ಮೈಸೂರು

ಏಪ್ರಿಲ್ 3ನೇ ವಾರ ಚುನಾವಣೆ
ಮೈಸೂರು

ಏಪ್ರಿಲ್ 3ನೇ ವಾರ ಚುನಾವಣೆ

March 8, 2019

ಬೆಂಗಳೂರು: ಒಂದೆರಡು ದಿನದಲ್ಲೇ ಲೋಕಸಭಾ ಚುನಾ ವಣಾ ದಿನಾಂಕ ಘೋಷಣೆಯಾಗ ಲಿದೆ ಎಂದಿರುವ ಸಂಸದೆ ಶೋಭಾ ಕರಂದ್ಲಾಜೆ, ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ ಮೂರನೇ ವಾರದಲ್ಲಿ ಚುನಾವಣೆ ಜರುಗಲಿದೆ ಎಂದು ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ 22 ಸ್ಥಾನಗಳಿಗೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲು ತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ವಿರುದ್ಧ…

ಬಿಜೆಪಿ ಅಭ್ಯರ್ಥಿಗಳ ಅಂತಿಮಗೊಳಿಸಲು ಇಂದು ದೆಹಲಿಗೆ
ಮೈಸೂರು

ಬಿಜೆಪಿ ಅಭ್ಯರ್ಥಿಗಳ ಅಂತಿಮಗೊಳಿಸಲು ಇಂದು ದೆಹಲಿಗೆ

March 8, 2019

ಬೆಂಗಳೂರು: ಲೋಕ ಸಭಾ ಚುನಾವಣೆ ಹತ್ತಿರ ವಾಗುತ್ತಿರುವ ಹಿನ್ನೆಲೆ ಯಲ್ಲಿ ಬಿಜೆಪಿ ಅಭ್ಯರ್ಥಿ ಗಳ ಪಟ್ಟಿ ಅಂತಿಮಗೊಳಿ ಸುವ ಸಂಬಂಧ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾಳೆ ದೆಹಲಿಗೆ ತೆರಳಲಿದ್ದಾರೆ. ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪೂರ್ಣ ಪಟ್ಟಿಯನ್ನು ಮುಂದಿನ ವಾರ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಈ ಕುರಿತು ಪಕ್ಷದ ದೆಹಲಿ ವರಿಷ್ಠರೊಂದಿಗೆ ಚರ್ಚಿಸಲು ಯಡಿಯೂ ರಪ್ಪ ತೆರಳುತ್ತಿದ್ದು, ಪಕ್ಷದ ಕೇಂದ್ರ ಚುನಾ ವಣಾ ಸಮಿತಿಗೆ ರಾಜ್ಯ ಘಟಕ ಸಿದ್ಧಪಡಿಸಿರುವ ಸಂಭಾವ್ಯ ಅಭ್ಯರ್ಥಿಗಳ…

ಮನೆಗೆ ಹೋದ ಎಷ್ಟು ಜನರನ್ನು ಈಯಮ್ಮ ಮಾತನಾಡಿಸಿದ್ದಾರೆ, ಗ್ಲಾಸ್ ನೀರು ಕೊಟ್ಟಿದ್ದಾರೆ…
ಮೈಸೂರು

ಮನೆಗೆ ಹೋದ ಎಷ್ಟು ಜನರನ್ನು ಈಯಮ್ಮ ಮಾತನಾಡಿಸಿದ್ದಾರೆ, ಗ್ಲಾಸ್ ನೀರು ಕೊಟ್ಟಿದ್ದಾರೆ…

March 8, 2019

ಮದ್ದೂರು: ಅಂಬರೀಷ್ ಅವರು ಶಾಸಕ, ಸಚಿವ ಆಗಿದ್ದಾಗ ಅವರ ಮನೆಗೆ ಹೋದ ಎಷ್ಟು ಜನರನ್ನು ಈಯಮ್ಮ (ಸುಮ ಲತಾ) ಮಾತನಾಡಿಸಿದ್ದಾರೆ, ಎಷ್ಟು ಜನರಿಗೆ 1 ಗ್ಲಾಸ್ ನೀರು ಕೊಟ್ಟು ಏನಪ್ಪಾ ನಿನ್ನ ಸಮಸ್ಯೆ ಎಂದು ಕೇಳಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದರು. ಮದ್ದೂರಿನ ಕೊಳ ಗೆರೆಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಅಂಬರೀಷ್ ಅವರ ಹೆಸರೇಳಿಕೊಂಡು ನಾನೇನೋ ಜಿಲ್ಲೆಯನ್ನು ಉದ್ಧಾರ ಮಾಡುತ್ತೇನೆ ಎಂದು ಬರುತ್ತಿ…

ಬೀದೀಲಿ ನಿಂತು ಮಾತನಾಡುವುದು ಅವರ ಸಂಸ್ಕಾರ, ಅದು ನನ್ನದಲ್ಲ…
ಮೈಸೂರು

ಬೀದೀಲಿ ನಿಂತು ಮಾತನಾಡುವುದು ಅವರ ಸಂಸ್ಕಾರ, ಅದು ನನ್ನದಲ್ಲ…

March 8, 2019

ಮಳವಳ್ಳಿ: ಅತಿಥಿ ಸತ್ಕಾರ ಏನು ಎಂದು ಅಂಬಿ ಕುಟುಂಬಕ್ಕೆ ಯಾರೂ ಹೇಳಿಕೊಡಬೇಕಾಗಿಲ್ಲ. ದಿನದ 24 ಗಂಟೆ ಅತಿಥಿ ಸತ್ಕಾರ ಮಾಡಿರುವವರು ಅಂಬರೀಷ್. ಸಚಿವ ಡಿ.ಸಿ.ತಮ್ಮಣ್ಣನವರು ಎಷ್ಟು ಸಲ ನಮ್ಮ ಮನೆಗೆ ಬಂದಿದ್ದಾರೆ, ಎಷ್ಟು ನೀರು ಕುಡಿದಿದ್ದಾರೆ, ಊಟ ಮಾಡಿದ್ದಾರೆ, ನಾವು ಎಷ್ಟು ಸಲ ಅವರ ಮನೆಗೆ ಹೋಗಿದ್ದೇವೆ ಎಂಬುದನ್ನು ಅವರ ಕುಟುಂಬದವರೇ ಹೇಳಲಿ ಎನ್ನುವ ಮೂಲಕ ಸುಮಲತಾ ಅವರು ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಟಾಂಗ್ ನೀಡಿದರು. ಇಂದು ಬೆಳಿಗ್ಗೆ ಮಳವಳ್ಳಿಗೆ ಆಗಮಿಸಿದ ಸುಮಲತಾ ಅವರನ್ನು ಅಂಬರೀಷ್ ಅಭಿಮಾನಿಗಳು…

ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ ಮೈಸೂರು ಪಾಲಿಕೆ ಹೊಸ ಉಪಾಯ `ಗ್ರೀನ್ ವೆಡ್ಡಿಂಗ್’
ಮೈಸೂರು

ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ ಮೈಸೂರು ಪಾಲಿಕೆ ಹೊಸ ಉಪಾಯ `ಗ್ರೀನ್ ವೆಡ್ಡಿಂಗ್’

March 8, 2019

ಮೈಸೂರು: ಮೈಸೂರು ನಗರಪಾಲಿಕೆ ವತಿಯಿಂದ `ಗ್ರೀನ್ ವೆಡ್ಡಿಂಗ್’ ವಿನೂತನ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತಿಳಿಸಿದರು. ನಗರಪಾಲಿಕೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದ್ದರೂ ಮದುವೆ, ಅಪಾರ್ಟ್ ಮೆಂಟ್ ಮತ್ತಿತರ ಕಾಂಪ್ಲೆಕ್ಸ್‍ಗಳಲ್ಲಿ ಹೆಚ್ಚಾಗಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹಾಗಾಗಿ ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವ ಉದ್ದೇಶದಿಂದ ಪರಿಸರ ಸ್ನೇಹಿ `ಗ್ರೀನ್ ವೆಡ್ಡಿಂಗ್’ಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಗ್ರೀನ್ ವೆಡ್ಡಿಂಗ್ ಆದವರಿಗೆ ಪ್ರಮಾಣ ಪತ್ರ ನೀಡಿ ಪ್ರಶಂಸಿಸ ಲಾಗುವುದು ಎಂದು…

200 ಪಾಯಿಂಟ್ ರೋಸ್ಟರ್ ವ್ಯವಸ್ಥೆ ಜಾರಿಗೆ ಸುಗ್ರೀವಾಜ್ಞೆ: ಕೇಂದ್ರ ಸಂಪುಟ ಅನುಮೋದನೆ
ಮೈಸೂರು

200 ಪಾಯಿಂಟ್ ರೋಸ್ಟರ್ ವ್ಯವಸ್ಥೆ ಜಾರಿಗೆ ಸುಗ್ರೀವಾಜ್ಞೆ: ಕೇಂದ್ರ ಸಂಪುಟ ಅನುಮೋದನೆ

March 8, 2019

ನವದೆಹಲಿ: ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಬೋಧಕರ ನೇಮಕಾತಿಯಲ್ಲಿ ಮೀಸಲಾತಿಗಾಗಿ 200 ಅಂಶಗಳ ರೋಸ್ಟರ್ ಪದ್ಧತಿಯನ್ನು ಜಾರಿಗೊಳಿಸುವ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ಯಲ್ಲಿ ನಡೆದ ಸಚಿವ ಸಂಪುಟ ಸಭೆ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಉದ್ದೇಶಿತ ಪ್ರಸ್ತಾವನೆ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಹುದ್ದೆಗಳ ನೇಮಕಾತಿಯಲ್ಲಿ ದಲಿತರು, ಬುಡಕಟ್ಟು ಸಮುದಾಯ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಖಾತರಿ ಪಡಿಸುತ್ತದೆ. ಕೇಂದ್ರ ಸರ್ಕಾರ…

121 ಉಗ್ರರನ್ನು ಬಂಧಿಸಿದ ಪಾಕ್, 182 ಮದರಸಾಗಳು ಸರ್ಕಾರದ ವಶಕ್ಕೆ
ಮೈಸೂರು

121 ಉಗ್ರರನ್ನು ಬಂಧಿಸಿದ ಪಾಕ್, 182 ಮದರಸಾಗಳು ಸರ್ಕಾರದ ವಶಕ್ಕೆ

March 8, 2019

ಇಸ್ಲಾಮಾಬಾದ್: ನಿಷೇಧಿತ ಉಗ್ರ ಸಂಘಟನೆಗಳ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದು, 182 ಮದರಸಾಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯಲಾಗಿದೆ ಎಂದು ಗುರುವಾರ ಪಾಕಿಸ್ತಾನ ಹೇಳಿಕೊಂಡಿದೆ. ಇದುವರೆಗೆ ನಿಷೇಧಿತ ಸಂಘಟನೆಗಳ 121 ಮಂದಿಯನ್ನು ಬಂಧಿಸಲಾಗಿದೆ ಎಂದು ಪಾಕ್ ಆಂತರಿಕ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ನಿಷೇಧಿತ ಉಗ್ರ ಸಂಘಟನೆಗಳಿಗೆ ಸೇರಿದ ಧಾರ್ಮಿಕ ಶಾಲೆಗಳು, ಆಸ್ಪತ್ರೆಗಳು ಮತ್ತು ಆಂಬುಲೆನ್ಸ್‍ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ. ಪುಲ್ವಾಮ ಉಗ್ರ ದಾಳಿಯ ನಂತರ ಅಂತಾ ರಾಷ್ಟ್ರೀಯ ಸಮುದಾಯದಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಯಲ್ಲಿ ಪಾಕಿಸ್ತಾನ,…

ಮೈಸೂರಲ್ಲಿ ಕಾರ್ಮಿಕರಿಂದ ಸುರಕ್ಷತಾ ಜಾಗೃತಿ ರ್ಯಾಲಿ
ಮೈಸೂರು

ಮೈಸೂರಲ್ಲಿ ಕಾರ್ಮಿಕರಿಂದ ಸುರಕ್ಷತಾ ಜಾಗೃತಿ ರ್ಯಾಲಿ

March 8, 2019

ಮೈಸೂರು: 48ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಕಾರ್ಮಿಕರು ಮೈಸೂರಲ್ಲಿ ಇಂದು ಬೃಹತ್ ಜನ ಜಾಗೃತಿ ಜಾಥಾ ನಡೆಸಿದರು. ಕರ್ನಾಟಕ ರಾಜ್ಯ ಸುರಕ್ಷಾ ಸಂಸ್ಥೆ, ನ್ಯಾಷ ನಲ್ ಇನ್‍ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ ಮೆಂಟ್ ಹಾಗೂ ನಂಜನಗೂಡು ಕೈಗಾರಿಕಾ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಜಾಗೃತಿ ಜಾಥಾಗೆ ಜೆ.ಕೆ ಮೈದಾನದ ಬಳಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಹಾಗೂ ಎಟಿ ಅಂಡ್ ಎಸ್ ಇಂಡಿಯಾ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ರಾಬರ್ಟ್ ಗ್ರೋಬ್ಬಾವರ್ ಹಸಿರು ನಿಶಾನೆ ತೋರುವ…

ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ: ಓರ್ವ ಸಾವು, ಆರೋಪಿಗಳ ಬಂಧನ
ಮೈಸೂರು

ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ: ಓರ್ವ ಸಾವು, ಆರೋಪಿಗಳ ಬಂಧನ

March 8, 2019

ಜಮ್ಮು-ಕಾಶ್ಮೀರ: ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ ನಡೆಸಿದ ಆರೋಪಿಗಳನ್ನು ಬಂಧಿಸಿರುವುದಾಗಿ ಜಮ್ಮು- ಕಾಶ್ಮೀರ ಪೆÇಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಜನದಟ್ಟಣೆಯ ಬಸ್ ನಿಲ್ದಾಣದಲ್ಲಿ ಶಂಕಿತ ಉಗ್ರ ನಡೆಸಿದ ಗ್ರೆನೇಡ್ ಸ್ಫೋಟದಿಂದಾಗಿ 17 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟು, 32 ಜನರು ಗಾಯ ಗೊಂಡಿದ್ದರು. ಮೂವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷದ ಮೇನಿಂದಾಚೆಗೆ ಜಮ್ಮು ಬಸ್ ನಿಲ್ದಾಣದಲ್ಲಿ ಉಗ್ರರು ನಡೆಸಿರುವ 3ನೇ ಗ್ರೆನೇಡ್ ಸ್ಫೋಟ ಇದಾಗಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ…

ನಾನು ಬದುಕಿದ್ದೇನೆ, ಚೆನ್ನಾಗಿದ್ದೇನೆ: ಭಾರತದ ವಿರುದ್ಧ  ಜಿಹಾದ್ ಆರಂಭಿಸಲು ಮಸೂದ್ ಅಜರ್ ಕರೆ
ಮೈಸೂರು

ನಾನು ಬದುಕಿದ್ದೇನೆ, ಚೆನ್ನಾಗಿದ್ದೇನೆ: ಭಾರತದ ವಿರುದ್ಧ ಜಿಹಾದ್ ಆರಂಭಿಸಲು ಮಸೂದ್ ಅಜರ್ ಕರೆ

March 8, 2019

ಇಸ್ಲಮಾಬಾದ್: ನಾನು ಇನ್ನೂ ಬದುಕಿದ್ದೇನೆ, ಚೆನ್ನಾಗಿಯೇ ಇದ್ದೇನೆ, ಕಾಶ್ಮೀರಿಗಳನ್ನು ಭಾರತದವರು ದಮನ ಮಾಡುತ್ತಿದ್ದಾರೆ ಹೀಗಾಗಿ ಭಾರತೀಯರ ವಿರುದ್ಧ ಜಿಹಾದ್ ಆರಂಭಿಸಬೇಕೆಂದು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮಸೂದ್ ಅಜರ್ ತನ್ನ ಹಿಂಬಾಲಕರಿಗೆ ಕರೆ ನೀಡಿದ್ದಾನೆ. ರಾಷ್ಟ್ರೀಯ ಕ್ರಿಯಾ ಯೋಜನೆಯಡಿ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿರುವ ಪಾಕಿಸ್ತಾನ ಸರ್ಕಾರದ ವಿರುದ್ಧ ಮಸೂದ್ ಅಜರ್ ಕಿಡಿಕಾರಿದ್ದಾನೆ. ಭಾರತದ ಒತ್ತಾಯದ ಮೇರೆಗೆ ಕ್ರಮ ಕೈಗೊಳ್ಳುತ್ತಿರುವುದನ್ನು ವಿರೋಧಿಸಿದ ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ಮಸೀದಿಗಳು ಹಾಗೂ…

1 1,094 1,095 1,096 1,097 1,098 1,611
Translate »