ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಿಗೆ  ಶಾಸಕ ರಾಮದಾಸ್ ಶುಭ ಹಾರೈಕೆ
ಮೈಸೂರು

ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಿಗೆ ಶಾಸಕ ರಾಮದಾಸ್ ಶುಭ ಹಾರೈಕೆ

March 22, 2019

ಮೈಸೂರು: ರಾಜ್ಯದಾದ್ಯಂತ ಇಂದಿನಿಂದ ಎಸ್‍ಎಸ್ ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ರುವ ಸೇಂಟ್ ಮೇರೀಸ್ ಶಾಲೆಗೆ ಗುರು ವಾರ ಬೆಳಿಗ್ಗೆ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ, ಶುಭಕೋರಿದರು. ಗೊಂದಲ ಹಾಗೂ ಒತ್ತಡಕ್ಕೆ ಒಳಗಾಗದೇ ಪರೀಕ್ಷೆ ಎದುರಿಸುವಂತೆ ಸಲಹೆ ನೀಡಿದರು.

ಮೊದಲ ದಿನ ಪ್ರಥಮ ಭಾಷೆಯ ಪರೀಕ್ಷೆ ನಡೆಯಿತು. ಈ ಹಿನ್ನೆಲೆಯಲ್ಲಿ ಕೆಲ ಬೆಂಬ ಲಿಗರೊಂದಿಗೆ ಸೇಂಟ್ ಮೇರೀಸ್ ಶಾಲೆಯ ಬಳಿ ಆಗಮಿಸಿದ ಎಸ್.ಎ.ರಾಮ ದಾಸ್ ಪರೀಕ್ಷಾ ಭಯ ಮನಸ್ಸಿನಲ್ಲಿ ಮನೆ ಮಾಡಿದ್ದರೆ, ಅದನ್ನು ತೊಡೆದು ಹಾಕು ವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಳೆದ ಸಾಲಿನಲ್ಲಿ ಹತ್ತನೇ ತರಗತಿ ಫಲಿ ತಾಂಶದಲ್ಲಿ ಮೈಸೂರು ಜಿಲ್ಲೆ 23ನೇ ಸ್ಥಾನಕ್ಕೆ ಕುಸಿದಿತ್ತು. ಮೈಸೂರಿನಲ್ಲಿ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಯ 5,500 ವಿದ್ಯಾರ್ಥಿಗಳಿಗೆ 4 ತಿಂಗಳಿಂದ ವಿಶೇಷ ವಾದ ತರಗತಿ ನಡೆಸಿ, ಪರೀಕ್ಷೆಗೆ ಸಜ್ಜುಗೊಳಿ ಸಲಾಗಿದೆ. ಮೈಸೂರಿಗೆ ಮೊದಲ ಸ್ಥಾನ ದೊರಕಿಸಿ ಕೊಡಲು ಪ್ರಯತ್ನ ಮಾಡ ಲಾಗಿದೆ. ನಮ್ಮ ಆಸರೆ ಸಂಸ್ಥೆಯಿಂದ ಎಲ್ಲ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಗಳಿಗೆ ಪರೀಕ್ಷೆ ಗೈಡ್ ನೀಡಲಾಗಿದೆ. ವಿದ್ಯಾರ್ಥಿ ಗಳು ಯುದ್ಧಕ್ಕೆ ಹೋಗುವ ಯೋಧರಂತೆ ಧೈರ್ಯವಾಗಿ ಪರೀಕ್ಷೆಗೆ ಹೋಗಬೇಕೆಂಬ ಕಲ್ಪನೆಯಿಂದ ಪ್ರಧಾನಿ ನರೇಂದ್ರ ಮೋದಿ ಬರೆದಿರುವ `ಎಕ್ಸಾಮ್ ವಾರಿಯರ್ಸ್’ ಪುಸ್ತಕದ ತುಣುಕುಗಳನ್ನು ಎಲ್ಲ ಶಾಲೆಗೆ ತಲುಪಿಸಲಾಗಿತ್ತು. ಪರೀಕ್ಷೆಯನ್ನು ವಿದ್ಯಾರ್ಥಿ ಗಳು ಹಬ್ಬವನ್ನಾಗಿ ಆಚರಿಸಬೇಕೆಂದು ಗುಲಾಬಿ ಹಾಗೂ ಪೆನ್ ನೀಡಿ ಶುಭ ಕೋರಿದ್ದೇನೆ ಎಂದರು. ಈ ವೇಳೆ ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜು ನಾಥ್, ಉಪಾಧ್ಯಕ್ಷ ಬಾಲಕೃಷ್ಣ, ಪುರು ಷೋತ್ತಮ್, ಕೆ.ಆರ್. ಬ್ಯಾಂಕ್ ನಿರ್ದೇಶಕ ಭಾಸ್ಕರ್, ಮುಖಂಡರಾದ ಸಂತೋಷ್, ಗುರು, ಶಿವೂ, ಪ್ರವೀಣ್, ಜಗದೀಶ್, ಸುಭಾಷ್, ಅಶೋಕ್ ಇತರರಿದ್ದರು.

Translate »