ತುಮಕೂರು ಕೈ ತಪ್ಪಿದ್ದಕ್ಕೆ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಪರೋಕ್ಷ ಕಿಡಿ
ಮೈಸೂರು

ತುಮಕೂರು ಕೈ ತಪ್ಪಿದ್ದಕ್ಕೆ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಪರೋಕ್ಷ ಕಿಡಿ

March 19, 2019

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರ ಕೈ ತಪ್ಪಿ ದ್ದಕ್ಕೆ ಆತಂಕ, ಅಸಮಾಧಾನ ಎರಡೂ ಆಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿ ದ್ದಾರೆ. ಈ ಕ್ಷೇತ್ರ ಕೈ ತಪ್ಪಿಸಿ, ಹೆಚ್ಚು ಅಂಕ ಪಡೆದಿದ್ದೇನೆ ಎಂದು ಭ್ರಮೆಯ ಲ್ಲಿದ್ದರೆ, ಅದಕ್ಕೆ ಮುಂದೆ ಉತ್ತರ ದೊರೆ ಯಲಿದೆ ಎಂದು ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಹೆಸರಿಸದೇ ಪರೋಕ್ಷ ವಾಗಿ ಕಿಡಿಕಾರಿದರು. ಪಕ್ಷದ ಹಾಲಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ರು. ಗೆದ್ದ ಅಭ್ಯರ್ಥಿಗಳ ಬದಲಾ ವಣೆ ಬೇಡ ಅಂತ ಮೈತ್ರಿ ಆಗಿತ್ತು. ನಾವು ಮಂಡ್ಯ, ಹಾಸನ ಕೇಳೊದು ಬೇಡ ಅಂತ ನಿರ್ಧಾರ ತೆಗೆದುಕೊಂಡಿ ದ್ದೆವು. ಈ ಸಂಬಂಧ ಸ್ಕ್ರೀನಿಂಗ್ ಕಮಿಟಿ ಯಲ್ಲೂ ಚರ್ಚೆ ಆಗಿತ್ತು. ಸಭೆ ಮುಗಿಸಿ ಹೊರ ಬಂದ ನಂತರ ಹೊಸ ಬೆಳ ವಣಿಗೆ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇತ್ತು. ವರಿಷ್ಠರ ಈ ತೀರ್ಮಾನ ಆತಂಕ ಹಾಗೂ ಅಸಮಾಧಾನ ತಂದಿದೆ. ಈ ಸಂಬಂಧ ನಮ್ಮ ನಾಯಕರಿಗೆ ನನ್ನ ಅಭಿಪ್ರಾಯ ಹೇಳಲಾಗಿದೆ. ಜೆಡಿಎಸ್ ನಾಯಕರೊಂದಿಗೆ ಮಾತನಾಡಿ ಕ್ಷೇತ್ರ ಬಿಟ್ಟು ಕೊಡುವಂತೆ ಮನವಿ ಮಾಡಿದ್ದೇನೆ ಎಂದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರು ಹಾಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿ ದ್ದಾರೆ. ತೀರ್ಮಾನ ನೋಡಬೇಕು. ದೇವೇಗೌಡರೇ ನಿಂತರೆ ಅದಕ್ಕೆ ಸ್ವಾಗತ. ಕ್ಷೇತ್ರ ಹಂಚಿಕೆಯಲ್ಲಿ ಡಾ. ಪರಮೇಶ್ವರ್ ಅವರ ಪ್ರಶ್ನೆ ಬರಲ್ಲ. ಮೈತ್ರಿ ಮುಂದುವರೆಯ ಬೇಕು. ಹೊಂದಾಣಿಕೆಯಲ್ಲಿ ಪ್ರಾಮಾಣಿಕತೆ ತೋರಿದರೆ ಗೆಲ್ಲಲು ಸಾಧ್ಯ. ಸುಲಭವಾಗಿ ಗೆಲ್ಲುವ ಸೀಟುಗಳನ್ನು ಬುದ್ಧಿವಂತಿಕೆಯಿಂದ ಹಂಚಿಕೊಳ್ಳಬೇಕು ಎಂದರು.

Translate »