ನ.18ರಿಂದ ರಂಗಪಯಣ: ರಾಜ್ಯದ 9 ಜಿಲ್ಲೆಯ 11 ಕಡೆ ಪ್ರಮುಖ ಮೂರು ನಾಟಕಗಳ ಪ್ರದರ್ಶನ
ಮೈಸೂರು

ನ.18ರಿಂದ ರಂಗಪಯಣ: ರಾಜ್ಯದ 9 ಜಿಲ್ಲೆಯ 11 ಕಡೆ ಪ್ರಮುಖ ಮೂರು ನಾಟಕಗಳ ಪ್ರದರ್ಶನ

November 9, 2019

ಮೈಸೂರು,ನ.8(ಎಂಟಿವೈ)- ರಂಗಾಯಣದ ವತಿ ಯಿಂದ ಸಂಚಾರಿ ರಂಗಘಟಕದ ಕಲಾವಿದರುಗಳಿಂದ ನ.18ರಿಂದ ಡಿ.24ವರೆಗೆ ರಾಜ್ಯದ 9 ಜಿಲ್ಲೆಗಳ 11 ಸ್ಥಳ ಗಳಲ್ಲಿ 3 ನಾಟಕಗಳ ಪ್ರದರ್ಶಿಸುವ `ರಂಗಪಯಣ’ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.

ಮೈಸೂರು ರಂಗಾಯಣ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಂಗಾಯಣದ ಕಿರಿಯ ಕಲಾವಿದರ ಒಳಗೊಂಡಿರುವ ಸಂಚಾರಿ ರಂಗಘಟಕ, ರಾಜ್ಯದ ಎಲ್ಲೆಡೆ ಪ್ರವಾಸ ಕೈಗೊಂಡು 3 ನಾಟಕಗಳನ್ನು ಪ್ರದರ್ಶಿ ಸಲು ಮುಂದಾಗಿದೆ. ಹಿರಿಯ ರಂಗನಿರ್ದೇಶಕ ಚಿದಂಬರ ರಾವ್ ಜಂಬೆ ನಿರ್ದೇಶನದ `ಬೆಂದಕಾಳು ಆನ್ ಟೋಸ್ಟ್’, ಕೇರಳದ ರಂಗನಿರ್ದೇಶಕ ಚಂದ್ರಹಾಸನ್ ನಿರ್ದೇಶನದ `ಆರ್ಕೇಡಿಯಾದಲ್ಲಿ ಪಕ್’ ಹಾಗೂ ಶ್ರವಣ್‍ಕುಮಾರ್ ಹೆಗ್ಗೋಡು ನಿರ್ದೇಶನ `ರೆಕ್ಸ್ ಅವರ್ಸ್’-ಡೈನೋ ಏಕಾಂಗಿ ಪಯಣ’ ನಾಟಕ ಪ್ರದರ್ಶಿಸಲಿದ್ದಾರೆ ಎಂದರು.

ನ.18ರಂದು ಬಳ್ಳಾರಿಯಿಂದ ಆರಂಭÀವಾಗುವ ರಂಗ ಪಯಣ 37 ದಿನಗಳು ಉತ್ತರ ಕರ್ನಾಟಕದ ಒಂಭತ್ತು ಜಿಲ್ಲೆಗಳಲ್ಲಿ ಸಂಚರಿಸಲಿದೆ. ಒಟ್ಟು 11 ಸ್ಥಳಗಳಲ್ಲಿ ನಾಟಕ ಪ್ರದರ್ಶಿಸಲಿದ್ದಾರೆ. ತಾಲೂಕು ಕೇಂದ್ರಗಳಲ್ಲೂ ಪ್ರದರ್ಶನ ನೀಡಬೇಕೆಂದು ನಿರ್ಧರಿಸಲಾಗಿದೆ. ನಾಟಕ ಪ್ರದರ್ಶನವು ಪ್ರತಿ ದಿನ ಸಂಜೆ ನಡೆಯಲಿದ್ದು, ಬೆಳಿಗ್ಗೆ ಯಾವುದಾ ದರೂ ಶಾಲಾ-ಕಾಲೇಜು ಆಡಳಿತ ಮಂಡಳಿ ಕೋರಿದರೆ, ನಾಟಕವನ್ನು ಪ್ರದರ್ಶಿಸಲಾಗುತ್ತದೆ. ರಂಗಾಯಣದ ವತಿ ಯಿಂದಲೇ 3 ನಾಟಕಗಳ ರಂಗವೇದಿಕೆ ಸಜ್ಜುಗೊಳಿಸಲಾ ಗಿದೆ. ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನೂ ರಂಗ ಸಂಚಾರಿ ತಂಡವೇ ಮಾಡಿಕೊಳ್ಳಲಿದೆ. ಭಾರತೀಯ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಪ್ರಕಾಶ ಗರುಡ ರಂಗಪಯಣ ನೇತೃತ್ವ ವಹಿಸಲಿದ್ದು, ಯೋಗಾನಂದ ಅರಸೀಕೆರೆ ವ್ಯವ ಸ್ಥಾಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಬೇಸಿಗೆಯಲ್ಲಿ ಉತ್ತರ ಕರ್ನಾಟಕದಲ್ಲಿ ನಾಟಕ ಪ್ರದ ರ್ಶನ ಮಾಡುವುದು ಕಷ್ಟ. ಇದನ್ನು ಮನಗಂಡು ಮೊದಲ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ರಂಗ ಪ್ರವಾಸ ಕೈಗೊಳ್ಳಲಾಗಿದೆ. ನಂತರ ದಕ್ಷಿಣ ಭಾಗದಲ್ಲಿ ರಂಗ ಸಂಚಾರ ನಡೆಸಲಾಗುವುದು ಎಂದರು.

ಇಂದು ಸಂಜೆ ಭೂಮಿಗೀತದಲ್ಲಿ ‘ಬೆಂದಕಾಳು ಆನ್ ಟೋಸ್ಟ್’: ರಂಗಾಯಣದ ಭೂಮಿಗೀತದಲ್ಲಿ ನಾಳೆ(ನ.9) ಸಂಜೆ 6.30ಕ್ಕೆ ಡಾ.ಗಿರೀಶ್ ಕಾರ್ನಾಡ್ ರಚನೆಯ ಚಿದಂ ಬರರಾವ್ ಜಂಬೆ ನಿರ್ದೇಶನದ ‘ಬೆಂದಕಾಳು ಆನ್ ಟೋಸ್ಟ್’ ಹೊಸ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ರಂಗ ಸಂಚಾರಿ ರಂಗಘಟಕದ 2019-20ನೇ ಸಾಲಿನ ಕಿರಿಯ ಕಲಾವಿದರು ನಾಟಕದಲ್ಲಿ ಅಭಿನಯಿಸುತ್ತಿದ್ದು, ಮೊದಲ ಪ್ರದರ್ಶನ ಮೈಸೂರಿನಲ್ಲಿ ಏರ್ಪಡಿಸಲಾಗಿದೆ ಎಂದರು

ನಾಟಕದ ನಿರ್ದೇಶಕ ಚಿದಂಬರರಾವ್ ಜಂಬೆ ಮಾತನಾಡಿ, ಇದೊಂದು ಮರಾಠಿ ಮೂಲದ ನಾಟಕ. ಗಿರೀಶ್ ಕಾರ್ನಾಡರು ತಾವು ಬೆಂಗಳೂರಿನಲ್ಲಿ ನಗರೀ ಕರಣದಿಂದ ಅನುಭÀವಿಸಿದ ತಲ್ಲಣ, ಸಮಸ್ಯೆಗಳನ್ನು ನಾಟಕ ದಲ್ಲಿ ಅಳವಡಿಸಲಾಗಿದೆ. ‘ಬೆಂದಕಾಳು ಆನ್ ಟೋಸ್ಟ್’ ಪ್ರಸ್ತುತ ನಾಗರಿಕ ಬದುಕಿನತ್ತ ನಾಗಾಲೋಟದಲ್ಲಿ ಮಂಕು ಕವಿದ ಸಾವಿರಾರು ತಲೆಗಳಿಗೆ ಸ್ವಾದಿಷ್ಟ ಆಹಾರವಾಗುತ್ತಿ ರುವ ಮಾಯಾನಗರಿಯ ನಿಜ ಬಿಕ್ಕಟ್ಟಿನೆಡೆಗೆ ಸೃಜನಶೀಲ ನಾಟಕದ ಮೂಲದ ಒಂದು ನೋಟವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಂಗಶಿಕ್ಷಣ ಕೇಂದ್ರ ಪ್ರಾಂಶುಪಾಲ ಪ್ರಕಾಶ ಗರುಡ, ನಿರ್ದೇಶಕ ಶ್ರವಣ್ ಹೆಗ್ಗೋಡು ಇದ್ದರು.

ರಂಗ ಸಂಚಾರಿ ಘಟಕದ ರಂಗಪಯಣದ ವಿವರ:
(ಪ್ರತಿ ದಿನ ಸಂಜೆ 6.30ಕ್ಕೆ ಪ್ರದರ್ಶನ)
1. ರಾಘವ ಕಲಾಮಂದಿರ, ಬಳ್ಳಾರಿ
ನ.18ರಂದು `ಆರ್ಕೇಡಿಯಾದಲ್ಲಿ ಪಕ್’, ನ.19ರಂದು `ಬೆಂದಕಾಳು ಆನ್ ಟೋಸ್ಟ್’, ನ.20ರಂದು `ರೆಕ್ಸ್ ಅವರ್ಸ್’
2. ಜಿಲ್ಲಾ ರಂಗಮಂದಿರ, ರಾಯಚೂರು
ನ.22ರಂದು `ಆರ್ಕೇಡಿಯಾದಲ್ಲಿ ಪಕ್’, ನ.23ರಂದು `ಬೆಂದಕಾಳು ಆನ್ ಟೋಸ್ಟ್’, ನ.24ರಂದು `ರೆಕ್ಸ್ ಅವರ್ಸ್’
3. ಜಿಲ್ಲಾ ರಂಗಮಂದಿರ, ಬೀದರ್
ನ.26ರಂದು `ಆರ್ಕೇಡಿಯಾದಲ್ಲಿ ಪಕ್’, ನ.27ರಂದು `ಬೆಂದಕಾಳು ಆನ್ ಟೋಸ್ಟ್’, ನ.28ರಂದು `ರೆಕ್ಸ್ ಅವರ್ಸ್’
4. ಜಿಲ್ಲಾ ರಂಗಮಂದಿರ, ಕಲುಬುರಗಿ
ನ.30ರಂದು `ಆರ್ಕೇಡಿಯಾದಲ್ಲಿ ಪಕ್’, ಡಿ.1ರಂದು `ಬೆಂದಕಾಳು ಆನ್ ಟೋಸ್ಟ್’, ಡಿ.2ರಂದು `ರೆಕ್ಸ್ ಅವರ್ಸ್’
5. ಜಿಲ್ಲಾ ರಂಗಮಂದಿರ, ಬಿಜಾಪುರ
ಡಿ.3ರಂದು `ಆರ್ಕೇಡಿಯಾದಲ್ಲಿ ಪಕ್’, ಡಿ.4ರಂದು `ಬೆಂದಕಾಳು ಆನ್ ಟೋಸ್ಟ್’, ಡಿ.5ರಂದು `ರೆಕ್ಸ್ ಅವರ್ಸ್’
6. ವಿಜಯ ಮಹಾಂತೇಶ ಅನುಭವ ಮಂಟಪ ಆವರಣ, ಇಳಕಲ್ ಬಾಗಲಕೋಟೆ
ಡಿ.7 ರಂದು `ಆರ್ಕೇಡಿಯಾದಲ್ಲಿ ಪಕ್’, ಡಿ.8ರಂದು `ಬೆಂದಕಾಳು ಆನ್ ಟೋಸ್ಟ್’, ಡಿ.9ರಂದು `ರೆಕ್ಸ್ ಅವರ್ಸ್’
7. ಹರಪ್ಪನಹಳ್ಳಿ, ಬಳ್ಳಾರಿ
ಡಿ.11ರಂದು `ರೆಕ್ಸ್ ಅವರ್ಸ್’, ಡಿ.11ರಂದು `ಆರ್ಕೇಡಿಯಾ ದಲ್ಲಿ ಪಕ್’, ಡಿ.12ರಂದು `ಬೆಂದಕಾಳು ಆನ್ ಟೋಸ್ಟ್’,
8. ಹಗರಿಬೊಮ್ಮನಹಳ್ಳಿ, ಬಳ್ಳಾರಿ
ಡಿ.11ರಂದು `ಆರ್ಕೇಡಿಯಾದಲ್ಲಿ ಪಕ್’, ಡಿ.12ರಂದು `ಬೆಂದಕಾಳು ಆನ್ ಟೋಸ್ಟ್’, ಡಿ.13ರಂದು `ರೆಕ್ಸ್ ಅವರ್ಸ್’
9. ರಂಗಭಾರತಿ ರಂಗಮಂದಿರ, ಹೂವಿನ ಹಡಗಲಿ, ಬಳ್ಳಾರಿ
ಡಿ.16ರಂದು `ಆರ್ಕೇಡಿಯಾದಲ್ಲಿ ಪಕ್’, ಡಿ.17 ರಂದು `ಬೆಂದಕಾಳು ಆನ್ ಟೋಸ್ಟ್’, ಡಿ.18ರಂದು `ರೆಕ್ಸ್ ಅವರ್ಸ್’
10. ಬಸವರಾಜ ರಾಜಗುರು ಬಯಲು ರಂಗಮಂದಿರ, ಧಾರವಾಡ
ಡಿ.19ರಂದು `ಆರ್ಕೇಡಿಯಾದಲ್ಲಿ ಪಕ್’, ಡಿ.20ರಂದು `ಬೆಂದಕಾಳು ಆನ್ ಟೋಸ್ಟ್’, ಡಿ.21ರಂದು `ರೆಕ್ಸ್ ಅವರ್ಸ್’
11. ಚಿಂದೋಡಿ ಲೀಲಾ ರಂಗಮಂದಿರ, ಬೆಳಗಾವಿ
ಡಿ.22ರಂದು `ಆರ್ಕೇಡಿಯಾದಲ್ಲಿ ಪಕ್’, ಡಿ.23ರಂದು `ಬೆಂದಕಾಳು ಆನ್ ಟೋಸ್ಟ್’, ಡಿ.24ರಂದು `ರೆಕ್ಸ್ ಅವರ್ಸ್’

Translate »