರೆಸ್ ಒಡಕೇ ಬಿಜೆಪಿ ಗೆಲುವಿಗೆ ವರದಾನ

March 21, 2019

ಮೈಸೂರು: ಜೆಡಿಎಸ್-ಕಾಂಗ್ರೆಸ್ ಮೇಲ್ನೋಟಕ್ಕೆ ಒಂದಾಗಿದ್ದರೂ ಕೆಳ ಹಂತದಲ್ಲಿರುವ ಒಡಕೇ ಮೋದಿಯವರು ಮತ್ತೆ ಪ್ರಧಾನಿಯಾಗಲು ಅನುಕೂಲ ವಾಗಲಿದೆ ಎಂದು ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು. ಮೈಸೂರಿನ ಟಿ.ಕೆ.ಬಡಾವಣೆ ಯಲ್ಲಿ ಟೀಮ್ ಮೋದಿ ಕಾರ್ಯಾಲಯವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಜೆಡಿಎಸ್‍ನವರಿಗೆ ಕಾಂಗ್ರೆಸ್‍ನ ವಿರೋಧವಿದ್ದು, ಮೋದಿಯವರಿಗೆ ಮತ ನೀಡುತ್ತಾರೆ. ಇದೇ ಬಿಜೆಪಿಗೆ ಲಾಭವಾಗುತ್ತದೆ ಎಂದರು. ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಗೆಲ್ಲುವುದು ಖಚಿತವಾಗಿದ್ದು, ಮತ್ತೆ ಮೋದಿಯವರು ಪ್ರಧಾನಿಯಾಗುತ್ತಾರೆ. ಕಳೆದ ಐದು ವರ್ಷದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ…

ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳ ಸೆಳೆಯಲು ಮೈವಿವಿ ಯತ್ನ
ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳ ಸೆಳೆಯಲು ಮೈವಿವಿ ಯತ್ನ

March 21, 2019

ಮೈಸೂರು: ದೇಶದ ಆಡಳಿತ ವ್ಯವಸ್ಥೆಯ ಉನ್ನತ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇಲ್ಲವಾಗುತ್ತಿದ್ದು, ಸಂಬಂಧಿಸಿದ ಆಯೋಗ ಹಾಗೂ ಪ್ರಾಧಿಕಾರಿಗಳು ಸಕಾಲದಲ್ಲಿ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆ ನಡೆಸದಿರುವುದೇ ಇದಕ್ಕೆ ಕಾರಣವಾಗಿ ರಬಹುದು ಎಂದು ಕಲಬುರ್ಗಿ ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಅಭಿಪ್ರಾಯಪಟ್ಟರು. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ವಿವಿಯ ಪರಿಶಿಷ್ಟ ಜಾತಿ ಮತ್ತು ವರ್ಗದ ವಿಶೇಷ ಘಟಕ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾ ಲಯದ ಜಂಟಿ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ…

ಮೈಸೂರು ಮೃಗಾಲಯದಲ್ಲಿಂದು ಗುಬ್ಬಿ, ಅರಣ್ಯ ಜಲ ಸಂರಕ್ಷಣೆ ಜಾಗೃತಿ
ಮೈಸೂರು

ಮೈಸೂರು ಮೃಗಾಲಯದಲ್ಲಿಂದು ಗುಬ್ಬಿ, ಅರಣ್ಯ ಜಲ ಸಂರಕ್ಷಣೆ ಜಾಗೃತಿ

March 21, 2019

ಮೈಸೂರು: ಪ್ರತಿ ವರ್ಷ ಮಾ.20ರಂದು ಗುಬ್ಬಚ್ಚಿ ದಿನ, ಮಾ.21ರಂದು ವಿಶ್ವ ಅರಣ್ಯ ದಿನ ಹಾಗೂ ಮಾ.22ರಂದು ವಿಶ್ವ ಜಲ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ(ಮಾ.21)ರಂದು ಬೆಳಿಗ್ಗೆ 10ರಿಂದ ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಸಂತತಿ ರಕ್ಷಿಸುವುದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿ ಸಲು ಕೆಲ ವರ್ಷಗಳಿಂದ ವಿಶ್ವ ಗುಬ್ಬಚ್ಚಿ ದಿನ ಆಚರಿಸಲಾಗುತ್ತಿದೆ. ಗುಬ್ಬಿಗಳ ಸಂತತಿ ರಕ್ಷಣೆಗೆ ಮನೆ ಮುಂದೆ, ಛಾವಣಿ ಮೇಲ್ಭಾಗ ನೀರು, ತಿನ್ನಲು ಕಾಳು ಇಡುವ ಅಭಿ ಯಾನ ನಡೆದಿದೆ….

ನಾಳೆಯಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ  10 ದಿನಗಳ ಕಲಾವೈಭವ; ಸಿಲ್ಕ್ ಉತ್ಸವ
ಮೈಸೂರು

ನಾಳೆಯಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ 10 ದಿನಗಳ ಕಲಾವೈಭವ; ಸಿಲ್ಕ್ ಉತ್ಸವ

March 21, 2019

ಮೈಸೂರು: ಯುಗಾದಿ ಹಬ್ಬದ ಪ್ರಯುಕ್ತ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಿಂಗ್‍ರಸ್ತೆ ಯಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಮಾ.22ರಿಂದ 31 ರವರೆಗೆ `ಕಲಾ ವೈಭವ’ ಕರ ಕುಶಲ ಮತ್ತು ಕೈಮಗ್ಗ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಹಾಗೂ `ಸಿಲ್ಕ್ ಉತ್ಸವ’ ಏರ್ಪಡಿಸಲಾಗಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್.ಉಮಾಕಾಂತ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಜೆಎಸ್‍ಎಸ್…

ಸುಯೋಗ್ ಡಯಾಬಿಟಿಕ್ ಹೆಲ್ತ್ ಕ್ಲಬ್ ರಚನೆ
ಮೈಸೂರು

ಸುಯೋಗ್ ಡಯಾಬಿಟಿಕ್ ಹೆಲ್ತ್ ಕ್ಲಬ್ ರಚನೆ

March 21, 2019

ಮಾ.24ರಂದು ಸಕ್ಕರೆ ಕಾಯಿಲೆ ಉಚಿತ ತಪಾಸಣೆ, ಅರಿವು ಕಾರ್ಯಕ್ರಮ ಮೈಸೂರು: ಮೈಸೂರಿನಲ್ಲಿ ಮಧುಮೇಹಿಗಳೆÀಲ್ಲರೂ ಕೂಡಿ ಸಕ್ಕರೆ ಕಾಯಿಲೆಯವರ ಹೆಲ್ತ್ ಕ್ಲಬ್ ರಚಿಸಿಕೊಂಡಿದ್ದಾರೆ. ವ್ಯಾಪಕವಾಗಿ ಹರಡುತ್ತಿರುವ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವುದು ಅತೀ ಮುಖ್ಯವಾಗಿದ್ದು, ಸಕ್ಕರೆ ಕಾಯಿಲೆ ಯಿಂದ ಹೃದಯಾಘಾತ, ಲಕ್ವ, ಕಿಡ್ನಿ ವಿಫಲತೆ, ಗ್ಯಾಂಗ್ರೀನ್, ದೃಷ್ಟಿಹೀನತೆ ಇನ್ನಿತರೆ ರೋಗಳು ಕಾಣಿಸಿಕೊಳ್ಳುತ್ತಿದ್ದು, ಈ ದುಷ್ಪರಿಣಾಮವನ್ನು ತಡೆಗಟ್ಟುವ ಕುರಿತು ಜನಜಾಗೃತಿ ಉಂಟು ಮಾಡುವುದು ಕ್ಲಬ್‍ನ ಉದ್ದೇಶವಾಗಿದೆ ಎಂದು ಸುಯೋಗ್ ಡಯಾ ಬಿಟಿಕ್ಸ್ ಹೆಲ್ತ್ ಕ್ಲಬ್‍ನ ಮಹಾಪೋಷಕ ಡಾ.ಎಸ್.ಪಿ.ಯೋಗಣ್ಣ ಇಂದಿಲ್ಲಿ ತಿಳಿಸಿದರು. ಮೈಸೂರು…

ಎಟಿಎಂಇ ಕಾಲೇಜಿನಲ್ಲಿ ಇಂದಿನಿಂದ `ಊರ್ಜಾ-2019’ ತಾಂತ್ರಿಕ ಹಬ್ಬ
ಮೈಸೂರು

ಎಟಿಎಂಇ ಕಾಲೇಜಿನಲ್ಲಿ ಇಂದಿನಿಂದ `ಊರ್ಜಾ-2019’ ತಾಂತ್ರಿಕ ಹಬ್ಬ

March 21, 2019

ಮೈಸೂರು: ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯ ರಿಂಗ್ ವಿಭಾಗದ ವತಿಯಿಂದ ಮಾ.21 ಮತ್ತು 22ರಂದು `ಊರ್ಜಾ-2019’ ರಾಷ್ಟ್ರಮಟ್ಟದ ತಾಂತ್ರಿಕ ಹಬ್ಬ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಎಲ್.ಬಸವರಾಜ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ರಾಜ್ಯಗಳ ಇಂಜಿನಿಯರಿಂಗ್ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಕೆಲವು ತಾಂತ್ರಿಕ ಸಮಸ್ಯೆಗಳನ್ನು ನೀಡಿ ಅವರು ಪರಿಹರಿಸುವ ಬಗ್ಗೆ, ರೋಬೋಟ್ ಇನ್ನಿತರ ಮಾದರಿ ಪ್ರಾತ್ಯಕ್ಷಿಕೆ,…

ಮಾ.31ರಿಂದ ಬಿಜೆಪಿ ವಿರುದ್ಧ `ದೋಸ್ತಿ’ ರಣಕಹಳೆ
ಮೈಸೂರು

ಮಾ.31ರಿಂದ ಬಿಜೆಪಿ ವಿರುದ್ಧ `ದೋಸ್ತಿ’ ರಣಕಹಳೆ

March 20, 2019

ಬೆಂಗಳೂರು: ಲೋಕಸಭಾ ಚುನಾ ವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ, ಹೆಚ್ಚು ಸ್ಥಾನ ಗಳಿಸಲು ಮೈತ್ರಿ ಪಕ್ಷದ ನಾಯಕರು ಇಂದಿಲ್ಲಿ ಏಕತೆ ಪ್ರದರ್ಶಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಲು ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಎರಡು ಅಂಕಿ ದಾಟದಂತೆ ನೋಡಿಕೊಳ್ಳಲು ನಾಯಕರು ತೀರ್ಮಾನ ಕೈಗೊಂಡಿದ್ದಾರೆ. ಉಭಯ ಪಕ್ಷಗಳಲ್ಲಿರುವ ಮನ ಸ್ತಾಪಗಳನ್ನು ಬದಿಗಿರಿಸಿ, ಚುನಾವಣೆಯನ್ನು ಒಂದಾಗಿ ಎದುರಿಸಬೇಕೆಂಬ ರಾಹುಲ್‍ಗಾಂಧಿ ಅವರ ಸಲಹೆ ಮೇರೆಗೆ ಇಂದು ಖಾಸಗಿ ಹೋಟೆಲ್‍ನಲ್ಲಿ ಸುಮಾರು ನಾಲ್ಕು ತಾಸಿಗೂ ಹೆಚ್ಚು ಸುದೀರ್ಘ ಸಭೆ ನಡೆಸಿದ…

ಸ್ಪರ್ಧೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ದೇವೇಗೌಡರು
ಮೈಸೂರು

ಸ್ಪರ್ಧೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ದೇವೇಗೌಡರು

March 20, 2019

ಬೆಂಗಳೂರು: ದೆಹಲಿಯಲ್ಲಿ ನನ್ನ ಅವಶ್ಯಕತೆಯ ಬಗ್ಗೆ ಯೋಚಿಸುತ್ತಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ. ಯುದ್ಧದ ಸಮಯದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಹೊರಗುಳಿ ಯುತ್ತಿದ್ದೇನೆ ಎಂಬುದನ್ನು ಸಾರಾಸಗಟಾಗಿ ತಳ್ಳಿ ಹಾಕಿದರು. ನಾನು ಇನ್ನೆರಡು ತಿಂಗಳು ಕಳೆದರೆ 87ನೇ ವರ್ಷಕ್ಕೆ ಕಾಲಿಡುತ್ತೇನೆ. ಇದನ್ನರಿತೆ ಮೂರು ವರ್ಷಗಳ ಹಿಂದೆಯೇ ನನ್ನ ಮೊಮ್ಮಗ ಪ್ರಜ್ವಲ್‍ಗೆ ಮುಂದೆ ಹಾಸನ ಲೋಕಸಭಾ ಚುನಾವಣೆಯಿಂದ ನೀನೇ ಕಣಕ್ಕಿಳಿ ಎಂದು ತಿಳಿಸಿದ್ದೆ. ಅಷ್ಟೇ ಅಲ್ಲ ಸಂಸತ್‍ನ ಕೊನೆಯ…

1 1,074 1,075 1,076 1,077 1,078 1,611
Translate »