ಮೈಸೂರಲ್ಲಿ ಮರವೇರಿದ್ದ ಪ್ರಿಯಕರ
ಮೈಸೂರು

ಮೈಸೂರಲ್ಲಿ ಮರವೇರಿದ್ದ ಪ್ರಿಯಕರ

March 19, 2019

ಮೈಸೂರು: ಪ್ರಿಯತಮೆ ವಿರುದ್ಧ ಮುನಿಸಿಕೊಂಡ ಪ್ರಿಯ ಕರನೋರ್ವ ಮರವೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಪ್ರಸಂಗ ಇಂದು ಬೆಳಿಗ್ಗೆ ಮೈಸೂರಲ್ಲಿ ನಡೆದಿದೆ. ಕಲಬುರ್ಗಿ ಜಿಲ್ಲೆಯ ವಿನಯ್(27) ಮರ ವೇರಿದವನಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ದೇವರಾಜ ಠಾಣೆ ಪೊಲೀಸರು, ಸುರಕ್ಷಿತವಾಗಿ ಮರದಿಂದ ಕೆಳಕ್ಕಿಳಿಸಿ ಕರೆದೊಯ್ದರು.

ಕಲಬುರ್ಗಿಯಿಂದ ಪ್ರಿಯತಮೆಯೊಂದಿಗೆ ರೈಲಿನಲ್ಲಿ ಮೈಸೂರಿಗೆ ಬಂದಿದ್ದ ವಿನಯ್, ದಾಸಪ್ಪ ಸರ್ಕಲ್ ಬಳಿ ಮಾತಿಗೆ ಮಾತು ಬೆಳೆಸಿ ಇಬ್ಬರೂ ಜೋರಾಗಿ ವಾಗ್ವಾದಕ್ಕಿಳಿ ದರು. ಬಳಿಕ ಆಕೆಯೊಂದಿಗೆ ಮುನಿಸಿಕೊಂಡು ಆತ ವಾರ್ತಾ ಭವನದೆದುರು ಜೆಕೆ ಮೈದಾನದ ಕಡೆಯ ರಸ್ತೆ ಬದಿ ಮರವೊಂದಕ್ಕೇರಿ ತಾನು ಆತ್ಮಹತ್ಯೆ ಮಾಡಿಕೊಳ್ಳುವು ದಾಗಿ ಬೆದರಿಕೆ ಹಾಕಿದ. ಅದನ್ನು ಗಮನಿಸಿದ ಸಾರ್ವಜನಿಕರು ವಿಷಯ ಮುಟ್ಟಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ದೇವರಾಜ ಠಾಣೆ ಗರುಡ ಹಾಗೂ ಪಿಸಿಆರ್ ಪೊಲೀ ಸರು ಮನವೊಲಿಸಿ ವಿನಯ್‍ನನ್ನು ಕೆಳಗಿಳಿಸಿ ಇಬ್ಬರನ್ನೂ ಠಾಣೆಗೆ ಕರೆದೊಯ್ದು ಅವರ ಪೋಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನಂತರ ಸಾಮಾನ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಕಳುಹಿಸಿದರು ಎಂದು ಹೇಳಲಾಗಿದೆ.

Translate »