ನೆಲ್ಯಹುದಿಕೇರಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ
ಕೊಡಗು

ನೆಲ್ಯಹುದಿಕೇರಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ

April 3, 2019

ಸಿದ್ದಾಪುರ: ಎಲ್ಲಾ ವರ್ಗಕ್ಕೂ ಸಮಾನವಾಗಿ ಯೋಜನೆಯನ್ನು ನೀಡಿದ ಕೇಂದ್ರ ಸರ್ಕಾರದ ಸಾಧನೆಯನ್ನು ಪ್ರತಿ ಮನೆಗಳಿಗೆ ತಲುಪಿಸುವ ಕೆಲಸ ಕಾರ್ಯ ಕರ್ತರು ಮಾಡಬೇಕಾಗಿದೆ ಎಂದು ಕೊಡಗು- ಮೈಸೂರು ಲೋಕಸಭಾ ಅಭ್ಯರ್ಥಿ ಪ್ರತಾ ಪಸಿಂಹ ನೆಲ್ಯಹುದಿಕೇರಿ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು.

ಕಳೆದ ಹಲವು ವರ್ಷಗಳ ಕಾಲ ದೇಶವ ನ್ನಾಳಿದ ಕಾಂಗ್ರೆಸ್ ಸರಕಾರ ಮಾಡದ ಸಾಧನೆಯನ್ನು 5 ವರ್ಷದಲ್ಲಿ ನರೇಂದ್ರ ಮೋದಿ ಸರಕಾರ ಮಾಡಿದೆ ಎಂದು ಹೇಳಿದ ಅವರು, ಮುಂಬರುವ ಲೋಕಸಭಾ ಚುನಾ ವಣೆಯಲ್ಲಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಪಕ್ಷವು ಅತ್ಯಧಿಕ ಸ್ಥಾನ ಗಳಿಸಿ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿರವರು ಅಧಿಕಾರಕ್ಕೆ ಬರುವುದು ಖಚಿತವೆಂದು ಪ್ರತಾಪಸಿಂಹ ಭವಿಷ್ಯ ನುಡಿದÀರು. ಕಳೆದ ಐದು ವರ್ಷಗಳಿಂದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಯೋಜ ನೆಗಳನ್ನು ಜಾರಿಗೆ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಚುನಾವಣೆ ನಂತರ 4 ಪಥದ ರಸ್ತೆ ಅಭಿವೃದ್ಧಿ ಯಾಗಲಿದೆ, ಮೈಸೂರಿನಿಂದ 6 ರೈಲು ಗಳನ್ನು ಇತರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ರೈಲು ನಿಲ್ದಾಣ, ವಿಮಾನ ನಿಲ್ದಾಣ ಅಭಿವೃದ್ಧಿ ಕಾರ್ಯಗಳನ್ನು ಮಾಡ ಲಾಗಿದೆ. ಜಿಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಈ ಹಿನ್ನಲೆಯಲ್ಲಿ ತನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕೇಂದ್ರ ಸರ್ಕಾರ ಜನಪರ ಆಡಳಿತವನ್ನು ನಡೆಸಿದೆ. ಅಲ್ಲದೇ ಎಲ್ಲಾ ಜಾತಿ, ಜನಾಂ ಗದವರಿಗೆ ಕೇಂದ್ರ ಸರಕಾರದ ಸೌಲಭ್ಯ ಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 380ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ಕೇಂದ್ರದಲ್ಲಿ ಸರ ಕಾರ ರಚಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾದ್ಯಕ್ಷ ಭಾರ ತೀಶ್, ಜಿಲ್ಲಾ ಕಾರ್ಯದರ್ಶಿ ವಿ.ಕೆ. ಲೊಕೇಶ್, ಬಿಜೆಪಿ ಪಕ್ಷದ ಪ್ರಮುಖರಾದ ಅಭಿಮನ್ಯು ಕುಮಾರ್, ಎಸ್.ಜಿ.ಮೇದಪ್ಪ, ಸ್ಥಾನೀಯ ಸಮಿತಿ ಅಧ್ಯಕ್ಷ ಷಾಜಿ, ಬಲ್ಲ ರಂಡ ಮಣಿ ಉತ್ತಪ್ಪ, ಸುರೇಶ್ ಇನ್ನಿ ತರರು ಹಾಜರಿದ್ದರು.

Translate »