ಮೈಸೂರು: ಮಂಟೇ ಸ್ವಾಮಿ, ಮಲೆ ಮಾದೇಶ್ವರ ಮೊದಲಾದ ಕನ್ನಡ ಮೌಖಿಕ ಮಹಾಕಾವ್ಯಗಳು ಕನ್ನ ಡದ ಅಸ್ಮಿತೆಯಾಗಿದ್ದು, ಇವುಗಳಿಗೆ ಜಾಗತಿಕ ಸ್ಪರ್ಶ ನೀಡುವಂತಹ ಮಹತ್ತರ ಕಾರ್ಯ ವಾಗಬೇಕಿದೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ದಲ್ಲಿರುವ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿ ಯಿಂದ ಭಾಷಾ ಸಂಸ್ಥಾನದ ಸಭಾಂಗಣ ದಲ್ಲಿ `ಕನ್ನಡ ಮಹಾಕಾವ್ಯಗಳು : ಲಿಖಿತ ಮತ್ತು ಮೌಖಿಕ ಪರಂಪರೆಯ ತೌಲನಿಕ ಅಧ್ಯಯನ’ ಕುರಿತಂತೆ…
ಮೈಸೂರಲ್ಲಿ ಮರವೇರಿದ್ದ ಪ್ರಿಯಕರ
March 19, 2019ಮೈಸೂರು: ಪ್ರಿಯತಮೆ ವಿರುದ್ಧ ಮುನಿಸಿಕೊಂಡ ಪ್ರಿಯ ಕರನೋರ್ವ ಮರವೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಪ್ರಸಂಗ ಇಂದು ಬೆಳಿಗ್ಗೆ ಮೈಸೂರಲ್ಲಿ ನಡೆದಿದೆ. ಕಲಬುರ್ಗಿ ಜಿಲ್ಲೆಯ ವಿನಯ್(27) ಮರ ವೇರಿದವನಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ದೇವರಾಜ ಠಾಣೆ ಪೊಲೀಸರು, ಸುರಕ್ಷಿತವಾಗಿ ಮರದಿಂದ ಕೆಳಕ್ಕಿಳಿಸಿ ಕರೆದೊಯ್ದರು. ಕಲಬುರ್ಗಿಯಿಂದ ಪ್ರಿಯತಮೆಯೊಂದಿಗೆ ರೈಲಿನಲ್ಲಿ ಮೈಸೂರಿಗೆ ಬಂದಿದ್ದ ವಿನಯ್, ದಾಸಪ್ಪ ಸರ್ಕಲ್ ಬಳಿ ಮಾತಿಗೆ ಮಾತು ಬೆಳೆಸಿ ಇಬ್ಬರೂ ಜೋರಾಗಿ ವಾಗ್ವಾದಕ್ಕಿಳಿ ದರು. ಬಳಿಕ ಆಕೆಯೊಂದಿಗೆ ಮುನಿಸಿಕೊಂಡು ಆತ ವಾರ್ತಾ ಭವನದೆದುರು ಜೆಕೆ ಮೈದಾನದ ಕಡೆಯ…
ಆಯಿಷ್ ಆವಾಜ್ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಜೆಎಸ್‍ಎಸ್ ಐಎಸ್‍ಎಚ್ ಕಾಲೇಜಿಗೆ ಸಮಗ್ರ ಪ್ರಶಸ್ತಿ
March 19, 2019ಮೈಸೂರು: ಕಳೆದ 9 ವರ್ಷಗಳ ಹಿಂದೆ ನಡೆದಿದ್ದ ಮೈಸೂ ರಿನ ಪಡುವಾರಹಳ್ಳಿ ಕರಿಯಪ್ಪ ಹತ್ಯೆ ಪ್ರಕರಣದ 6 ಮಂದಿ ಹಂತಕರಿಗೆ ಮೈಸೂರು ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ, ಇಂದು ತೀರ್ಪು ನೀಡಿದೆ. ಪಡುವಾರಹಳ್ಳಿ ನಿವಾಸಿ ಗಳಾದ ಅಶೋಕ, ಹೇಮಂತ್, ಮಂಜೇಶ್, ಪ್ರವೀಣ್, ರಮೇಶ ಹಾಗೂ ಸೂರಜ್ ಜೀವಾವಧಿ ಶಿಕ್ಷೆಗೊಳಗಾದವರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು…
ದೇಶದ ಪ್ರಥಮ ಲೋಕಪಾಲ್ ಆಗಿ ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್ ಆಯ್ಕೆ?
March 18, 2019ನವದೆಹಲಿ: ದೇಶದ ಮೊದಲ ಲೋಕ ಪಾಲ್ ಆಗಿ ಸುಪ್ರಿಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಸಿ.ಘೋಷ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ದಶಕಗಳಿಂದಲೂ ಭಾರಿ ಚರ್ಚೆಗೀಡಾಗಿದ್ದ ಲೋಕ ಪಾಲ್ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿದ್ದು, ದೇಶದ ಮೊದಲ ಲೋಕಪಾಲ್ ಆಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾ ಗಿದೆ. ಖಾಸಗಿ ಆಂಗ್ಲ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು, ಲೋಕಪಾಲ್ ನೇಮಕಕ್ಕೆ ಸುಪ್ರೀಂ…
ಲೋಕಸಭಾ ಚುನಾವಣೆ ಇಂದಿನಿಂದ ಮೊದಲ ಹಂತದ ನಾಮಪತ್ರ ಸಲ್ಲಿಕೆ
March 18, 2019ನವದೆಹಲಿ: ರಾಷ್ಟ್ರದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಮಹಾ ಹಬ್ಬವಾದ ಲೋಕಸಭೆ ಚುನಾ ವಣೆಯ ಮೊದಲ ಹಂತದ ಮತದಾನಕ್ಕೆ ನಾಳೆ (ಮಾ.18) ಅಧಿಸೂಚನೆ ಹೊರ ಬೀಳಲಿದ್ದು, ನಾಳೆ ಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಆಂಧ್ರಪ್ರದೇಶ, ತೆಲಂಗಾಣ, ಅಂಡಮಾನ್ ನಿಕೋಬಾರ್ ಸೇರಿದಂತೆ 20 ರಾಜ್ಯಗಳ 91 ಕ್ಷೇತ್ರಗಳಿಗೆ ನಾಳೆ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಳೆಯಿಂದಲೇ ಆಯಾ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಉಮೇದು ವಾರಿಕೆಯನ್ನು ಸಲ್ಲಿಸಬಹುದಾಗಿದೆ. ಪ್ರಸ್ತುತ ಲೋಕಸಭೆ ಚುನಾವಣೆ ದೇಶಾ ದ್ಯಂತ ಏಳು ಹಂತದಲ್ಲಿ ನಡೆಯುತ್ತಿದೆ. ಮೊದಲ ಹಂತದ ಚುನಾವಣಾ…
`ಕೈ’ ಬಿಟ್ಟು `ಕಮಲ’ ಹಿಡಿದ ಮಾಜಿ ಸಚಿವ ಎ.ಮಂಜು
March 18, 2019ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಮಂಜು ಅವರು ನಿರೀಕ್ಷೆಯಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಇಂದು ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆದಿದ್ದು, ಎ.ಮಂಜು ಅವರ ಒಂದೇ ಹೆಸರನ್ನು ಹಾಸನ ಲೋಕಸಭಾ ಕ್ಷೇತ್ರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಮಂಜು ಅವರು ಇಂದು ಸಂಜೆ ಹಠಾತ್ತನೇ ಬಿಜೆಪಿ ಸದಸ್ಯತ್ವ…
ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಸ್ನೇಹಿತನ ಕೊಲೆ
March 18, 2019ಮೈಸೂರು: ಹಣಕಾಸು ವಿಚಾರದಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿ ಸ್ಮಶಾನದಲ್ಲಿ ಶವವನ್ನು ಹೂತಿಟ್ಟಿದ್ದ ಪ್ರಕರಣವನ್ನು ಭೇದಿಸಿರುವ ವಿಜಯನಗರ ಪೊಲೀಸರು ಭಾನುವಾರ ತಹಸೀಲ್ದಾರ್ ಸಮ್ಮುಖದಲ್ಲಿ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಜರುಗಿದೆ. ಮೈಸೂರಿನ ಕುಂಬಾರಕೊಪ್ಪಲು ನಿವಾಸಿ ರಾಮು ಎಂಬುವರ ಮಗ ರಾಘವೇಂದ್ರ (24) ಎಂಬುವರೇ ಸ್ನೇಹಿತರಿಂದಲೇ ಹತ್ಯೆಗೀಡಾದ ಯುವಕ ಎಂದು ಗುರುತಿಸ ಲಾಗಿದೆ. ಕಾರು ಚಾಲಕನಾಗಿದ್ದ ರಾಘ ವೇಂದ್ರ ಬಡ್ಡಿ ವ್ಯವಹಾರ ಮಾಡುತ್ತಿದ್ದ ಎನ್ನಲಾಗಿದೆ. ತನ್ನ ಸ್ನೇಹಿತನೊಬ್ಬನಿಗೆ 5 ಲಕ್ಷ ರೂ. ನೀಡಿದ್ದ ಸಾಲವನ್ನು ಹಿಂತಿ…
ವಿವಿಗಳು ಗ್ರಾಮ ದತ್ತು ಪಡೆದು ಸಮಸ್ಯೆಗಳ ಸಂಶೋಧನೆ ನಡೆಸಿ ಪರಿಹಾರ ಕಾಣಬೇಕು
March 18, 2019ಮೈಸೂರು: ವಿವಿಗಳು ಗ್ರಾಮಗಳನ್ನು ದತ್ತು ಪಡೆದು ಅಲ್ಲಿನ ಜನರು ಎದುರಿ ಸುತ್ತಿರುವ ಸಮಸ್ಯೆ ಕುರಿತಂತೆ ವಿದ್ಯಾರ್ಥಿಗಳಿಂದ ಸಂಶೋಧನೆ ನಡೆಸಿ ಅವುಗಳಿಗೆ ಪರಿಹಾರ ಕಂಡು ಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ.ಅನಿಲ್ ಡಿ.ಸಹಸ್ರಬುಧೆ ಅಬಿಪ್ರಾಯಪಟ್ಟರು. ಮೈಸೂರು ವಿಶ್ವ ವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಭಾನುವಾರ 99ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ವಿಶ್ವ ವಿದ್ಯಾನಿಲಯಗಳು ಹೊಸ ಜ್ಞಾನ, ಅವುಗಳ ಬಳಕೆಯ ಕೇಂದ್ರಗಳಾಗಿರಬೇಕಾಗಿರುವ ಕಾರಣ ವಿವಿಗಳಲ್ಲಿ ಸಂಶೋಧನೆ ಮತ್ತು…
ಮೈಸೂರು ಪೊಲೀಸರಿಂದ ರೌಡಿಗಳ ಪರೇಡ್
March 18, 2019ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬೆಳ್ಳಂಬೆಳಿಗ್ಗೆ ಪೊಲೀಸರು ಆಪರೇಷನ್ ಸನ್‍ರೈಸ್ ನಡೆಸಿ ಮೈಸೂರಿನ ವಿವಿಧ ಬಡಾವಣೆಗಳಲ್ಲಿರುವ 85 ಮಂದಿ ರೌಡಿಗಳನ್ನು ಕರೆತಂದು ಪರೇಡ್ ನಡೆಸಿ ಮತದಾರರು ಹಾಗೂ ಸಾರ್ವಜನಿಕರಿಗೆ ಧಮಕಿ ಹಾಕಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು. ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಮುಂಜಾನೆಯೇ ರೌಡಿಗಳ ಮನೆಯ ಕದ ತಟ್ಟಿ ಬೆವರಿಳಿಸಿದರು. ಶಸ್ತ್ರ ಸಜ್ಜಿತರಾಗಿಯೇ ರೌಡಿಗಳ ಮನೆ ಬಳಿ ಮುಂಜಾನೆ 5 ಗಂಟೆಗೆ ತೆರಳಿದ ಪೊಲೀಸರು, ಮನೆಯಲ್ಲಿ…
ಗೋವಾ ಸಿಎಂ ಮನೋಹರ್ ಪರಿಕ್ಕರ್ ಇನ್ನಿಲ್ಲ
March 18, 2019ಪಣಜಿ: ತೀವ್ರ ಅನಾ ರೋಗ್ಯದಿಂದ ಗೋವಾದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನ ರಾಗಿದ್ದಾರೆ. 63 ವರ್ಷದ ಮನೋ ಹರ್ ಪರಿಕ್ಕರ್ ಕಳೆದ ಒಂದು ವರ್ಷ ದಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆ (ಮೆದೋಜೀರಕ ಗ್ರಂಥಿ ಸಮಸ್ಯೆ) ಯಿಂದ ಬಳಲುತ್ತಿದ್ದರು. ಅಲ್ಲದೇ ಕಳೆದ ವರ್ಷ ಅಮೆರಿಕದಲ್ಲಿ 3 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರು ಸೆ.6 ರಂದು ಚೇತರಿಸಿಕೊಂಡು ಮತ್ತೆ ತಾಯ್ನಾಡಿಗೆ ಮರಳಿದ್ದರು. ಗೋವಾ, ಮುಂಬೈ,…










