ಸ್ಪರ್ಧೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ದೇವೇಗೌಡರು
ಮೈಸೂರು

ಸ್ಪರ್ಧೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ದೇವೇಗೌಡರು

March 20, 2019

ಬೆಂಗಳೂರು: ದೆಹಲಿಯಲ್ಲಿ ನನ್ನ ಅವಶ್ಯಕತೆಯ ಬಗ್ಗೆ ಯೋಚಿಸುತ್ತಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ. ಯುದ್ಧದ ಸಮಯದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಹೊರಗುಳಿ ಯುತ್ತಿದ್ದೇನೆ ಎಂಬುದನ್ನು ಸಾರಾಸಗಟಾಗಿ ತಳ್ಳಿ ಹಾಕಿದರು. ನಾನು ಇನ್ನೆರಡು ತಿಂಗಳು ಕಳೆದರೆ 87ನೇ ವರ್ಷಕ್ಕೆ ಕಾಲಿಡುತ್ತೇನೆ. ಇದನ್ನರಿತೆ ಮೂರು ವರ್ಷಗಳ ಹಿಂದೆಯೇ ನನ್ನ ಮೊಮ್ಮಗ ಪ್ರಜ್ವಲ್‍ಗೆ ಮುಂದೆ ಹಾಸನ ಲೋಕಸಭಾ ಚುನಾವಣೆಯಿಂದ ನೀನೇ ಕಣಕ್ಕಿಳಿ ಎಂದು ತಿಳಿಸಿದ್ದೆ. ಅಷ್ಟೇ ಅಲ್ಲ ಸಂಸತ್‍ನ ಕೊನೆಯ ದಿನದಲ್ಲಿಯೇ ಇದು ನನ್ನ ಕೊನೆ ಭಾಷಣವಾಗಬಹುದು ಎಂದು ಹೇಳಿದ್ದೆ. ಮೊದಲೇ ಚುನಾವಣಾ ಕಣದಿಂದ ಹಿಂದೆ ಸರಿಯಬೇಕೆಂಬ ನಿರ್ಧಾರ ಕೈಗೊಂಡಿದ್ದೆ. ಇದೀಗ ರಾಷ್ಟ್ರದ ವಿವಿಧ ಭಾಗಗಳಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯುವಂತೆ ನನ್ನ ಮೇಲೆ ಒತ್ತಡ ಬರುತ್ತಿದೆ. ಆದರೆ ನಾನು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

Translate »