ರೈತರ ಪರ ಕೆಲಸ ಮಾಡಲು ಅವಕಾಶ ಕೊಡಿ
ಮಂಡ್ಯ

ರೈತರ ಪರ ಕೆಲಸ ಮಾಡಲು ಅವಕಾಶ ಕೊಡಿ

April 2, 2019

ಕೆ.ಆರ್.ಪೇಟೆ: ನನ್ನ ತಾತ ಮತ್ತು ನನ್ನ ತಂದೆಯವರಂತೆ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸು ಹೊತ್ತು ಬಂದಿದ್ದೇನೆ ಅವರಂತೆಯೇ ರೈತರ ನಡುವೆ ಇದ್ದು ರೈತ ಪರವಾಗಿ ಕೆಲಸ ಮಾಡಲು ಮಂಡ್ಯ ಜಿಲ್ಲೆಯ ಜನತೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್‍ಕುಮಾರ ಸ್ವಾಮಿ ಮನವಿ ಮಾಡಿದರು.

ಅವರು ತಾಲೂಕಿನ ಸಂತೇಬಾಚ ಹಳ್ಳಿ ಹೋಬಳಿಯ ಸಾರಂಗಿ, ಕೈಗೋನ ಹಳ್ಳಿ, ರಂಗನಾಥಪುರ ಕ್ರಾಸ್, ಭಾರತೀ ಪುರ ಕ್ರಾಸ್ ಗ್ರಾಮ ಪಂಚಾಯಿತಿ ಕೇಂದ್ರ ಮತ್ತು ಕಿಕ್ಕೇರಿ ಹೋಬಳಿಯ ಗ್ರಾಮ ಗಳಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ನೆರೆದಿದ್ದ ಬೃಹತ್ ಜನಸ್ತೋಮ ವನ್ನು ಉದ್ದೇಶಿಸಿ ಮಾತನಾಡಿದರು.

ಸಂತೇಬಾಚಹಳ್ಳಿ ಹೋಬಳಿಯ ಏತನೀರಾವರಿ ಯೋಜನೆಗೆ 212ಕೋಟಿ ರೂಗಳನ್ನು ನೀಡಿದ್ದು, ಇದು ಟೆಂಡರ್ ಹಂತದಲ್ಲಿದೆ. ಈ ಯೋಜನೆ ಜಾರಿಯಿಂದ ಸಂತೇಬಾಚಹಳ್ಳಿ ಹೋಬಳಿಯ ಎಲ್ಲಾ ಗ್ರಾಮಗಳ ಕೆರೆಗಳಿಗೆ ಹೇಮಾವತಿ ನೀರನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಜೊತೆಗೆ ಹೋಬ ಳಿಯ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಯೋಜನೆ ಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲು ತಾವು ಶಕ್ತಿ ಮೀರಿ ಶ್ರಮಿಸುವುದಾಗಿ

ನಿಖಿಲ್ ತಿಳಿಸಿದರು. ಮಂಡ್ಯ ಜಿಲ್ಲೆಯ ಜನತೆ ಪ್ರಬುದ್ಧರಾಗಿದ್ದು ಸ್ವಾಭಿಮಾನಿಗಳಾಗಿ ದ್ದಾರೆ. ಜಿಲ್ಲೆಯ ಸಮಗ್ರವಾದ ಅಭಿವೃದ್ಧಿ ಹಾಗೂ ರೈತರ ನೆಮ್ಮದಿಯ ಜೀವನಕ್ಕಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣದಲ್ಲಿರುವ ನನಗೆ ಭಾರೀ ಬಹುಮತಗಳ ಅಂತರದಿಂದ ಆಯ್ಕೆ ಮಾಡುವ ಮೂಲಕ ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿಹಿಡಿಯುವ ಜೊತೆಗೆ ನಿಮ್ಮ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಬೈಕ್ ಷೋ ಮೂಲಕ ಆತ್ಮೀಯವಾಗಿ ಸ್ವಾಗತಿಸಿ, ಪುಷ್ಪ ವೃಷ್ಟಿ ಮಾಡಿ, ಆರತಿ ಬೆಳಗಿ ಪೂರ್ಣ ಕುಂಭ ಸ್ವಾಗತ ನೀಡಿ ಜನಪದ ಕಲಾ ತಂಡಗಳ ಭವ್ಯ ಮೆರವಣಿಗೆ ಯೊಂದಿಗೆ ನಿಖಿಲ್‍ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡರು.

ಕುಮಾರಣ್ಣನೇ ನನಗೆ ಸ್ಟಾರ್ ಪ್ರಚಾರಕರು: ನನ್ನ ಪರವಾಗಿ ಚಿತ್ರರಂಗದ ಯಾವುದೇ ನಾಯಕ ನಟರು ಪ್ರಚಾರ ಮಾಡುತ್ತಿಲ್ಲ, ಚಿತ್ರರಂಗವನ್ನು ನನ್ನ ಪರ ಪ್ರಚಾರಕ್ಕೆ ಕರೆ ತಂದು ದುರುಪಯೋಗ ಮಾಡಿಕೊಳ್ಳಲ್ಲ, ನನಗೆ ನನ್ನ ತಂದೆಯವರಾದ ಮುಖ್ಯ ಮಂತ್ರಿ ಕುಮಾರಣ್ಣ ಅವರೇ ಸ್ಟಾರ್ ಜೆಡಿಎಸ್ ಕಾರ್ಯಕರ್ತರೇ ಸೈನಿಕರು ಎಂದರು.
ಪ್ರಚಾರ ಸಭೆಯಲ್ಲಿ ಶಾಸಕರುಗಳಾದ ಡಾ.ಕೆ.ಸಿ.ನಾರಾಯಣಗೌಡ, ಸಿ.ಎನ್. ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಜಿ.ಪಂ.ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ, ಜಿ.ಪಂ.ಸದಸ್ಯರಾದ ಬಿ.ಎಲ್.ದೇವರಾಜು, ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಯುವ ಘಟಕದ ಅಧ್ಯಕ್ಷ ಕೆ.ಆರ್.ಹೇಮಂತ ಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷೆ ಡಾ.ಜೆ.ಪ್ರೇಮಕುಮಾರಿ, ಮಾಜಿ ಉಪಾಧ್ಯಕ್ಷ ಡಾ.ಕೆ.ಎಸ್.ಪ್ರಭಾಕರ್, ತಾ.ಪಂ.ಉಪಾಧ್ಯಕ್ಷ ರವಿ, ಸದಸ್ಯ ಎಂ.ಮೋಹನ್, ಭಾರತೀ ಪುರ ಗ್ರಾ.ಪಂ.ಅಧ್ಯಕ್ಷ ಮಂಜುನಾಥ್, ಮುಖಂಡರಾದ ಸಿ.ಎನ್.ಪುಟ್ಟಸ್ವಾಮಿಗೌಡ, ಕೆ.ಟಿ.ಗಂಗಾಧರ್, ಕೆ.ಶ್ರೀನಿವಾಸ್, ಬಸ್ ಕೃಷ್ಣೇಗೌಡ, ಎಸ್.ಎಲ್.ರಮೇಶ್, ರಾಜೇನ ಹಳ್ಳಿ ಕುಮಾರಸ್ವಾಮಿ, ಕಿಕ್ಕೇರಿ ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ಕಾಯಿ ಮಂಜೇಗೌಡ, ಮೊಟ್ಟೆ ಮಂಜು, ಗ್ರಾ.ಪಂ.ಮಾಜಿ ಅಧ್ಯಕ್ಷ ಪರಮೇಶ್, ಕಸಬಾ ಹೋಬಳಿ ಜೆಡಿಎಸ್ ಅಧ್ಯಕ್ಷ ವಸಂತಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಲೋಕೇಶ್, ಭಾರತೀಪುರ ಚಂದ್ರೇಗೌಡ, ನಿರ್ದೇಶಕರಾದ ಐನೋರಹಳ್ಳಿ ಮಲ್ಲೇಶ್, ಚಂದ್ರಹಾಸ, ಮಹೇಶ್ವರಿ ನರಸೇಗೌಡ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಸ್.ಆರ್.ದಿನೇಶ್, ಜಿಲ್ಲಾ ಯುವ ಜೆಡಿಎಸ್ ಉಪಾಧ್ಯಕ್ಷ ಶ್ರೀಧರ್‍ಸಿರಿವಂತ್, ಟೌನ್ ಯುವ ಜೆಡಿಎಸ್ ಅಧ್ಯಕ್ಷ ಕೆ.ಸಚಿನ್‍ಕೃಷ್ಣ, ಪುರಸಭೆಯ ಸದಸ್ಯರಾದ ಕೆ.ಎಸ್.ಸಂತೋಷ್ ಸೇರಿದಂತೆ ಸಾವಿರಾರು ಜನರು ಪ್ರಚಾರ ಸಭೆಗಳು ಹಾಗೂ ರೋಡ್ ಷೋಗಳಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್ ಮುಖಂಡರ ಭೇಟಿ: ಜಿಲ್ಲಾ ಪಂಚಾಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು ಅವರ ಮನೆಗೆ ಭೇಟಿ ನೀಡಿದ ನಿಖಿಲ್‍ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವ ಮೂಲಕ ಮೈತ್ರಿ ಧರ್ಮವನ್ನು ಪಾಲಿಸುವಂತೆ ಕೈಮುಗಿದು ಮನವಿ ಮಾಡಿದರು.

Translate »