ಮಂಡ್ಯ: ಕೆಲ ತಿಂಗಳ ಹಿಂದೆ ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಅವರು ಆಂಧ್ರದವರು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪೀಠಿಕೆ ಹಾಕಿದ್ದರು. ಈಗ ಅಂಬರೀಷ್ ಶಾಸಕರು ಹಾಗೂ ಸಚಿವರಾಗಿದ್ದಾಗ ಅವರ ಮನೆಗೆ ಹೋದವರಿಗೆ ಸುಮಲತಾ ಒಂದು ಗ್ಲಾಸ್ ನೀರು ಕೊಟ್ಟಿದ್ದಾರಾ? ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವಾಗ್ದಾಳಿ ನಡೆಸಿದ ಬೆನ್ನಲ್ಲೇ `ಗಂಡ ಸತ್ತ ಒಂದು ತಿಂಗಳು, ಎರಡು ತಿಂಗಳಲ್ಲೇ ಚಾಲೆಂಜ್ ಮಾಡಿಕೊಂಡು ಎಲೆಕ್ಷನ್‍ಗೆ ಬರುತ್ತಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ವಿವಾದಾತ್ಮಕ ಹೇಳಿಕೆ ನೀಡುವ…
ಮೈಸೂರಿನ ಎಂಜಿ ರಸ್ತೆ ಕಾಮಗಾರಿ 1.40 ಕೋಟಿ ರೂ. ಭ್ರಷ್ಟಾಚಾರ ಪ್ರಕರಣ : ಅಧಿಕಾರಿಗಳು, ಗುತ್ತಿಗೆದಾರನ ವಿರುದ್ಧ ಎಸಿಬಿಗೆ ದೂರು
March 9, 2019ಮೈಸೂರು: ಮೈಸೂರಿನ ಎಂಜಿ ರಸ್ತೆ ಹಾಗೂ ಫುಟ್‍ಪಾತ್ ಅಭಿ ವೃದ್ಧಿ ಕಾಮಗಾರಿಯಲ್ಲಿ 1.40 ಕೋಟಿ ರೂ. ಭ್ರಷ್ಟಾಚಾರ ನಡೆದಿರುವುದು ಸತ್ಯ ಶೋಧನಾ ಸಮಿತಿ ವರದಿಯಲ್ಲಿ ದೃಢಪಟ್ಟಿರುವ ಹಿನ್ನೆಲೆ ಯಲ್ಲಿ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಲು ಶುಕ್ರವಾರ ನಡೆದ ನಗರಪಾಲಿಕೆ ವಿಶೇಷ ಕೌನ್ಸಿಲ್ ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮೈಸೂರು ನ್ಯಾಯಾಲಯದ ಮುಂಭಾಗ ದಿಂದ ರಾಷ್ಟ್ರೀಯ ಹೆದ್ದಾರಿ 212ರವರೆಗಿನ ಮಹಾತ್ಮ ಗಾಂಧಿ(ಎಂಜಿ) ರಸ್ತೆಯ ಆಯ್ದ ಭಾಗ ಗಳಲ್ಲಿ ರಸ್ತೆ ಹಾಗೂ ಫುಟ್‍ಪಾತ್ ಅಭಿವೃದ್ಧಿ ಕಾಮಗಾರಿಯ…
ಚಾಮುಂಡಿಬೆಟ್ಟಕ್ಕೆ ದುಷ್ಕರ್ಮಿಗಳಿಂದ ಬೆಂಕಿ
March 9, 2019ಮೈಸೂರು: ಚಾಮುಂಡಿಬೆಟ್ಟದಲ್ಲಿ ದುಷ್ಕರ್ಮಿಗಳು ಹಾಕಿದ ಬೆಂಕಿ ನಂದಿಸುವ ಸಂದರ್ಭದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿರು ವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ಚಾಮುಂಡಿ ಬೆಟ್ಟದ ನೂರಾರು ಎಕರೆ ಕುರುಚಲು ಕಾಡಿಗೆ ಬೆಂಕಿ ವ್ಯಾಪಿಸಿದ್ದಲ್ಲದೆ, ದಟ್ಟ ಹೊಗೆ ಆವರಿಸಿತ್ತು. ಅಗ್ನಿ ಶಾಮಕ, ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಸ್ವಯಂ ಸೇವಕರೂ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ್ರರು. ಈ ವೇಳೆ ಬಂಡೆಯೊಂದರ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿದೆ. ಮೊದಲು ನೋಡಿದ ಸ್ವಯಂ ಸೇವಕರು, ಗಾಬರಿಯಿಂದ ಓಡಿ…
ಶಾಸಕ ಸ್ಥಾನ ತೊರೆದ ಜಾಧವ್ ಸೇರಿ ನಾಲ್ವರು ಕಾಂಗ್ರೆಸ್ ಶಾಸಕರಿಗೆ ಸ್ಪೀಕರ್ ನೋಟೀಸ್
March 9, 2019ಬೆಂಗಳೂರು: ಮಾಜಿ ಸಚಿವ ಕಾಂಗ್ರೆಸ್‍ನ ಬಂಡಾಯ ನಾಯಕ ರಮೇಶ್ ಜಾರಕಿಹೊಳಿ ಸೇರಿದಂತೆ ನಾಲ್ವರು ಶಾಸಕರಿಗೆ ವಿಧಾನ ಸಭಾಧ್ಯಕ್ಷ ರಮೇಶ್‍ಕುಮಾರ್ ನೋಟೀಸ್ ಜಾರಿಗೊಳಿಸಿ, ವಿಚಾರಣೆಗೆ ಹಾಜ ರಾಗುವಂತೆ ಸೂಚಿಸಿದ್ದಾರೆ. ಬರುವ ಮಂಗಳವಾರ (ಮಾರ್ಚ್ 12) ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಸುದ್ದಿಗಾರ ರಿಗೆ ಈ ವಿಷಯ ತಿಳಿಸಿದ ಸಭಾಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯ ಕರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ನಾನು ಈ ಕ್ರಮಕ್ಕೆ ಮುಂದಾಗಿದ್ದೇನೆ. ಕಾನೂನು ಹೇಗೆ ಹೇಳುತ್ತೋ ಹಾಗೆ ಮಾಡುತ್ತೇನೆ. ರಮೇಶ್ ಅವರಲ್ಲದೆ,…
ಮೈಸೂರು ಜಿಪಂ 436 ಕೋಟಿ ರೂ. ಬಜೆಟ್
March 9, 2019ಮೈಸೂರು: 2019-20ನೇ ಸಾಲಿಗೆ ಮೈಸೂರು ಜಿಲ್ಲಾ ಪಂಚಾಯ್ತಿಯು 435.91 ಕೋಟಿ ರೂಗಳ ಆಯ-ವ್ಯಯ ಮಂಡಿಸಿದೆ. ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣ ದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ತುರ್ತು ಸಭೆಯಲ್ಲಿ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ ಅವರು ಬಜೆಟ್ ಮಂಡನೆ ಮಾಡಿದ್ದು, 2019-20ನೇ ಸಾಲಿಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದ ನಂತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ವಿವಿಧ ಕಾರ್ಯಕ್ರಮಗಳಡಿ ಪ್ರಸಕ್ತ ಸಾಲಿನಲ್ಲಿ 1.302 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು, ಜಿಲ್ಲಾ ಪಂಚಾಯ್ತಿ ವೇತನ ಬಾಬ್ತು 127 ಕೋಟಿ ರೂ…
ಜಯದೇವ ಹೃದ್ರೋಗ ಆಸ್ಪತ್ರೆಗೆ ಕೆನರಾ ಬ್ಯಾಂಕ್‍ನಿಂದ ಅತ್ಯಾಧುನಿಕ ಆಂಬುಲೆನ್ಸ್ ಕೊಡುಗೆ
March 9, 2019ಮೈಸೂರು: ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕೆನರಾ ಬ್ಯಾಂಕಿನಿಂದ 30 ಲಕ್ಷ ರೂ. ಮೌಲ್ಯದ ಸುಸಜ್ಜಿತ ಆಂಬುಲೆನ್ಸ್ ವಾಹನವನ್ನು ದೇಣಿಗೆಯಾಗಿ ನೀಡಲಾಯಿತು. ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಡಿ.ವಿಜಯ ಕುಮಾರ್ ಅವರು ಶ್ರೀ ಜಯ ದೇವ ಹೃದ್ರೋಗ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ ಅವರಿಗೆ ಇಂದು ಮಧ್ಯಾಹ್ನ ಕೆಆರ್‍ಎಸ್ ರಸ್ತೆಯ ಆಸ್ಪತ್ರೆ ಆವರಣದಲ್ಲಿ ಆಂಬುಲೆನ್ಸ್ ಕೀಲಿಯನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜಯದೇವ ಆಸ್ಪತ್ರೆ ಸೇವೆಯನ್ನು ಗಮ ನಿಸಿದ ಕೆನರಾ ಬ್ಯಾಂಕ್…
ಸರ್ವರ್ ವೈಫಲ್ಯ: ಆಸ್ತಿ ನೋಂದಣಿ ಅಸ್ತವ್ಯಸ್ತ
March 9, 2019ಮೈಸೂರು: ಸರ್ವರ್ ವೈಫಲ್ಯ ದಿಂದಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳ ನೋಂದಣಿ ಕಾರ್ಯ ಅಸ್ತವ್ಯಸ್ತವಾಗಿ ಸಾರ್ವಜನಿಕರು ಪರಿತಪಿಸಬೇಕಾಗಿ ಬಂದಿದೆ. ಹಲವು ದಿನಗಳಿಂದಲೂ ಈ ಸಮಸ್ಯೆ ಎದುರಾಗಿದ್ದರೂ, ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಜನ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮೈಸೂರಿನಲ್ಲಿ ಪ್ರದೇಶ ವಾರು ನಾಲ್ಕು ಉಪ ನೋಂದಣಾಧಿಕಾರಿ ಕಚೇರಿಗಳಿವೆ. ಇವುಗಳಲ್ಲಿ ಪ್ರತಿನಿತ್ಯ, ಪ್ರತಿ ಯೊಂದರಲ್ಲಿ ಹತ್ತಾರು ಆಸ್ತಿಗಳು ನೋಂದಣಿಯಾಗುತ್ತವೆ. ಆದರೆ ಇತ್ತೀ ಚಿನ ದಿನಗಳಲ್ಲಿ ಸರ್ವರ್ ವೈಫಲ್ಯ ದಿಂದಾಗಿ ನೋಂದಣಿ ಕಾರ್ಯ ಸ್ಥಗಿತ ಗೊಂಡು ಜನರು…
`ಔಷಧೀಯ, ವಸ್ತು ರಸಾಯನಶಾಸ್ತ್ರದ ಇತ್ತೀಚಿನ ಆವಿಷ್ಕಾರ’ ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ
March 9, 2019ಮೈಸೂರು: ಮೈಸೂರಿನ ಮಾನಸಗಂಗೋತ್ರಿ ವಿಜ್ಞಾನ ಭವನ ಸಭಾಂಗಣದಲ್ಲಿ ಔಷಧೀಯ ಮತ್ತು ವಸ್ತು ರಸಾಯನಶಾಸ್ತ್ರದ ಇತ್ತೀಚಿನ ಆವಿ ಷ್ಕಾರಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಮೈಸೂರು ಸಿಎಫ್‍ಟಿಆರ್‍ಐ ನಿರ್ದೇಶಕ ಡಾ.ಕೆಎಸ್ ಎಂಎಸ್ ರಾಘವ ರಾವ್ ಇಂದಿಲ್ಲಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಆರೋಗ್ಯ ಮತ್ತು ಸುಖಕರ ಜೀವನಕ್ಕೆ ಔಷಧೀಯ ಮತ್ತು ವಸ್ತು ರಸಾಯನಶಾಸ್ತ್ರ ಬಹು ಮುಖ್ಯ. ಆರೋಗ್ಯಕ್ಕೆ ಔಷಧ ಬೇಕೇ ಬೇಕು. ಆಹಾರ ಕೆಡದಂತೆ ಸಂರಕ್ಷಣೆ ಮಾಡಲು ಇದು ಮುಖ್ಯ. ಈ ನಿಟ್ಟಿನಲ್ಲಿ ಆವಿಷ್ಕಾರಗಳು ಅಗತ್ಯವಾಗುತ್ತವೆ…
ಮಹಿಳೆಯರು ತಾವೂ ಅಭಿವೃದ್ಧಿ ಸಾಧಿಸಿ, ದೇಶದ ಸಂಸ್ಕೃತಿ ರಕ್ಷಿಸಬೇಕಿದೆ
March 9, 2019ಮೈಸೂರು: ತಮಗೆ ಸಿಕ್ಕಿರುವ ಸ್ವಾತಂತ್ರ್ಯ ದುರುಪಯೋಗ ಮಾಡಿಕೊಳ್ಳದೇ, ಸಾಂಸ್ಕೃತಿಕ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಿದಾಗ ಮಾತ್ರ ಬೇರ್ಯಾರು ಬೆರಳು ತೋರಿಸಿ ಮಾತ ನಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮಹಿಳೆಯರ ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಹಿಳಾ ಉದ್ಯೋಗಿಗಳ ಸಮುದಾಯ ಹಾಗೂ ಮೈತ್ರಿ ಮಹಿಳಾ ಅಧ್ಯಾಪಕರ ಬಳಗದ ವತಿ ಯಿಂದ ಮಾನಸಗಂಗೋತ್ರಿ ರಾಣಿಬಹ ದ್ದೂರ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ‘ಜಾಗತಿಕ ಸಂದರ್ಭದಲ್ಲಿ ಮಹಿಳೆ’…
`ಮಹಿಳಾ ಕಹಳೆ ದಿಟ್ಟ ಮಹಿಳೆ’ ಪ್ರಶಸ್ತಿ ಪ್ರದಾನ
March 9, 2019ಮೈಸೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ದಿ.ಕೆ.ಕಮಲಮ್ಮನವರ 9ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಜನನಿ ಸೇವಾ ಟ್ರಸ್ಟ್ ಶುಕ್ರ ವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ `ಮಹಿಳಾ ಕಹಳೆ ದಿಟ್ಟ ಮಹಿಳೆಯರು’ ಪ್ರಶಸ್ತಿ ನೀಡಿ ಗೌರವಿಸಿತು. ಮ.ನ.ಲತಾ ಮೋಹನ್ (ಸಾಹಿತ್ಯ), ಪಿ.ಯು. ಮಂಜುಳಾ (ಹಿರಿಯ ಶುಶ್ರೂ ಷಕಿ), ಎಂ.ಕವಿತಾ (ಅಂಚೆ ಮಹಿಳೆ), ಎಂ.ನಿರ್ಮಲಾ (ಮುಖ್ಯ ಪೇದೆ), ಕೆ.ಎಂ.ರೇಖಾ ಪ್ರಕಾಶ್ (ಪತ್ರಕರ್ತೆ), ಯಶೋಧ (ಬಿಸಿಯೂಟ ಕಾರ್ಯ…










