ಆಕಸ್ಮಿಕ ಬೆಂಕಿ: ಗುಡಿಸಲು ಭಸ್ಮ
ಮೈಸೂರು

ಆಕಸ್ಮಿಕ ಬೆಂಕಿ: ಗುಡಿಸಲು ಭಸ್ಮ

March 22, 2019

ಮೈಸೂರು: ಮೈಸೂರಿನ ಭಾರತ್ ನಗರದಲ್ಲಿ ಆಕಸ್ಮಿಕ ಬೆಂಕಿ ಯಿಂದ ಗುಡಿಸಲೊಂದು ಭಸ್ಮವಾಗಿದ್ದು, ಈ ಸಂಬಂಧ ಮೈಸೂರು ಗ್ರಾಮಾಂ ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತ್‍ನಗರದ ಸ್ಲಂ ಬೋರ್ಡ್ ಕಾಂಪ್ಲೆಕ್ಸ್ ಸಮೀಪ ಆಟೋ ಚಾಲಕ ಸೈಯ್ಯದ್ ರಫೀಕ್ ಅಹಮದ್ ಕುಟುಂಬ ಗುಡಿಸಲು ನಿರ್ಮಿಸಿಕೊಂಡು ವಾಸವಿತ್ತು.

ಮಾ.16 ರಂದು ಸೈಯ್ಯದ್ ಕೆಲಸಕ್ಕೆ ಹೋದ ಬಳಿಕ ಅವರ ಪತ್ನಿ ಮುಬೀನಾ ತಾಜ್ ಗಂಧದ ಕಡ್ಡಿ ವ್ಯಾಪಾರಕ್ಕೆ ತೆರಳಿ ದ್ದರು. ಮಕ್ಕಳು ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಗುಡಿಸಲು ಬೆಂಕಿಗೆ ಆಹುತಿಯಾಗಿದೆ. ಪರಿಣಾಮ ಗುಡಿಸಲಿನಲ್ಲಿದ್ದ 3 ಸಾವಿರ ರೂ. ನಗದು, ಟಿವಿ, ಗೃಹೋಪಯೋಗಿ ವಸ್ತುಗಳು, ಪಾತ್ರೆ, ಬಟ್ಟೆ ಸೇರಿದಂತೆ ಸುಮಾರು 23 ಸಾವಿರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಆಶ್ರಯವಿಲ್ಲದ ನಮ್ಮ ಕುಟುಂಬಕ್ಕೆ ಸಂಬಂಧಪಟ್ಟವರಿಂದ ಪರಿಹಾರ ಕೊಡಿಸಬೇಕೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಲಾಗಿದೆ.

Translate »