ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ 2 ಕೆಜಿ ಚಿನ್ನಾಭರಣ ದರೋಡೆ ಪ್ರಕರಣ ಮೂವರು ಅಂತರರಾಜ್ಯ ಖದೀಮರ ಬಂಧನ, ಚಿನ್ನಾಭರಣ ವಶ
ಮೈಸೂರು

ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ 2 ಕೆಜಿ ಚಿನ್ನಾಭರಣ ದರೋಡೆ ಪ್ರಕರಣ ಮೂವರು ಅಂತರರಾಜ್ಯ ಖದೀಮರ ಬಂಧನ, ಚಿನ್ನಾಭರಣ ವಶ

March 19, 2019

ಮೈಸೂರು: ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರಿ ಯೊಬ್ಬರಿಂದ 2 ಕೆಜಿಗೂ ಹೆಚ್ಚು ಚಿನ್ನಾ ಭರಣ ದರೋಡೆ ಮಾಡಿದ್ದ ಪ್ರಕರಣ ವನ್ನು ಭೇದಿಸಿರುವ ಮೈಸೂರು ರೈಲ್ವೆ ಪೊಲೀಸರು, ಮೂವರು ಆರೋಪಿ ಗಳನ್ನು ಬಂಧಿಸಿ, 1.50 ಕೆಜಿ ಚಿನ್ನಾ ಭರಣವನ್ನು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರ ಮೂಲದ ರಮೇಶ್ ಪಿಟ್ಟೇಕರ್, ಮಾರುತಿ ಪಿಟ್ಟೇಕರ್ ಹಾಗೂ ಅನಂತ ದಾಂಡೆಯನ್ನು ಬಂಧಿಸಿದ್ದು, ಲಕ್ಷ್ಮಣ್ ಪಿಟ್ಟೇಕರ್ ಹಾಗೂ ಬಾನುದಾಸ್ ಪಿಟ್ಟೇ ಕರ್ ತಲೆಮರೆಸಿಕೊಂಡಿದ್ದಾರೆ. ಮಹಾ ರಾಷ್ಟ್ರದ ಅಹಮದನಗರ ಜಿಲ್ಲೆ, ಕರ್ಜತ್ ತಾಲೂಕಿನ ಮಾಲಂಗಿ ಹಾಗೂ ವಲ್ವಾಡ ಗ್ರಾಮ ದಲ್ಲಿ ಆರೋಪಿಗಳನ್ನು ಸೆರೆ ಹಿಡಿದು, ಬೆಂಗ ಳೂರು ಮೂಲದ ಚಿನ್ನಾಭರಣ ವ್ಯಾಪಾರಿ ನವೀನ್‍ಕುಮಾರ್ ಅವರಿಂದ ದೋಚಿದ್ದರಲ್ಲಿ 45 ಲಕ್ಷ ರೂ. ಮೌಲ್ಯದ 1.50 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಚಿನ್ನಾಭರಣ ದರೋಡೆ ಮಾಡಿದ ಐವರು ಆರೋಪಿಗಳಲ್ಲಿ ಮಾರುತಿ, ಲಕ್ಷ್ಮಣ್ ಹಾಗೂ ಬಾನುದಾಸ್ ಸಹೋದರರಾ ಗಿದ್ದು, ರಮೇಶ್ ಸೋದರ ಸಂಬಂಧಿ. ಇನ್ನುಳಿದ ಅನಂತ ದಾಂಡೆ ಪ್ರಮುಖ ಆರೋಪಿಯಾಗಿದ್ದು, ಒಂದೇ ಕುಟುಂಬದ ನಾಲ್ವರೊಂದಿಗೆ ದುಷ್ಕøತ್ಯ ಮೆರೆದಿದ್ದಾನೆ. ರಾಜ್ಯ ರೈಲ್ವೆ ಪೊಲೀಸರು ಹಾಗೂ ರೈಲ್ವೆ ರಕ್ಷಣಾ ಪಡೆ(ಆರ್‍ಪಿಎಫ್)ಯ ಸಹಕಾರ ದೊಂದಿಗೆ ಮೈಸೂರು ರೈಲ್ವೆ ಪೊಲೀಸರು ಸತತ 5 ತಿಂಗಳ ಕಾರ್ಯಾಚರಣೆ ನಡೆಸಿ, ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾ ಗಿದ್ದಾರೆ ಎಂದು ರೈಲ್ವೇಸ್ ಪೊಲೀಸ್ ಅಧೀ ಕ್ಷಕ ಡಾ.ಭೀಮಾಶಂಕರ್ ಎಸ್.ಗುಳೇದ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಪ್ರಕರಣದ ವಿವರ: ಚಿನ್ನಾಭರಣ ವ್ಯಾಪಾರಿ ನವೀನ್‍ಕುಮಾರ್ ಹಲವು ವರ್ಷಗಳಿಂದ ಮುಂಬೈನಿಂದ ಚಿನ್ನಾಭರಣಗಳನ್ನು ಖರೀದಿಸಿ, ಮೈಸೂರಿನ ವಿವಿಧ ಮಳಿಗೆ ಗಳಿಗೆ ಮಾರಾಟ ಮಾಡುತ್ತಿದ್ದರು. ಹಾಗೆಯೇ 2018ರ ಅ.1ರಂದು ಸುಮಾರು 3 ಕೆಜಿ ಯಷ್ಟು ಚಿನ್ನಾಭರಣಗಳೊಂದಿಗೆ ಮೈಸೂ ರಿಗೆ ಆಗಮಿಸಿದ್ದ ಅವರು, 700ಗ್ರಾಂ ಮಾರಾಟ ಮಾಡಿ, ಉಳಿದ 2ಕೆಜಿ 300ಗ್ರಾಂ ಆಭರಣದೊಂದಿಗೆ ಬೆಂಗಳೂರಿಗೆ ವಾಪ ಸ್ಸಾಗಲು ರೈಲು ನಿಲ್ದಾಣಕ್ಕೆ ಬಂದಿದ್ದರು. ಅಂದು ರಾತ್ರಿ 8 ಗಂಟೆ ವೇಳೆಗೆ ಫ್ಲಾಟ್ ಫಾರಂ 6ರಲ್ಲಿ ನಿಂತಿದ್ದ ಕಾವೇರಿ ಎಕ್ಸ್‍ಪ್ರೆಸ್ ರೈಲಿನ ಎಸ್-7 ಬೋಗಿಯಲ್ಲಿ ಕುಳಿತಿ ದ್ದರು. ಬೋಗಿಯಲ್ಲಿ ಇನ್ಯಾರು ಪ್ರಯಾ ಣಿಕರಿರಲಿಲ್ಲ. ಆ ವೇಳೆಗೆ ಆಗಮಿಸಿದ ಇಬ್ಬರು ಆಸಾಮಿಗಳು, ನವೀನ್‍ಕುಮಾರ್ ಅವರನ್ನು ಹಿಡಿದು, ಹೆಡೆಮುರಿ ಕಟ್ಟಿ, ಮಾರಕಾಸ್ತ್ರಗಳಿವೆ ಎಂದು ಬೆದರಿಸಿ, ಚಿನ್ನಾಭರಣವಿದ್ದ ಬ್ಯಾಗನ್ನು ಕಿತ್ತು ಕೊಂಡು, ನಿಮಿಷಾರ್ಧದಲ್ಲಿ ಪರಾರಿ ಯಾದರು. ಇಬ್ಬರು ಖದೀಮರು ಕಿತ್ತು ಕೊಂಡ ಬ್ಯಾಗನ್ನು, ಪೂರ್ವಯೋಜನೆ ಯಂತೆ ಫ್ಲಾಟ್‍ಫಾರಂನಲ್ಲಿ ನಿಂತಿದ್ದ ಮೂವರು ಸಿನಿಮೀಯ ರೀತಿಯಲ್ಲಿ ಒಬ್ಬರಿಂದೊಬ್ಬರಿಗೆ ಬ್ಯಾಗ್ ಪಾಸ್ ಮಾಡಿಕೊಂಡು ಕಣ್ಮರೆಯಾಗಿದ್ದರು.

ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದ ನವೀನ್‍ಕುಮಾರ್, ರೈಲಿನಿಂದ ಇಳಿದು ಬರುವಷ್ಟರಲ್ಲಿ ಖದೀಮರೆಲ್ಲಾ ಪರಾರಿ ಯಾಗಿದ್ದರು. ಏನು ಮಾಡುವುದೆಂದು ತೋಚದೆ, ಅಲೆದಾಡುತ್ತಿದ್ದಾಗ ಸ್ವಲ್ಪ ದೂರದಲ್ಲಿ ಪೊಲೀಸರು ಕಾಣಿಸಿದ್ದಾರೆ. ಕೂಡಲೇ ಅವರ ಬಳಿ ತೆರಳಿ, ಚಿನ್ನಾ ಭರಣ ದರೋಡೆ ಮಾಡಿದ್ದನ್ನು ತಿಳಿಸಿ ದ್ದಾರೆ. ಇಷ್ಟೊಂದು ಪ್ರಮಾಣದ ಚಿನ್ನಾಭರಣ ದೋಚಿದ್ದಾರೆ ಎಂಬುದನ್ನು ಆರಂಭದಲ್ಲಿ ಪೊಲೀಸರು ನಂಬಿಲ್ಲ. ಆದರೆ ನಿರ್ಲಕ್ಷ್ಯ ವಹಿಸದೆ ಪ್ರಾಥಮಿಕ ನಡೆಸಿದಾಗ, ನವೀನ್‍ಕುಮಾರ್ ಹೇಳಿದ್ದು ಸತ್ಯ ಎಂದು ಗೊತ್ತಾಗಿದೆ. ಬಳಿಕ ಪ್ರಕರಣ ದಾಖಲಿಸಿ ಕೊಂಡು, ಸಿಸಿಟಿವಿ ಫುಟೇಜ್ ವೀಕ್ಷಿಸಿ ದಾಗ ಖದೀಮರು ಬ್ಯಾಗ್‍ನೊಂದಿಗೆ ಪರಾರಿಯಾಗಿದ್ದು ಸ್ಪಷ್ಟವಾಗಿದೆ. ಅಲ್ಲದೆ ಅವರೆಲ್ಲಾ ಹೊರರಾಜ್ಯದವರು ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದರು.

ಆಪರೇಷನ್ ಕಾವೇರಿ ಎಕ್ಸ್‍ಪ್ರೆಸ್: ಮೈಸೂ ರಿನ ರೈಲ್ವೆ ನಿಲ್ದಾಣದಲ್ಲಾದ ಈ ಘಟನೆ ರಾಜ್ಯದ ಬೇರೆಲ್ಲೂ ನಡೆದಿಲ್ಲ. ಹಾಗಾಗಿ ರೈಲ್ವೆ ಪೊಲೀಸರಿಗೆ ಇದೊಂದು ಸವಾಲಿನ ಪ್ರಕರಣವಾಗಿತ್ತು. ಹಾಗಾಗಿ ರೈಲ್ವೆಸ್ ಪೊಲೀಸ್ ಅಧೀಕ್ಷಕ ಡಾ. ಭೀಮಾಶಂಕರ್ ಎಸ್.ಗುಳೇದ ಅವರು, ಉಪ ಅಧೀಕ್ಷಕ ಎನ್.ಟಿ.ಶ್ರೀನಿವಾಸರೆಡ್ಡಿ ನೇತೃತ್ವದಲ್ಲಿ `ಆಪರೇಷನ್ ಕಾವೇರಿ ಎಕ್ಸ್‍ಪ್ರೆಸ್’ ವಿಶೇಷ ತನಿಖಾ ತಂಡ ರಚಿಸಿ, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ದÀಕ್ಷ ಅಧಿಕಾರಿ ಗಳು ಹಾಗೂ ಸಿಬ್ಬಂದಿಯನ್ನು ತಂಡಕ್ಕೆ ನಿಯೋಜಿಸಿದ್ದರು. ಘಟನೆ ನಡೆದ ದಿನ ದಂದು ಲಭ್ಯವಾದ ಪ್ರಾಥಮಿಕ ಸಾಕ್ಷ್ಯಾ ಧಾರಗಳೊಂದಿಗೆ ತನಿಖೆ ಆರಂಭಿಸಿದ ವಿಶೇಷ ತಂಡ, ವೈಜ್ಞಾನಿಕ ಸಾಕ್ಷಿ ಆಧರಿಸಿ, ಆರೋಪಿಗಳು ಮಹಾರಾಷ್ಟ್ರ ಮೂಲ ದವರು ಎಂಬುದನ್ನು ಪತ್ತೆ ಹಚ್ಚಿತು.

ನಂತರ ಮಹಾರಾಷ್ಟ್ರಕ್ಕೆ ತೆರಳಿ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಆರೋಪಿಗಳ ಹೆಡೆಮುರಿ ಕಟ್ಟಲು ಯೋಜನೆ ರೂಪಿಸಿಕೊಂಡರು. ಮೂರು ತಂಡ ಗಳಾಗಿ ಅಹಮದ್‍ನಗರ, ಸೊಲ್ಲಾಪುರ ಹಾಗೂ ಪುಣೆಯಲ್ಲಿ ತಿಂಗಳುಗಟ್ಟಲೆ ಬೀಡು ಬಿಟ್ಟು, ಕಡೆಗೂ ಮಾಲಂಗಿ ಹಾಗೂ ವಲ್ವಾಡ್ ಗ್ರಾಮಗಳಲ್ಲಿದ್ದ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಗಳು ಸಾಮಾನ್ಯರಂತೆ ಕೃಷಿ ಕೆಲಸ ಮಾಡಿಕೊಂಡಿದ್ದರು. ಆದರೆ ಚಿನ್ನಾಭರಣ ದರೋಡೆ ಮಾಡಿದ್ದು, ಪರಾರಿಯಾಗಿದ್ದು, ತಲೆಮರೆಸಿಕೊಂಡ ರೀತಿಯನ್ನು ನೋಡಿದರೆ ವೃತ್ತಿಪರ ದರೋಡೆಕೋರ ರೆಂಬುದು ಸ್ಪಷ್ಟವಾಗುತ್ತದೆ ಎಂದು ರೈಲ್ವೆ ಎಸ್ಪಿ ಡಾ.ಭೀಮಾಶಂಕರ್ ತಿಳಿಸಿದರು.

ತಂಡಕ್ಕೆ ಬಹುಮಾನ: ಪ್ರಕರಣ ಭೇದಿಸಿ ರುವ `ಆಪರೇಷನ್ ಕಾವೇರಿ ಎಕ್ಸ್‍ಪ್ರೆಸ್’ ತಂಡದಲ್ಲಿರುವ ಮೈಸೂರು ರೈಲ್ವೆ ವೃತ್ತದ ಇನ್‍ಸ್ಪೆಕ್ಟರ್ ಎನ್.ಜಯಕುಮಾರ್, ಬೆಂಗ ಳೂರು ನಗರ ವೃತ್ತದ ಇನ್‍ಸ್ಪೆಕ್ಟರ್ ಎಂ.ಎನ್. ನಾಗರಾಜು, ಬೆಂಗಳೂರು ದಂಡು ವೃತ್ತದ ಇನ್‍ಸ್ಪೆಕ್ಟರ್ ಲಕ್ಷ್ಮಿನಾರಾಯಣ ಪ್ರಸಾದ್, ಸಬ್‍ಇನ್‍ಸ್ಪೆಕ್ಟರ್‍ಗಳಾದ ಆರ್.ಜಗದೀಶ್, ಗುರುನಾಥ ಹಾದಿಮನಿ, ಜಿ.ಆರ್.ದಿಲೀಪ್, ಮುದಿಯಪ್ಪ, ಶರಣಬಸವ ಬಿರಾದಾರ, ಶಾಲಂ ಹುಸೇನ್, ಸಿಬ್ಬಂದಿ ಪಾಪಣ್ಣ, ಬಿ.ಎಸ್.ಮೋಹನ್, ಬಾಲಾಜಿ, ಪಿ.ಫಯಾಜ್ ಖಾನ್, ಬಿ.ಎಸ್.ಪ್ರದೀಪ, ಶ್ರೀನಿವಾಸ ಮೂರ್ತಿ, ಸಿ.ಟಿ.ಮಧೂ, ಎಸ್.ಎಮ್. ನವೀನ್‍ಕುಮಾರ್, ಸಿ.ಎನ್.ಚೇತನ್, ಆರ್.ಜಗದೀಶ್, ಜಿ.ಎ.ವಿಜಯಕುಮಾರ್, ಬಿ.ಎನ್.ಯೋಗಾನಂದ, ಹೆಚ್.ಜೆ.ಅಪ್ಪೇ ಗೌಡ, ಪ್ರಭು ಗೋನಿ, ಎಸ್.ಸಿ.ಪುಟ್ಟ ಸ್ವಾಮಿ ಹಾಗೂ ಕೆ.ಬಿ.ಮಂಜುನಾಥ ಅವರಿಗೆ ರೈಲ್ವೆ ಎಸ್ಪಿ ಡಾ.ಭೀಮಾಶಂಕರ್ ಎಸ್. ಗುಳೇದ ಅವರು ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿದರು. ಈ ವೇಳೆ ಡಿವೈಎಸ್ಪಿ ಎನ್.ಟಿ.ಶ್ರೀನಿವಾಸರೆಡ್ಡಿ, ಆರ್‍ಪಿಎಫ್ ಅಧಿಕಾರಿಗಳು ಹಾಜರಿದ್ದರು.

Translate »