ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ, ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಏಪ್ರಿಲ್ 9 ರಿಂದ 13 ರವರೆಗೂ ಜಂಟಿ ಯಾಗಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣಾ ಕಣಕ್ಕಿಳಿದ ನಂತರ ಸ್ಥಳೀಯ ವಾಗಿ ಎದ್ದಿರುವ ಅಸಮಾಧಾನ ಹೋಗಲಾಡಿಸಿ, ಉಭಯ ಪಕ್ಷಗಳ ಕಾರ್ಯಕರ್ತರನ್ನು ಒಂದುಗೂಡಿಸುವ ಉದ್ದೇಶ ದಿಂದಲೇ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ.
ದೇವೇಗೌಡರು ಕಣಕ್ಕಿಳಿದಿರುವ ತುಮಕೂರು ಲೋಕ ಸಭಾ ಕ್ಷೇತ್ರದಲ್ಲಿ ಉಭಯ ನಾಯಕರು ಏಪ್ರಿಲ್ 10 ರಂದು ಇಡೀ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಏಪ್ರಿಲ್ 9 ರಂದು ಮೈಸೂರು ಲೋಕಸಭಾ ಕ್ಷೇತ್ರದಲ್ಲೂ 11 ರಂದು ಹಾಸನ ಲೋಕಸಭಾ ವ್ಯಾಪ್ತಿಗೆ ಬರುವ ಅರಕಲಗೂಡು, ಹಾಸನ, ಅರಸೀಕೆರೆ ಮತ್ತು ಕಡೂರಿನಲ್ಲಿ ಉಭಯ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೂ ದೇವೇಗೌಡರ ಜೊತೆ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ಮಳವಳ್ಳಿ, ನಾಗಮಂಗಲ, ಕೆ.ಆರ್.ನಗರ, ಕೆ.ಆರ್. ಪೇಟೆ ಸೇರಿ ದಂತೆ ಕ್ಷೇತ್ರದ ವಿವಿಧೆಡೆ ಬೆಳಗಿನಿಂದ ಸಂಜೆಯವರೆಗೂ ಅಭ್ಯರ್ಥಿಪರ ಮತ ಯಾಚಿಸುವುದರ ಜೊತೆಗೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಏಪ್ರಿಲ್ 13 ರಂದು ಬೆಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಕೆಲವು ಭಾಗಗಳಲ್ಲಿ ಸಭೆಗಳನ್ನು ನಡೆಸಿ, ಕಾಂಗ್ರೆಸ್ ಅಭ್ಯರ್ಥಿಗಳ ಪರ ದೇವೇಗೌಡ ಮತ್ತು ಸಿದ್ದ ರಾಮಯ್ಯ ಮತಯಾಚಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಉಭಯ ಪಕ್ಷದ ರಾಜ್ಯಮಟ್ಟದ ನಾಯಕರು ಒಂದಾ ಗಿದ್ದರೂ, ಮೈಸೂರು, ಮಂಡ್ಯ, ಹಾಸನ ಹಾಗೂ ತುಮ ಕೂರಿನಲ್ಲಿ ಉಭಯ ಪಕ್ಷದ ಕಾರ್ಯಕರ್ತರಲ್ಲಿ ಸಮನ್ವ ಯದ ಕೊರತೆ ಕಾಣುತ್ತದೆ. ಅಷ್ಟೇ ಅಲ್ಲ ಈ ಕ್ಷೇತ್ರಗಳಲ್ಲಿ ನಿರ್ಣಯಕ ಪಾತ್ರ ವಹಿಸುವ ಒಕ್ಕಲಿಗ ಮತ್ತು ಕುರುಬ ಸಮಾಜಗಳು ಒಂದಾಗಿ ಚುನಾವಣೆಯನ್ನೆದುರಿಸಲು ಹಿಂದುಮುಂದು ನೋಡುತ್ತಿವೆ.
ಈ ಮನೋಭಾವವನ್ನು ಹೋಗಲಾಡಿಸಿ, ಬಿಜೆಪಿ ವಿರುದ್ಧ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಪಡೆಯಲು ಆ ಸಮಾಜದ ನಾಯಕರುಗಳೇ ಏಪ್ರಿಲ್ 9 ರಿಂದ ಬೀದಿಗಿಳಿಯುತ್ತಿದ್ದಾರೆ. ಒಂದೆಡೆ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸುವುದರ ಜೊತೆಗೆ ಸಮಾಜದ ಮುಖಂಡರ ಜೊತೆ ಪ್ರತ್ಯೇಕವಾಗಿ ಮಾತನಾಡಿ, ವೈಮನಸ್ಸು ಹೋಗಲಾಡಿಸಿ, ರಾಜ್ಯದ ನಿರ್ಧಾರಕ್ಕೆ ತಲೆಬಾಗಿ ತಮ್ಮಲ್ಲಿನ ಯಾವುದೇ ಪಕ್ಷದ ಅಭ್ಯರ್ಥಿ ಇದ್ದರೂ ಒಂದಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿಕೊಳ್ಳಲಿದ್ದಾರೆ.
ಪ್ರದೇಶ ಕಾಂಗ್ರೆಸ್ ದೇವೇಗೌಡರ ಜೊತೆ ಸಮಾ ಲೋಚನೆ ನಡೆಸಿ, ಈ ಪ್ರವಾಸವನ್ನು ಏರ್ಪಡಿಸಿದೆ. ಕಾಂಗ್ರೆಸ್‍ನ ಕೋರಿಕೆ ಮೇರೆಗೆ ಮುಖ್ಯಮಂತ್ರಿಯವರು ಇಂದು ಚಿತ್ರದುರ್ಗ, ಕಾಂಗ್ರೆಸ್ ಅಭ್ಯರ್ಥಿಪರ, ನಾಳೆ ಬೀದರ್ ಅಭ್ಯರ್ಥಿಪರ ಪ್ರಚಾರ ನಡೆಸಲಿದ್ದಾರೆ.