ಸುಯೋಗ್ ಡಯಾಬಿಟಿಕ್ ಹೆಲ್ತ್ ಕ್ಲಬ್ ರಚನೆ
ಮೈಸೂರು

ಸುಯೋಗ್ ಡಯಾಬಿಟಿಕ್ ಹೆಲ್ತ್ ಕ್ಲಬ್ ರಚನೆ

March 21, 2019

ಮಾ.24ರಂದು ಸಕ್ಕರೆ ಕಾಯಿಲೆ ಉಚಿತ ತಪಾಸಣೆ, ಅರಿವು ಕಾರ್ಯಕ್ರಮ
ಮೈಸೂರು: ಮೈಸೂರಿನಲ್ಲಿ ಮಧುಮೇಹಿಗಳೆÀಲ್ಲರೂ ಕೂಡಿ ಸಕ್ಕರೆ ಕಾಯಿಲೆಯವರ ಹೆಲ್ತ್ ಕ್ಲಬ್ ರಚಿಸಿಕೊಂಡಿದ್ದಾರೆ. ವ್ಯಾಪಕವಾಗಿ ಹರಡುತ್ತಿರುವ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವುದು ಅತೀ ಮುಖ್ಯವಾಗಿದ್ದು, ಸಕ್ಕರೆ ಕಾಯಿಲೆ ಯಿಂದ ಹೃದಯಾಘಾತ, ಲಕ್ವ, ಕಿಡ್ನಿ ವಿಫಲತೆ, ಗ್ಯಾಂಗ್ರೀನ್, ದೃಷ್ಟಿಹೀನತೆ ಇನ್ನಿತರೆ ರೋಗಳು ಕಾಣಿಸಿಕೊಳ್ಳುತ್ತಿದ್ದು, ಈ ದುಷ್ಪರಿಣಾಮವನ್ನು ತಡೆಗಟ್ಟುವ ಕುರಿತು ಜನಜಾಗೃತಿ ಉಂಟು ಮಾಡುವುದು ಕ್ಲಬ್‍ನ ಉದ್ದೇಶವಾಗಿದೆ ಎಂದು ಸುಯೋಗ್ ಡಯಾ ಬಿಟಿಕ್ಸ್ ಹೆಲ್ತ್ ಕ್ಲಬ್‍ನ ಮಹಾಪೋಷಕ ಡಾ.ಎಸ್.ಪಿ.ಯೋಗಣ್ಣ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಲಬ್‍ನಲ್ಲಿ 500 ಮಂದಿ ಸದಸ್ಯರಿದ್ದು, ಈ ಪೈಕಿ ಮಹಿಳೆಯರೇ ಶೇ.50ರಷ್ಟಿ ದ್ದಾರೆ. ಈ ಕ್ಲಬ್‍ನ ಸದಸ್ಯರಾದವರಿಗೆ ಆಗಾಗ್ಗೆ ಉಚಿತ ತಪಾಸಣೆ, ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಆಹಾರ ಕ್ರಮ, ಸುಲಭ ದರದಲ್ಲಿ ಔಷಧಿ ವಿತರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಕ್ಲಬ್ ಹಮ್ಮಿಕೊಂಡಿದೆ. ಕ್ಲಬ್‍ನ ಸದಸ್ಯರಾದವರಿಗೆ ಚಿಕಿತ್ಸೆಯಲ್ಲಿ ರಿಯಾಯಿತಿ, ಉಪಯುಕ್ತ ಯೋಗಾಸನ ತರಬೇತಿ ನೀಡಲಾಗುವುದು ಎಂದರು.

ಇದರ ಅಂಗವಾಗಿ ಮಾ.24ರಂದು ಬೆಳಿಗ್ಗೆ 10 ಗಂಟೆಗೆ ರಾಮಕೃಷ್ಣನಗರದ ಇ ಅಂಡ್ ಎಫ್ ಬ್ಲಾಕ್‍ನಲ್ಲಿರುವ ಸುಯೋಗ್ ಆಸ್ಪತ್ರೆ ಆವರಣದಲ್ಲಿ ಸಕ್ಕರೆ ಕಾಯಿಲೆ ಉಚಿತ ತಪಾಸಣೆ ಮತ್ತು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಕ್ಕರೆ ಕಾಯಿಲೆ ಹೆಲ್ತ್ ಕ್ಲಬ್‍ನ ಅಧ್ಯಕ್ಷ ಎಸ್.ಕೆ.ನಂಜಪ್ಪ, ಕಾರ್ಯಾಧ್ಯಕ್ಷ ಎಚ್.ಎಸ್.ರಮೇಶ್, ನಗರಪಾಲಿಕೆ ಸದಸ್ಯ ಎಂ.ಶಿವಕುಮಾರ್, ಕ್ಲಬ್‍ನ ಮಹಿಳಾ ವಿಭಾಗದ ಅಧ್ಯಕ್ಷೆ ಗಾಯತ್ರಿ ನಾರಾಯಣಗೌಡ, ಡಾ.ಮೋಹನ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »