ಎಟಿಎಂಇ ಕಾಲೇಜಿನಲ್ಲಿ ಇಂದಿನಿಂದ `ಊರ್ಜಾ-2019’ ತಾಂತ್ರಿಕ ಹಬ್ಬ
ಮೈಸೂರು

ಎಟಿಎಂಇ ಕಾಲೇಜಿನಲ್ಲಿ ಇಂದಿನಿಂದ `ಊರ್ಜಾ-2019’ ತಾಂತ್ರಿಕ ಹಬ್ಬ

March 21, 2019

ಮೈಸೂರು: ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯ ರಿಂಗ್ ವಿಭಾಗದ ವತಿಯಿಂದ ಮಾ.21 ಮತ್ತು 22ರಂದು `ಊರ್ಜಾ-2019’ ರಾಷ್ಟ್ರಮಟ್ಟದ ತಾಂತ್ರಿಕ ಹಬ್ಬ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಎಲ್.ಬಸವರಾಜ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ರಾಜ್ಯಗಳ ಇಂಜಿನಿಯರಿಂಗ್ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಕೆಲವು ತಾಂತ್ರಿಕ ಸಮಸ್ಯೆಗಳನ್ನು ನೀಡಿ ಅವರು ಪರಿಹರಿಸುವ ಬಗ್ಗೆ, ರೋಬೋಟ್ ಇನ್ನಿತರ ಮಾದರಿ ಪ್ರಾತ್ಯಕ್ಷಿಕೆ, ಕಾರ್ಯ ನಿರ್ವಹಣೆ ಇತ್ಯಾದಿ ಇರಲಿವೆ. ಈ ಎಲ್ಲಾ 12ಕ್ಕೂ ನೋಂದಣಿ ಮಾಡಿಕೊಂಡು ಇವರುಗಳಲ್ಲಿ 8ರಲ್ಲಿ ವಿಜೇತ ಕಾಲೇಜು ತಂಡಕ್ಕೆ ಲಕ್ಷರೂ. ಬಹುಮಾನ ನೀಡಲಾಗುವುದು. ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶ ಇನ್ನಿತರೆ ಕಡೆಗಳಿಂದ 20ಕ್ಕೂ ಹೆಚ್ಚು ತಂಡಗಳು ನೋಂದಣಿ ಮಾಡಿಕೊಂಡಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ.ಮಹೇಶ್, ಡಾ.ಯತೀಶ್, ಅಭಿಲಾಷ್, ಚಂದ್ರಶೇಖರ್ ಉಪಸ್ಥಿತರಿದ್ದರು.

Translate »