ಸೋಲಿನ ಸಂಬಂಧ ಡಯಾಸ್ ಕುಟ್ಟಿ ಗುಡುಗಿದ ಹೆಚ್‍ಡಿಡಿ
ಮೈಸೂರು

ಸೋಲಿನ ಸಂಬಂಧ ಡಯಾಸ್ ಕುಟ್ಟಿ ಗುಡುಗಿದ ಹೆಚ್‍ಡಿಡಿ

November 9, 2019

ತುಮಕೂರು: ವಿಧಿ ಎಳೆದುಕೊಂಡು ಬಂದು ಚಕ್ರವ್ಯೂಹದಲ್ಲಿ ಸಿಲುಕಿಸಿ ತುಮಕೂರಲ್ಲಿ ಸೋಲಿಸಿದೆ. ಆದರೂ ಶಸ್ತ್ರತ್ಯಾಗ ಮಾಡಲ್ಲ ಪಕ್ಷ ಕ್ಕಾಗಿ ಹೋರಾಟ ಮಾಡು ತ್ತೇನೆ ಎಂದು ಡಯಾಸ್ ಕುಟ್ಟಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಗುಡುಗಿದ್ದಾರೆ. ತುಮಕೂರು ತಾಲೂಕಿನ ಅರೇಹಳ್ಳಿಯ ನೂತನ ದೇವಾಲಯ ಉದ್ಘಾಟಿಸಿ ಮಾತನಾ ಡಿದ ಅವರು, ನಾನು ಭೀಷ್ಮನಂತೆ ಶಸ್ತ್ರತ್ಯಾಗ ಮಾಡಲ್ಲ. ಶಸ್ತ್ರಸಜ್ಜಿತನಾಗಿ ಹೋರಾಟ ಮಾಡಿ ಮತ್ತೆ ಪಕ್ಷ ಕಟ್ಟುತ್ತೇನೆ. ತುಮಕೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇರಾದೆ ಇರಲಿಲ್ಲ. 59 ವರ್ಷ ರಾಜಕಾರಣ ಮಾಡಿದ್ದೇನೆ. ತುಮಕೂರಿಗೆ ಬಂದು ಸೋತು ಅವಮಾನ ಆಗಬೇಕಿತ್ತಾ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ವಿಧಾನಸಭೆಯಲ್ಲಿ ತುಮಕೂರು ಜಿಲ್ಲೆಯ 11ಕ್ಕೆ 11 ಕ್ಷೇತ್ರ ಗೆಲ್ಲುತ್ತೇನೆ ಎಂದು ವಿಶ್ವಾಸವ್ಯಕ್ತಪಡಿಸಿದರು. ನನ್ನ ಮಗನನ್ನ ಮುಖ್ಯಮಂತ್ರಿ ಮಾಡಿ ಎಂದು ನಾನು ಯಾರ ಮನೆ ಮುಂದೆ ಹೋಗಿರಲಿಲ್ಲ. ಅವರೇ ನಿಮ್ಮ ಮಗನೇ ಮುಖ್ಯಮಂತ್ರಿ ಆಗಬೇಕು ಎಂದರು. ಒಬ್ಬ ಮುಖ್ಯಮಂತ್ರಿಗೆ 14 ತಿಂಗಳಲ್ಲಿ ಕೊಟ್ಟ ನೋವು ಈ ರಾಷ್ಟ್ರದ ಇತಿಹಾಸದಲ್ಲಿ ಇಲ್ಲ ಎಂದು ಕಾಂಗ್ರೆಸ್ ಪಕ್ಷದವರಿಗೆ ಟಾಂಗ್ ಕೊಟ್ಟಿದ್ದಾರೆ. ಇನ್ನೂ ಭಾಷಣದಲ್ಲಿ ಸಿಎಂ ಯಡಿಯೂರಪ್ಪರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡಿ ದಂತಹ ಅನುದಾನವನ್ನು ತಡೆಹಿಡಿದು ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಅಯೋಧ್ಯೆ ತೀರ್ಪು ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಹೆಚ್‍ಡಿಡಿ, ಕೋರ್ಟಿನಲ್ಲಿ ಏನು ತೀರ್ಮಾನ ಬರುತ್ತೋ ಗೊತ್ತಿಲ್ಲ. ಏನೇ ತೀರ್ಮಾನ ಬಂದರೂ ಅಲ್ಪಸಂಖ್ಯಾತ ಕೆಲ ಮುಖಂಡರು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಈಗಾಗಲೇ ಅಯೋಧ್ಯೆಯಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಈ ವಿವಾದ ಯಾಕಾಯಿತು ಅದನ್ನು ಒಡೆದವರು ಯಾರು ಹಿಂದಿನದು ನನಗೆ ಗೊತ್ತಿಲ್ಲ. ಹೊಡೆದದ್ದು ಭಾರತೀಯ ಜನತಾ ಪಾರ್ಟಿ ಅವರೇ ಎಂದು ಆರೋಪಿಸಿದರು.

ಕೋರ್ಟಿನಲ್ಲಿ ಹೇಗೆ ತೀರ್ಪು ಬರುತ್ತದೆ ಅನ್ನೋದನ್ನು ನಾನು ಈಗಲೇ ಹೇಳಲಿಕ್ಕೆ ಸಾಧ್ಯವಿಲ್ಲ. ತೀರ್ಪು ಸರ್ವ ಸಮ್ಮತವಾಗಿ ಬರುತ್ತೋ ಅಥವಾ ಏನಾದರೂ ವ್ಯತ್ಯಾಸ ಬರುತ್ತೋ ಅನ್ನೋದನ್ನು ಕಾದು ನೋಡಬೇಕು ಎಂದರು.

Translate »