ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳ ಸೆಳೆಯಲು ಮೈವಿವಿ ಯತ್ನ
ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳ ಸೆಳೆಯಲು ಮೈವಿವಿ ಯತ್ನ

March 21, 2019

ಮೈಸೂರು: ದೇಶದ ಆಡಳಿತ ವ್ಯವಸ್ಥೆಯ ಉನ್ನತ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇಲ್ಲವಾಗುತ್ತಿದ್ದು, ಸಂಬಂಧಿಸಿದ ಆಯೋಗ ಹಾಗೂ ಪ್ರಾಧಿಕಾರಿಗಳು ಸಕಾಲದಲ್ಲಿ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆ ನಡೆಸದಿರುವುದೇ ಇದಕ್ಕೆ ಕಾರಣವಾಗಿ ರಬಹುದು ಎಂದು ಕಲಬುರ್ಗಿ ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ವಿವಿಯ ಪರಿಶಿಷ್ಟ ಜಾತಿ ಮತ್ತು ವರ್ಗದ ವಿಶೇಷ ಘಟಕ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾ ಲಯದ ಜಂಟಿ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿ ಸುವ ಕುರಿತಂತೆ ಹಮ್ಮಿಕೊಂಡಿರುವ ಎರಡು ದಿನಗಳ ಬೌದ್ಧಿಕ ಕೌಶಲಾಭಿವೃದ್ಧಿ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ 50 ಸಾವಿರ ಯುವ ಪ್ರತಿಭಾ ನ್ವಿತರು ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತಿವೆ. ಸಕಾಲದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ನೇಮ ಕಾತಿ ಪ್ರಕ್ರಿಯೆ ನಡೆಯದಿರುವುದೇ ಇದಕ್ಕೆ ಕಾರಣ ಎಂಬುದನ್ನು ಮನಗಾಣ ಬಹುದು. ವಿದೇಶದಲ್ಲಿ ಉದ್ಯೋಗದಲ್ಲಿ ರುವ 50 ಸಾವಿರ ಮಂದಿ ನಮ್ಮಲ್ಲೇ ಇದ್ದಿದ್ದರೆ ದೇಶದ ಪ್ರಗತಿಗೆ ಪೂರಕ ವಾತಾವರಣ ಮತ್ತಷ್ಟು ಗಟ್ಟಿಗೊಳ್ಳುತ್ತಿತ್ತು ಎಂದು ತಿಳಿಸಿದರು.

ದೇಶದಲ್ಲಿ 950 ವಿವಿಗಳಿದ್ದು, 40 ಸಾವಿರಕ್ಕೂ ಹೆಚ್ಚು ಕಾಲೇಜುಗಳಿವೆ. ವಿವಿಗಳು ವಿದ್ಯಾರ್ಥಿಗಳಿಗೆ ಅಗತ್ಯ ಅಧ್ಯ ಯನ ಸಾಮಗ್ರಿಗಳನ್ನು ಒದಗಿಸಿ ಉತ್ತೇ ಜನ ನೀಡಿದರೆ, ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸ ಲಿದ್ದಾರೆ. ವಿದ್ಯಾರ್ಥಿಗಳೂ ಈ ವಿಚಾರ ದಲ್ಲಿ ಕಠಿಣ ಪರಿಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ನಾವಿಂದು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಎಲ್ಲಾ ಪರೀಕ್ಷೆಗಳೂ ಸ್ಪರ್ಧಾತ್ಮಕವಾಗಿವೆ. ಶ್ರದ್ಧೆ, ಶಿಸ್ತು ಹಾಗೂ ಸಂಯಮದೊಂದಿಗೆ ಸತತ ಪ್ರಯತ್ನವಿದ್ದರೆ ಯಶಸ್ಸು ಒಲಿದುಬರಲಿದೆ ಎಂದು ನುಡಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತ ನಾಡಿದ ಮೈಸೂರು ವಿವಿ ಭೂಗರ್ಭಶಾಸ್ತ್ರ ವಿಭಾಗದ ಪ್ರೊ.ಎ.ಬಾಲಸುಬ್ರಮಣಿ ಯನ್, 2019-20ನೇ ಸಾಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ದೇಶದ ಆಡಳಿತ ಸೇವೆಗಳಿಗೆ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮೈಸೂರು ವಿವಿಯ ಕನಿಷ್ಠ 10 ಸಾವಿರ ವಿದ್ಯಾರ್ಥಿಗಳು ಆಯ್ಕೆ ಗೊಳ್ಳಬೇಕು ಎಂಬ ಗುರಿಯೊಂದಿಗೆ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಾ ದರೂ ಶೇ.10ರಷ್ಟು ಪ್ರಶ್ನೆಗಳು ಭಾರತೀಯ ಸಂವಿಧಾನಕ್ಕೆ ಸಂಬಂಧಿಸಿರುತ್ತವೆ ಎಂಬು ದನ್ನು ವಿದ್ಯಾರ್ಥಿಗಳು ಗಮನದಲ್ಲಿರಿಸಿಕೊ ಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.
ಎರಡು ದಿನಗಳ ಉಚಿತ ಕಾರ್ಯಾ ಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ. ಉಚಿತ ನೋಂದಣಿ ಮೂಲಕ ವಿದ್ಯಾರ್ಥಿ ಗಳು ಭಾಗವಹಿಸಲು ಅವಕಾಶ ಕಲ್ಪಿಸ ಲಾಗಿದೆ. ಸೆನೆಟ್ ಭವನ ಸಂಪೂರ್ಣ ವಿದ್ಯಾರ್ಥಿ ಗಳಿಂದ ಭರ್ತಿಯಾಗಿತ್ತು. ವಿವಿಯ ಪರಿಶಿಷ್ಟ ಜಾತಿ ಮತ್ತು ವರ್ಗ ವಿಶೇಷ ಘಟಕದ ಉಪ ಕುಲಸಚಿವ ಡಾ.ಎಸ್. ಮಹದೇವ ಮೂರ್ತಿ, ವಿದ್ಯಾರ್ಥಿ ಕ್ಷೇಮ ಪಾಲನಾ ನಿರ್ದೇಶನಾಲಯದ ನಿರ್ದೇ ಶಕ ಡಾ.ಸಿ.ರಾಮಸ್ವಾಮಿ, ಯುವರಾಜ ಕಾಲೇಜು ಪ್ರಾಂಶುಪಾಲ ಡಾ.ಎಂ. ರುದ್ರಯ್ಯ ಮತ್ತಿತರರು ಹಾಜರಿದ್ದರು.

Translate »