ಮಾ.26ಕ್ಕೆ ಶ್ರೀನಿವಾಸಪ್ರಸಾದ್ ನಾಮಪತ್ರ ಸಲ್ಲಿಕೆ
ಮೈಸೂರು

ಮಾ.26ಕ್ಕೆ ಶ್ರೀನಿವಾಸಪ್ರಸಾದ್ ನಾಮಪತ್ರ ಸಲ್ಲಿಕೆ

March 20, 2019

ಮೈಸೂರು: ಚಾಮರಾಜನಗರ (ಮೀಸಲು) ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾ. 26ರಂದು ನಾಮಪತ್ರ ಸಲ್ಲಿಸಲು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ನಿರ್ಧರಿಸಿ ದ್ದಾರೆ. ಜಯಲಕ್ಷ್ಮಿಪುರಂನ ತಮ್ಮ ನಿವಾಸ ದಲ್ಲಿ ಮಂಗಳವಾರ ಪಕ್ಷದ ಪ್ರಮುಖ ರೊಂದಿಗೆ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಂಡರು. ನಂತರ ಅವರು ಬೆಂಗಳೂ ರಿಗೆ ತೆರಳಿದರು. ಮಾ.21ರಿಂದ ಚಾಮರಾಜ ನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯ ಕರ್ತರ ಸಮಾವೇಶ ನಡೆಸಲಿದ್ದಾರೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ದಿನಕ್ಕೆ ಎರಡು ಕ್ಷೇತ್ರಗಳಂತೆ ಕಾರ್ಯಕರ್ತರ ಸಭೆ ನಡೆಸಲು ತೀರ್ಮಾನಿಸಿದರು.

ನಂತರ 25ರಂದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ತಯಾರಿ ನಡೆಸಿ, 26ರಂದು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿ ಕಾರಿಗಳಿಗೆ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಉಸ್ತುವಾರಿಯೂ ಆದ ರಾಜ್ಯ ಬಿಜೆಪಿ ಕಾರ್ಯದರ್ಶಿ ಎಂ.ರಾಜೇಂದ್ರ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಇಂದು ನಡೆದ ಪ್ರಮುಖರ ಸಭೆಯಲ್ಲಿ ನಂಜನ ಗೂಡು ಶಾಸಕ ಹರ್ಷವರ್ಧನ್, ಚಾಮರಾಜನಗರ ಲೋಕಸಭಾ ಕ್ಷೇತ್ರ ಉಸ್ತುವಾರಿ ಎಂ.ರಾಜೇಂದ್ರ, ಚಾಮರಾಜನಗರ ಲೋಕಸಭಾ ಕ್ಷೇತ್ರ ಸಂಚಾಲಕ ಬಾಲಸುಬ್ರಹ್ಮಣ್ಯ, ಮೈಸೂರು ವಿಭಾಗ ಸಂಘಟನಾ ಕಾರ್ಯದರ್ಶಿ ಸುರೇಶ್‍ಬಾಬು, ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಇನ್ನಿತರರು ಉಪಸ್ಥಿತರಿದ್ದರು.

ಸಮಾವೇಶ ಎಲ್ಲೆಲ್ಲಿ?: ಮಾ.21ರಂದು ಬೆಳಿಗ್ಗೆ 11ಕ್ಕೆ ನಂಜನಗೂಡು, ಮಧ್ಯಾಹ್ನ 3ಕ್ಕೆ ಗುಂಡ್ಲುಪೇಟೆ. ಶ್ರೀನಿವಾಸಪ್ರಸಾದ್ ಅವರು ಬೆಂಗಳೂರಿನಲ್ಲಿ ಪಕ್ಷದ ಪ್ರಮುಖರ ಸಭೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಅವರು ಇರುವುದಿಲ್ಲ. ಆ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಸಭೆಗಳು ನಡೆಯುತ್ತವೆ. ಮಾ.22ರಂದು ಬೆಳಿಗ್ಗೆ 11ಕ್ಕೆ ಚಾಮರಾಜನಗರ, ಮಧ್ಯಾಹ್ನ 3ಕ್ಕೆ ಕೊಳ್ಳೇಗಾಲ, ಮಾ.23ರಂದು ಬೆಳಿಗ್ಗೆ 11ಕ್ಕೆ ಹನೂರು, ಮಧ್ಯಾಹ್ನ 3ಕ್ಕೆ ತಿ.ನರಸೀಪುರ, 24ರಂದು ಬೆಳಿಗ್ಗೆ 11ಕ್ಕೆ ಹೆಚ್.ಡಿ.ಕೋಟೆ, ಮಧ್ಯಾಹ್ನ 3 ಗಂಟೆಗೆ ವರುಣಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಶ್ರೀನಿವಾಸಪ್ರಸಾದ್ ಪಾಲ್ಗೊಳ್ಳಲಿದ್ದಾರೆ.

ಶ್ರೀನಿವಾಸಪ್ರಸಾದ್ ನನ್ನ ಗುರುವಲ್ಲ
ಕೊಳ್ಳೇಗಾಲ: ಯಾರು ಏನೇ ಟೀಕೆ ಮಾಡಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. 10 ವರ್ಷದಲ್ಲಿ ನಾನು ಮಾಡಿರುವ ಕೆಲಸ ನನ್ನ ಕೈ ಹಿಡಿಯಲಿದೆ. ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್ ನನ್ನ ಗುರುಗಳಲ್ಲ. ನನ್ನ ಗುರು ದಿವಂಗತ ಮಾಜಿ ಸಚಿವ ರಾಜಶೇಖರಮೂರ್ತಿ ಎಂದು ಸಂಸದ ಆರ್.ಧ್ರುವ ನಾರಾಯಣ್ ಅವರು ಶ್ರೀನಿವಾಸಪ್ರಸಾದ್‍ಗೆ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು. ಜಿ.ಎನ್.ನಂಜುಂಡ ಸ್ವಾಮಿ ಅವರು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಗಿಲಿಟ್ ರಾಜಕಾರಣ ಯಾರು ಮಾಡುತ್ತಾರೆ, ಸುಳ್ಳು ಯಾರು ಹೇಳುತ್ತಾರೆ, ಯಾರು ಜನರನ್ನು ವಂಚಿಸುತ್ತಾರೆ ಎಂದು ಕ್ಷೇತ್ರದ ಜನತೆಗೇ ಗೊತ್ತು ಎಂದು ತಿರುಗೇಟು ನೀಡಿದರಲ್ಲದೆ, ಜಿ.ಎನ್.ನಂಜುಂಡಸ್ವಾಮಿ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ನನಗೆ ಬಿಜೆಪಿ ನಾಯಕರಿಂದ ಸರ್ಟಿಫಿಕೇಟ್ ಬೇಕಿಲ್ಲ. ದೊಡ್ಡ ನಾಯಕರಾದ ಜಿ.ಎನ್.ನಂಜುಂಡಸ್ವಾಮಿ ಸಲಹೆ ನಮಗೆ ಅಗತ್ಯವಿಲ್ಲ. ಯಾರು ಏನೇ ಟೀಕೆ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಬಾರಿಯೂ ಭಾರೀ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ನನಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಶಾಸಕ ಡಾ.ಯತೀಂದ್ರ, ಆರ್.ನರೇಂದ್ರ, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಜಿಪಂ ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ ಸೇರಿದಂತೆ ಇನ್ನಿತರರಿದ್ದರು.

Translate »