ಮೈಸೂರು: ಇಂದು ಮಹಿಳಾ ದಿನ. ವಿಶ್ವದಲ್ಲಿ ತಾಯಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಹೀಗಾಗಿ ತಾಯಿಗೆ ನೋವಾಗುವಂತಹ ಮಾತುಗಳ ಯಾರೂ ಆಡಬಾರದು. ಆದರೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗಳು ನಡೆಯುತ್ತಿದ್ದು, ಅದನ್ನು ತಡೆಯಲು ಆಗುವುದಿಲ್ಲ. ಆದರೆ ಯಾರಿಗೂ ನೋವಾಗು ವಂತಹ ಮಾತುಗಳು ಬೇಡ. ಯಾರ ಬಗ್ಗೆಯೂ ಅವಮಾನಕರವಾದ ಮಾತು ಗಳನ್ನು ಆಡಬಾರದು. ಯಾವುದೇ ಕಾರಣಕ್ಕೂ ಅಭಿಮಾನಿಗಳು ವೈಯಕ್ತಿಕ ಟೀಕೆಗಳನ್ನು ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಸುಮಲತಾ ಅಂಬರೀಶ್ ಮನವಿ ಮಾಡಿದರು. ಮಹಿಳಾ ದಿನವಾದ ಶುಕ್ರವಾರ ಮೈಸೂ ರಿಗೆ ಭೇಟಿ ನೀಡಿ,…
ಲೋಕಸಭೆ ಚುನಾವಣೆ: ಮೈಸೂರು ನಗರ ಪೊಲೀಸರ ಸಿದ್ಧತೆ
March 9, 2019ಮೈಸೂರು,: ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು ಪೊಲೀಸರು ಸರ್ವ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಭಾರತ ಚುನಾ ವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಪ್ರಕಟಿಸುತ್ತಿ ದ್ದಂತೆಯೇ ಸರ್ವ ಸನ್ನದ್ಧರಾಗಲಿದ್ದಾರೆ. ಈಗಾಗಲೇ ಜಿಲ್ಲಾಡಳಿ ತವು ಚುನಾವಣಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು, ಮೊದಲ ಮತ್ತು ಎರಡನೇ ಮತದಾನ ಅಧಿಕಾರಿಗಳು (1sಣ ಚಿಟಿಜ 2ಟಿಜ ಠಿoಟiಟಿg oಜಿಜಿiಛಿeಡಿ) ಹಾಗೂ ಸಿಬ್ಬಂದಿಗೆ 3 ಹಂತಗಳಲ್ಲಿ ತರಬೇತಿ ನೀಡಿ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್ ಬಂದೋಬಸ್ತ್ ಯೋಜನೆ ರೂಪಿಸಿಕೊಂಡಿದ್ದಾರೆ. ಈ ಕುರಿತು…
ಆಧುನಿಕ ಕಾಲದಲ್ಲೂ ಮಹಿಳೆಯರ ಶೋಷಣೆ ನಿಂತಿಲ್ಲ
March 9, 2019ಮೈಸೂರು: ವಿಜ್ಞಾನ-ತಂತ್ರಜ್ಞಾನಯುಕ್ತ ಆಧುನಿಕ ಕಾಲದಲ್ಲಿಯೂ ವರದಕ್ಷಿಣೆ ಪಿಡುಗಿನಿಂದ ಮಹಿಳೆಯರು ನಲುಗುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ವಿಷಾದಿಸಿದ್ದಾರೆ. ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರ ಯದಲ್ಲಿ ಶುಕ್ರವಾರ ನಡೆದ `ವಿಶ್ವ ಮಹಿಳಾ ದಿನಾಚಣೆ’ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಆಧುನಿಕ ಕಾಲದಲ್ಲೂ ಮಹಿಳೆಯರ ಶೋಷಣೆ ನಿಂತಿಲ್ಲ. ಮಹಿಳೆಯರು ದೌರ್ಜನ್ಯದಿಂದ ಮುಕ್ತರಾಗಲು ಸ್ವಾವಲಂಬಿಗಳಾಗಬೇಕು. ಶಿಕ್ಷಣ ಪಡೆದಾಗ ಮಾತ್ರ ದೌರ್ಜನ್ಯವನ್ನು ಹಿಮ್ಮೆಟ್ಟಿ ಸಬಹುದು. ಜಗತ್ತು ಮಹಿಳೆಗೆ…
ಚಿರತೆ, ವಾನರರಿಗೆ ಸಿಂಹಸ್ವಪ್ನವಾಗಿರುವ `ಟೈಗರ್ ಡಾಲ್’ !
March 9, 2019ಕಂಗೆಟ್ಟ ರೈತರಿಗೆ ವ್ಯಾಘ್ರನ ಕೃಪಾಕಟಾಕ್ಷ ಮೈಸೂರು: ಮೈಸೂರಿನ ಮಂಡ ಕಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಿರುವ ಆತಂಕದ ನಡುವೆಯೇ ರೈತರೊಬ್ಬರು ರಕ್ಷಣೆಗೆ ಸರಳ ಹಾಗೂ ಪರಿಣಾಮಕಾರಿ ಉಪಾಯವನ್ನು ಕಂಡು ಕೊಂಡಿದ್ದಾರೆ. ಮೈಸೂರು ತಾಲೂಕಿನ ಕೂಡನಹಳ್ಳಿ ಗ್ರಾಮದ ರೈತ ಬಸವರಾಜು, ಹುಲಿಯ ಬೊಂಬೆಯನ್ನು ಬಳಸಿ, ಚಿರತೆ ಹಾಗೂ ವಾನರಗಳ ಹಾವಳಿಗೆ ಬ್ರೇಕ್ ಹಾಕುವ ಮೂಲಕ ಸುತ್ತಮುತ್ತಲ ಗ್ರಾಮಸ್ಥರ ಹುಬ್ಬೇರುವಂತೆ ಮಾಡಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣದ ಕಾಂಪೌಂಡ್ ಒಳಾವರಣದಲ್ಲೇ ಚಿರತೆ ಕಾಣಿಸಿ ಕೊಂಡಿತ್ತು. ಸುತ್ತಮುತ್ತಲ ಗ್ರಾಮಗಳಲ್ಲೂ ಚಿರತೆಗಳ…
ಇಂದು ಸಿಂಚನಾ ರಂಗ ಪ್ರವೇಶ
March 9, 2019ಮೈಸೂರು: ಮೈಸೂರಿನ ಉದ್ಯಮಿ ಹಾಗೂ ಹಲವಾರು ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಪಿ.ಎಸ್.ಲೋಕೇಶ್ ಮತ್ತು ಶ್ರೀಮತಿ ಆರ್.ಸಹನಾ ಅವರ ಪುತ್ರಿ ಸಿಂಚನಾ ನಾಳೆ (ಶನಿವಾರ) ಸಂಜೆ 5.30ಕ್ಕೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಂಗ ಪ್ರವೇಶ ಮಾಡುತ್ತಾರೆ. ವಸುಂಧರಾ ಪರ್ಫಾ ಮಿಂಗ್ ಆಟ್ರ್ಸ್‍ನ ವಿದ್ಯಾರ್ಥಿಯಾದ ಸಿಂಚನಾ ಡಾ. ವಸುಂಧರಾ ದೊರೆಸ್ವಾಮಿ ಅವರಿಂದ ನಾಟ್ಯ ಪ್ರಾವೀಣ್ಯತೆ ಪಡೆದಿದ್ದಾರೆ. ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಗೀತ ವಿವಿ ವಿಶ್ರಾಂತ ಕುಲಪತಿ ಡಾ. ಸರ್ವಮಂಗಳಾ ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಪಿಎಸಿ ಅಧ್ಯಕ್ಷ ಕೆ.ವಿ.ಮೂರ್ತಿ…
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಅಬ್ದುಲ್ಲಾ ಅಧಿಕಾರ ಸ್ವೀಕಾರ
March 9, 2019ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಜೆಡಿಎಸ್ ಮುಖಂಡ ಅಬ್ದುಲ್ಲಾ ಅವರು ಇಂದು ಮಧ್ಯಾಹ್ನ ಅಧಿಕಾರ ವಹಿಸಿಕೊಂಡರು. ನಿನ್ನೆಯಷ್ಟೇ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿರುವ ಅಬ್ದುಲ್ಲಾ ಅವರು ಇಂದು ಮಧ್ಯಾಹ್ನ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿರುವ ಕಚೇರಿಯಲ್ಲಿ ವ್ಯವಸ್ಥಾಪಕ ರೆಡ್ಡಪ್ಪರಿಂದ ಅಧಿಕಾರ ವಹಿಸಿಕೊಂಡರು. ನಂತರ ಮಾತನಾಡಿದ ಅಬ್ದುಲ್ಲಾ ಅವರು, ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ಮಾಡಬೇಕಾದ ಅಭಿವೃದ್ಧಿ ಕೆಲಸಗಳು, ಬಾಕಿ ಉಳಿದಿರುವ ಯೋಜನೆಗಳು ಹಾಗೂ ಪ್ರಗತಿ ಕುರಿತಂತೆ ಸದ್ಯದಲ್ಲೇ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು….
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ
March 8, 2019ಬೆಂಗಳೂರು: ಪ್ರತಿಷ್ಠಿತ ಮೈಸೂರು, ಬೆಂಗಳೂರು ಉತ್ತರ ಸೇರಿದಂತೆ 16 ಲೋಕಸಭಾ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿ ಗಳ ಪಟ್ಟಿಯನ್ನು ಕಾಂಗ್ರೆಸ್ ಸಿದ್ಧಪಡಿಸಿದೆ. ತುಮಕೂರು ಸೇರಿದಂತೆ ಹಾಲಿ ಸಂಸ ದರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಮತ್ತೆ ಅವ ರಿಗೇ ಟಿಕೆಟ್ ನೀಡಲು ಪಕ್ಷದ ಕೇಂದ್ರ ಚುನಾ ವಣಾ ಪರಿಶೀಲನಾ ಸಮಿತಿಗೆ ಶಿಫಾರಸು ಮಾಡಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಇಂದು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಚುನಾವಣಾ ಹಾಗೂ ಪ್ರಚಾರ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ….
ಮುಡಾ ಅಧ್ಯಕ್ಷರಾಗಿ ಹೆಚ್.ಎನ್.ವಿಜಯ್ ಅಧಿಕಾರ ಸ್ವೀಕಾರ
March 8, 2019ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಹೆಚ್.ಎನ್.ವಿಜಯ್ ಅಧಿಕಾರ ವಹಿಸಿಕೊಂಡರು. ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಮುಡಾ ಆಯುಕ್ತ ಕಾಂತರಾಜ್ ಅವರಿಂದ ಹೂ ಗುಚ್ಛ ಸ್ವೀಕರಿಸಿ, ಕಡತಗಳಿಗೆ ಸಹಿ ಹಾಕುವ ಮೂಲಕ ವಿಧ್ಯುಕ್ತವಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಅವರ ಸಹಕಾರದಿಂದ ಉನ್ನತ ಹುದ್ದೆ ದೊರೆತಿದ್ದು, ಅವರಿಗೆ ಅಭಾರಿಯಾಗಿರುತ್ತೇನೆ. ಅಧಿಕಾರಿಗಳು ಹಾಗೂ ಸದಸ್ಯರ…
ಅಮೇಥಿಯಿಂದ ರಾಹುಲ್, ರಾಯ್‍ಬರೇಲಿಯಿಂದ ಸೋನಿಯಾ ಸ್ಪರ್ಧೆ
March 8, 2019ನವದೆಹಲಿ: ಮುಂಬರುವ 17ನೇ ಲೋಕ ಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಕಾಂಗ್ರೆಸ್ ಪ್ರಧಾನ ಕಚೇರಿಯಿಂದ ಗುರುವಾರ ರಾತ್ರಿ ಹೊರಬಿದ್ದಿದ್ದು, ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ರಾಯ್‍ಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ ಅವರು ಸ್ಪರ್ಧಿಸುತ್ತಿದ್ದಾರೆ. ಮೊದಲ ಪಟ್ಟಿಯಲ್ಲಿ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಉತ್ತರ ಪ್ರದೇಶ ರಾಜ್ಯದ 11 ಕ್ಷೇತ್ರಗಳು, ಬಿಜೆಪಿ ಪ್ರಾಬಲ್ಯದ ರಾಜ್ಯವಾದ ಗುಜರಾತ್‍ನ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಖೈರುಗೊಳಿಸಲಾಗಿದೆ. ಒಂದು…
ನಾಪತ್ತೆಯಾಗಿದ್ದ ಮಳವಳ್ಳಿ ವಕೀಲೆ ಹತ್ಯೆ
March 8, 2019ಮಳವಳ್ಳಿ: 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಳವಳ್ಳಿ ವಕೀಲೆಯ ಮೃತದೇಹ ತಾಲೂಕಿನ ತಳಗವಾದಿ ಗ್ರಾಮದ ಜಮೀನೊಂದ ರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಳವಳ್ಳಿಯ ಜೆಎಂಎಫ್‍ಸಿ ನ್ಯಾಯಾ ಲಯದಲ್ಲಿ ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿ.ಮಾದಲಾಂಬಿಕ (40) ಹತ್ಯೆಗೊಳಗಾದವರಾಗಿದ್ದು, ಇವರು ಫೆ.25ರಂದು ಸಂಜೆ 6 ಗಂಟೆ ಸುಮಾರಿನಲ್ಲಿ ತಳಗವಾದಿ ಗ್ರಾಮಕ್ಕೆ ಆಟೋದಲ್ಲಿ ತೆರಳಿದ್ದಾರೆ. ಅಲ್ಲಿ ಅಂಗಡಿಯೊಂದರ ಬಳಿ ಇದ್ದ ಅವರ ಪುತ್ರಿ ಭೂಮಿಕಾ ಜೊತೆ ಅವರು ಮಾತನಾಡುತ್ತಿರುವಾಗಲೇ…










