ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ ಮೈಸೂರು ಪಾಲಿಕೆ ಹೊಸ ಉಪಾಯ `ಗ್ರೀನ್ ವೆಡ್ಡಿಂಗ್’
ಮೈಸೂರು

ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ ಮೈಸೂರು ಪಾಲಿಕೆ ಹೊಸ ಉಪಾಯ `ಗ್ರೀನ್ ವೆಡ್ಡಿಂಗ್’

March 8, 2019

ಮೈಸೂರು: ಮೈಸೂರು ನಗರಪಾಲಿಕೆ ವತಿಯಿಂದ `ಗ್ರೀನ್ ವೆಡ್ಡಿಂಗ್’ ವಿನೂತನ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತಿಳಿಸಿದರು.

ನಗರಪಾಲಿಕೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದ್ದರೂ ಮದುವೆ, ಅಪಾರ್ಟ್ ಮೆಂಟ್ ಮತ್ತಿತರ ಕಾಂಪ್ಲೆಕ್ಸ್‍ಗಳಲ್ಲಿ ಹೆಚ್ಚಾಗಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹಾಗಾಗಿ ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವ ಉದ್ದೇಶದಿಂದ ಪರಿಸರ ಸ್ನೇಹಿ `ಗ್ರೀನ್ ವೆಡ್ಡಿಂಗ್’ಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಗ್ರೀನ್ ವೆಡ್ಡಿಂಗ್ ಆದವರಿಗೆ ಪ್ರಮಾಣ ಪತ್ರ ನೀಡಿ ಪ್ರಶಂಸಿಸ ಲಾಗುವುದು ಎಂದು ಹೇಳಿದರು. ಮದುವೆಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ನೀರಿನ ಬಾಟಲ್, ಪ್ಲೇಟು, ಲೋಟಗಳನ್ನು ಬಳಸುತ್ತಿದ್ದಾರೆ. ಇದರಿಂದ ತ್ಯಾಜ್ಯ ಪ್ರಮಾಣ ಹೆಚ್ಚಾಗಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹಾಗಾಗಿ ಪ್ಲಾಸ್ಟಿಕ್ ವಸ್ತುಗಳ ಬದಲಾಗಿ ಬಾಳೆ ಎಲೆ, ಪೇಪರ್ ಶೀಟ್, ಲೋಟ, ಬಟ್ಟೆ ಬ್ಯಾಗ್ ಮತ್ತಿತರೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸು ವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ `ಗ್ರೀನ್ ವೆಡ್ಡಿಂಗ್’ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು. ಸಾಧ್ಯವಾದಷ್ಟು ಆಮಂತ್ರಣ ಪತ್ರಿಕೆಯ ಬದಲು ಡಿಜಿ ಟಲೀಕರಣಗೊಳಿಸಿ, ವಾಟ್ಸಾಪ್, ಎಸ್‍ಎಂಎಸ್ ಮುಂತಾದ ಸಂಪರ್ಕ ಸೇವೆಯ ಮೂಲಕ ಆಮಂತ್ರಣ ನೀಡಲು ಉತ್ತೇಜಿಸಲಾಗುವುದು. ಈ ಯೋಜನೆ ಕುರಿತು ಮಾಹಿತಿ ನೀಡಲು ಪ್ರತ್ಯೇಕ ತಂಡ ರಚಿಸಿ, ಅದರ ಮೂಲಕ ಮಾರ್ಗದರ್ಶನ ನೀಡಲಾಗುವುದು ಎಂದರು.
ರಾಜ್ಯದ ವಿವಿಧೆಡೆ ಈಗಾಗಲೇ ಗ್ರೀನ್ ವೆಡ್ಡಿಂಗ್ ನಡೆದಿವೆ. ಆದರೆ, ನನಗೆ ತಿಳಿದಂತೆ ಸ್ಥಳೀಯ ಸಂಸ್ಥೆ ಯಿಂದ ಈ ಪ್ರಯತ್ನ ನಡೆದಿಲ್ಲ. ಮೈಸೂರು ನಗರ ಪಾಲಿಕೆಯಿಂದ ಈ ಯೋಜನೆ ಜಾರಿಗೊಳಿಸುತ್ತಿದ್ದು, 2-3 ಮದುವೆಗಳಲ್ಲಿ ಈ ಯೋಜನೆ ಯಶಸ್ವಿಯಾದರೆ ಉಳಿದವರೂ ಪ್ರಭಾವಿತರಾಗುತ್ತಾರೆ. ಮದುವೆಗಳಲ್ಲಿ ಉಳಿದ ಆಹಾರ ತ್ಯಾಜ್ಯ
ಸಂಪೂರ್ಣವಾಗಿ ಕಾಂಪೆÇೀಸ್ಟ್ ಆಗಬೇಕು. ಸಾರ್ವಜನಿಕರಲ್ಲಿ `ನಮ್ಮ ನಗರ, ನಮ್ಮ ಹೆಮ್ಮೆ’ ಎಂಬ ಅಭಿಮಾನ ಬರಬೇಕು. ಗ್ರೀನ್ ವೆಡ್ಡಿಂಗ್ ಬಗ್ಗೆ ತಿಳಿಯ ಬಯಸುವವರು ನಗರ ಪಾಲಿಕೆಯ ಸಹಾಯವಾಣಿ:0821-2418800 ಸಂಪರ್ಕಿಸಬಹುದು ಎಂದರು.

ಮಹಾರಾಣಿ ಕಾಲೇಜಿನಲ್ಲಿ ಪಿಂಕ್ ಶೌಚಾಲಯ: ಪಾಲಿಕೆ ಬಜೆಟ್‍ನಲ್ಲಿ ಘೋಷಿಸಿದಂತೆ ಪಿಂಕ್ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಜನಸಂದಣಿ ಇರುವ ಆಯ್ದ ಸ್ಥಳಗಳಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಗರದ 8 ಕಡೆಗಳಲ್ಲಿ ಪಿಂಕ್ ಶೌಚಾಲಯ ನಿರ್ಮಿಸಲಾಗುವುದು. ಸದ್ಯದಲ್ಲೇ ಮಹಾರಾಣಿ ಕಾಲೇಜಿನಲ್ಲಿ ಮೊದಲ ಪಿಂಕ್ ಶೌಚಾಲಯ ತೆರೆಯಲಾಗುವುದು ಎಂದರು.

ಹಾಗೆಯೇ ಮೈಸೂರಿಗೆ ಪ್ರವಾಸಿಗರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಯಾನಿಟರಿ ಕಾಂಪ್ಲೆಕ್ಸ್ ನಿರ್ಮಾಣ ಮಾಡುತ್ತಿದ್ದು, ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಎದುರು ಹಾಗೂ ಪುರಭವನದ ಹತ್ತಿರ ಆಧುನಿಕ ತಂತ್ರe್ಞÁನವುಳ್ಳ ವ್ಯವಸ್ಥಿತವಾದ ಎಲ್ಲಾ ವರ್ಗದ ಜನರಿಗೆ ಉಪಯೋಗಿಸಲು ಅನುಕೂಲಕರವಾಗುವಂತಹ ಅತ್ಯಾಧುನಿಕ ವ್ಯವಸ್ಥೆಯುಳ್ಳ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಉz್ದÉೀಶಿಸಲಾಗಿದೆ.

ಹಸಿರು ಅಂಗಡಿ ಯೋಜನೆಯಡಿ ಸ್ತೀ ಶಕ್ತಿ ಸ್ವಸಹಾಯ ಸಂಘಗಳು ತಯಾರಿ ಸುವ ಬಟ್ಟೆ, ಪೇಪರ್‍ನಿಂದ ತಯಾರಿಸಿದ ವಸ್ತುಗಳನ್ನು ಬಳಕೆ ಮಾಡಲು, ಸಾರ್ವಜನಿಕರಿಗೆ ಒದಗಿಸಲು ಉತ್ತೇಜನ ಹಾಗೂ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹಸಿರು ಅಂಗಡಿ ಸ್ಥಾಪನೆ ಮಾಡಲು ಉz್ದÉೀಶಿಸಲಾಗಿದೆ. ಈ ಯೋಜನೆಯು ಸುಂದರ ಹಾಗೂ ಸ್ವಚ್ಛ ಮೈಸೂರು ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಸಹಕಾರಿಯಾಗುವ ಜೊತೆಗೆ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಲಿದೆ ಎಂದರು. ಜ್ಯೂಸ್, ನೀರಿನ ಬಾಟಲುಗಳ ಮರುಬಳಕೆ ಘಟಕ ಸ್ಥಾಪಿಸಲು ಕ್ರಮವಹಿಸಿದ್ದು, ಸಾಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಸೂಯೇಜ್ ಫಾರ್ಮ್‍ನ ಕಸದ ರಾಶಿಯನ್ನು ತೆರವುಗೊಳಿಸಲು ಕೌನ್ಸಿಲ್ ನಿರ್ಣಯಿಸಿದೆ. ಇದಕ್ಕೆಂದೇ 3.50 ಕೋಟಿ ರೂ ಖರ್ಚು ಮಾಡಲಾಗುವುದು ಎಂದು ಹೇಳಿದರು. ನಗರ ವ್ಯಾಪ್ತಿಯಲ್ಲಿ 140 ಅಪಾರ್ಟ್ ಮೆಂಟ್‍ಗಳಿದ್ದು, ಮುಂದಿನ ದಿನಗಳಲ್ಲಿ ಅಪಾರ್ಟ್‍ಮೆಂಟ್‍ಗಳಲ್ಲಿ ಒಣ ಕಸವನ್ನಷ್ಟೇ ಸಂಗ್ರಹಿಸಲಾಗುವುದು. ಹಸಿ ತ್ಯಾಜ್ಯವನ್ನು ಅಪಾರ್ಟ್‍ಮೆಂಟ್ ಆವರಣ ದಲ್ಲಿ ಕಾಂಪೋಸ್ಟ್ ಯುನಿಟ್ ಸ್ಥಾಪಿಸಿ ಅಲ್ಲೇ ಸಂಸ್ಕರಣೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.

Translate »