ಚುನಾವಣಾ ಕರ್ತವ್ಯ ಲೋಪ: ಮೂವರ ಅಮಾನತು
ಹಾಸನ

ಚುನಾವಣಾ ಕರ್ತವ್ಯ ಲೋಪ: ಮೂವರ ಅಮಾನತು

March 21, 2019

ಹಾಸನ: ಲೋಕಸಭಾ ಚುನಾವಣೆ ಕರ್ತವ್ಯದಲ್ಲಿ ಲೋಪವೆಸ ಗಿದ ಮೂವರು ಸರ್ಕಾರಿ ನೌಕರರನ್ನು ಅಮಾನತುಗೊಳಿಸಿರುವ ಜಿಲ್ಲಾ ಚುನಾ ವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಕ್ರಂ ಪಾಷ, ಪೊಲೀಸ್ ಇಲಾಖೆಯ ಇಬ್ಬರು ಸಿಬ್ಬಂದಿ ವಿರುದ್ಧ ಕ್ರಮ ಕೈಗೊ ಳ್ಳುವಂತೆ ಎಸ್‍ಪಿ ಎ.ಎನ್.ಪ್ರಕಾಶ್ ಗೌಡ ಅವರಿಗೆ ಶಿಫಾರಸು ಮಾಡಿದ್ದಾರೆ.

ಬಸವಾಪಟ್ಟಣದ ಹೆಚ್.ಎಂ.ಎಸ್ ಸರ್ಕಾರಿ ಪಿಯು ಕಾಲೇಜು ಉಪ ನ್ಯಾಸಕ ದೀಪು ಎಸ್.ವೈ, ಬನ್ನೂರು ಮತ್ತು ಆಲದಹಳ್ಳಿ ಗ್ರಾಪಂ ಕಾರ್ಯ ದರ್ಶಿಗಳಾದ ಸುನೀಲ್ ಕುಮಾರ್ ಮತ್ತು ಯೋಗೇಶ್ ಚುನಾವಣಾ ಕರ್ತವ್ಯದಲ್ಲಿ ಲೋಪವೆಸಗಿ ಅಮಾನತುಗೊಂಡವರು. ಅರಕಲಗೂಡು ಪೊಲೀಸ್ ಠಾಣೆ ಮುಖ್ಯ ಪೇದೆ ಕೃಷ್ಣ, ಗೃಹ ರಕ್ಷಕದಳದ ಸ್ವಾಮಿಗೌಡ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮಕೈಗೊಳ್ಳಲಿದ್ದಾರೆ.

ಆಗಿದ್ದೇನು?: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಹಿಪ್ಪಲಿ ಬಳಿ ಚೆಕ್‍ಪೋಸ್ಟ್ ತೆರೆಯಲಾಗಿದ್ದು, ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಈ ಐವರೂ ಸಿಬ್ಬಂದಿಯನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಚೆಕ್‍ಪೋಸ್ಟ್‍ನಲ್ಲಿ ಇಡೀ ರಾತ್ರಿ ಹಾಜ ರಿದ್ದು, ಹಣ, ಮದ್ಯ ಸೇರಿದಂತೆ ಮತದಾರ ರಿಗೆ ಆಮಿಷವೊಡ್ಡುವ ಇತರೆ ಸಾಮಗ್ರಿಗಳ ಅಕ್ರಮ ಸಾಗಣೆಗೆ ಅವಕಾಶವಾಗದಂತೆ ನಿಗಾ ಇಡಬೇಕು. ರಾತ್ರಿ ವೇಳೆ ಸಂಚರಿಸುವ ವಾಹನಗಳನ್ನು ತಡೆದು ತಪಾಸಣೆ ನಡೆಸಬೇಕು ಎಂದು ಸೂಚಿಸಲಾಗಿತ್ತು.

ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಮತ್ತು ಅರಕಲಗೂಡು ತಹಶೀ ಲ್ದಾರ್ ಮಾ.19ರ ರಾತ್ರಿ 11.25ರ ವೇಳೆ ಹಿಪ್ಪಲಿ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿ ದಾಗ ಐವರು ಸಿಬ್ಬಂದಿಗಳಲ್ಲಿ ಒಬ್ಬರೂ ಅಲ್ಲಿರಲಿಲ್ಲ. ಎಲ್ಲರೂ ಕರ್ತವ್ಯಕ್ಕೆ ಗೈರುಹಾಜರಾಗಿರುವುದು ದೃಢಪಟ್ಟಿತು. ಇದರಿಂದ ಸಿಟ್ಟಾದ ಚುನಾವಣಾಧಿಕಾರಿ ಗಳು ದೀಪು ಎಸ್.ವೈ., ಸುನೀಲ್ ಕುಮಾರ್ ಮತ್ತು ಯೋಗೇಶ್ ವಿರುದ್ಧ ತಕ್ಷಣ ದಿಂದಲೇ ಜಾರಿಗೆ ಬರುವಂತೆ ಅಮಾ ನತು ಆದೇಶ ಹೊರಡಿಸಿದರು. ಅಲ್ಲದೇ, ಕೃಷ್ಣ ಮತ್ತು ಸ್ವಾಮಿಗೌಡ ವಿರುದ್ಧ ಕ್ರಮ ಜರುಗಿಸುವಂತೆ ಎಸ್‍ಪಿಗೆ ಶಿಫಾರಸು ಮಾಡಿದರು.

ನಿಯಮದಂತೆ ಕ್ರಮ: ಚುನಾವಣಾ ಕರ್ತವ್ಯ ಲೋಪ ಮೇಲ್ನೋಟಕ್ಕೆ ದೃಢಪಟ್ಟಿದ್ದರಿಂದ ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಕಲಂ 134ಡಿ ಅನ್ವಯ ಮೂವರು ಸರ್ಕಾರಿ ನೌಕರರ ವಿರುದ್ಧ ಅಮಾನತು ಕ್ರಮ ಜರುಗಿಸಲಾಗಿದೆ.

Translate »