ಹಾಸನದಿಂದಲೇ ದೇವೇಗೌಡರ ಸ್ಪರ್ಧೆ ಸಾಧ್ಯತೆ
ಮೈಸೂರು

ಹಾಸನದಿಂದಲೇ ದೇವೇಗೌಡರ ಸ್ಪರ್ಧೆ ಸಾಧ್ಯತೆ

March 19, 2019

ಬೆಂಗಳೂರು; ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟಿರುವ ತವರು ಹಾಸನ ಲೋಕಸಭಾ ಕ್ಷೇತ್ರ ದಲ್ಲೇ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ ಎಂದು ಜೆಡಿಎಸ್ ಉನ್ನತ ಮೂಲಗಳು ತಿಳಿಸಿವೆ. ಕಳೆದ 2 ದಿನಗಳ ರಾಜ ಕೀಯ ಬೆಳವಣಿಗೆಯಿಂದಾಗಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರು ದೇವೇಗೌಡರು ಹಾಸನದಲ್ಲೇ ಸ್ಪರ್ಧಿಸುವುದು ಸೂಕ್ತ ಎಂಬ ನಿರ್ಧಾ ರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ. ಈ ಮೂವರು ಕಳೆದ 2 ದಿನಗಳಿಂ ದಲೂ ದೇವೇಗೌಡರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆಯಾದರೂ ಗೌಡರು ಈವರೆವಿಗೂ ತಮ್ಮ ನಿರ್ಧಾರವನ್ನು ತಿಳಿಸಿಲ್ಲ. ಈ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಲು ಮೈತ್ರಿ
ಪಕ್ಷವಾದ ಕಾಂಗ್ರೆಸ್‍ನ ಕೆಲ ಮುಖಂಡರೇ ತಂತ್ರ ಹೆಣೆಯುತ್ತಿದ್ದಾರೆ. ನಿಮ್ಮನ್ನು ಸೋಲಿಸುವುದೇ ಅವರ ಗುರಿಯಾಗಿದೆ. ಈ ವಿಚಾರವಾಗಿ ನನಗೆ ಬಂದ ಖಚಿತ ಮಾಹಿತಿಯನ್ನು ನಿಮಗೆ ತಿಳಿಸುತ್ತಿದ್ದೇನೆ. ಆದ್ದರಿಂದ ನೀವು ಹಾಸನದಲ್ಲೇ ಸ್ಪರ್ಧಿಸುವುದು ಸೂಕ್ತ ಎಂದು ಸಿಎಂ ಕುಮಾರಸ್ವಾಮಿ ಅವರು ದೇವೇಗೌಡರಿಗೆ ತಿಳಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಹೆಚ್.ಡಿ.ರೇವಣ್ಣ ಅವರು, ದೇವೇಗೌಡರು ಕೊನೆಯ ಚುನಾವಣೆಯನ್ನು ಹಾಸನದಲ್ಲೇ ಸ್ಪರ್ಧಿಸಿ ಸಂಸದರಾಗಬೇಕು ಎಂಬುದು ನಮ್ಮ ಬಯಕೆಯಾಗಿದೆ. ಈ ವಿಚಾರವನ್ನು ಅವರಿಗೆ ತಿಳಿಸಿದ್ದೇವೆ ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಸುದ್ದಿಗಾರರ ಜೊತೆ ಮಾತನಾಡುತ್ತಾ, ದೇವೇಗೌಡರು ಕ್ಷೇತ್ರ ತೊರೆದಿರುವ ಬಗ್ಗೆ ಅಲ್ಲಿನ ಜನರೂ ಬೇಸರಗೊಂಡಿದ್ದಾರೆ. ಜನರು ಭಾವನಾತ್ಮಕವಾಗಿದ್ದು, ದೇವೇಗೌಡರ ಸ್ಪರ್ಧೆಯನ್ನು ಇಚ್ಛಿಸುತ್ತಿದ್ದಾರೆ. ಅವರು ಹಾಸನದಲ್ಲೇ ಸ್ಪರ್ಧಿಸಿದರೆ, ನಾನು ಕ್ಷೇತ್ರಾದ್ಯಂತ ಪ್ರವಾಸ ಮಾಡಿ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದಿದ್ದಾರೆ.

 

Translate »