‘ಜರಿದವರೆನ್ನ ಜನ್ಮ ಬಂಧುಗಳೆಂಬೆ’: ಬೈದರೂ ತಾಳ್ಮೆ ಕಳೆದುಕೊಳ್ಳದೆ ಪ್ರತಿಕ್ರಿಯಿಸಿದ ಸಚಿವೆ ಸುಷ್ಮಾ ಸ್ವರಾಜ್!
ಮೈಸೂರು

‘ಜರಿದವರೆನ್ನ ಜನ್ಮ ಬಂಧುಗಳೆಂಬೆ’: ಬೈದರೂ ತಾಳ್ಮೆ ಕಳೆದುಕೊಳ್ಳದೆ ಪ್ರತಿಕ್ರಿಯಿಸಿದ ಸಚಿವೆ ಸುಷ್ಮಾ ಸ್ವರಾಜ್!

April 2, 2019

ನವದೆಹಲಿ: ಜನರ ಸಮಸ್ಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಂದಿ ಸುವ ಸುಷ್ಮಾ ಸ್ವರಾಜ್ ಎಂತಹ ಸಂದರ್ಭಗಳಲ್ಲೂ ತಾಳ್ಮೆ ಕಳೆದುಕೊಂಡು ಪ್ರತಿಕ್ರಿಯೆ ನೀಡಿದ ಉದಾಹರಣೆಗಳಿಲ್ಲ. ಇದು ಮತ್ತೊಮ್ಮೆ ಸಾಬೀತಾಗಿದೆ.

ತಾವೇಕೆ ಹೆಸರಿನ ಹಿಂದೆ ಚೌಕೀದಾರ್ ಎಂದು ಹಾಕಿಕೊಂಡಿದ್ದೇನೆ ಎಂಬುದನ್ನು ಟ್ವೀಟಿಗರಿಗೆ ಹೇಳಿದ್ದ ಸುಷ್ಮಾ ಸ್ವರಾಜ್ ಈಗ ವ್ಯಕ್ತಿಯೋರ್ವ ತಮ್ಮನ್ನು ತಮ್ಮ ಇಲಾಖೆಯನ್ನು ನಿಂದಿಸಿದರೂ ಸಹ ತಾಳ್ಮೆಯಿಂದ ಉತ್ತರಿಸಿದ್ದಾರೆ.

ಸರಿಯಾದ ಸಮಯದಲ್ಲಿ ಪಾಸ್ಪೋರ್ಟ್ ಸಿಗದೇ ಉದ್ಯೋಗ ಕೈತಪ್ಪಿದ್ದರಿಂದ ಹತಾಶ ಗೊಂಡಿದ್ದ ವ್ಯಕ್ತಿ ಯೋರ್ವ ನೀವು ಚೌಕೀ ದಾರ್ ಅಲ್ಲ, ನಾಚಿಕೆಗೇಡಿ, ಅಜ್ಞಾನಿ ಸಚಿ ವರು. ಕೇವಲ ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳುತ್ತೀರಿ, ನಿಮ್ಮ ಹಿತಾಸಕ್ತಿಗಾಗಿ ಹಣ ಕೊಟ್ಟು ಸುದ್ದಿ ಪ್ರಕಟವಾಗುವಂತೆ ಮಾಡುತ್ತೀರಿ. ಆದರೆ 34,000 ರೂಪಾಯಿ ವೇತನ ಪಡೆಯುತ್ತಿದ್ದ ಸಾಮಾನ್ಯ ವ್ಯಕ್ತಿ ನಾನು, ಪಾಸ್ಪೋರ್ಟ್ ಸೂಕ್ತ ಸಮಯಕ್ಕೆ ಸಿಗದ ಕಾರಣ ಉತ್ತಮ ಉದ್ಯೋಗ ಅವಕಾಶವನ್ನು ತಪ್ಪಿಸಿಕೊಂಡೆ. ಈಗಲೂ ಪಾಸ್ಪೋರ್ಟ್ ಹಾಗೂ ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದ್ದೀನಿ ಎಂದು ಟ್ವಿಟರ್ ನಲ್ಲಿ ಸುಷ್ಮಾ ಸ್ವರಾಜ್ ಅವರನ್ನು ಟ್ಯಾಗ್ ಮಾಡಿ ಹೇಳಿದ್ದ.

ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ನಿಮ್ಮ ಅಭಿ ಪ್ರಾಯಕ್ಕೆ, ಮೆಚ್ಚುಗೆಗೆ ಧನ್ಯವಾದಗಳು. ನನ್ನ ಕಚೇರಿ ಅಧಿಕಾರಿಗಳು ನಿಮ್ಮನ್ನು ಸಂಪರ್ಕ ಮಾಡಲಿದ್ದು ಪಾಸ್ಪೋರ್ಟ್ ಪಡೆಯುವುದಕ್ಕೆ ಸಹಕರಿಸಲಿದ್ದಾರೆ ಎಂದಷ್ಟೇ ಹೇಳಿದ್ದಾರೆ.

Translate »