ಸುತ್ತೂರು: ಪ್ರಜಾ ತಂತ್ರವನ್ನು ಉಳಿಸುವ ಸಾಮಥ್ರ್ಯ ಮಾಧ್ಯಮ ರಂಗದ ಕೈಯ್ಯಲ್ಲಿದೆ ಎಂದು ಶಾಸಕ ಎ.ಹೆಚ್. ವಿಶ್ವನಾಥ್ ಅವರು ಇಂದಿಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆರಂಭವಾದ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನದ ಅಂಗವಾಗಿ ನಡೆದ ಗೋಷ್ಠಿ ಯಲ್ಲಿ ಪಾಲ್ಗೊಂಡು `ಮಾಧ್ಯಮ ಮತ್ತು ರಾಜಕಾರಣ’ ವಿಷಯ ಕುರಿತು ಮಾತ ನಾಡುತ್ತಿದ್ದ ಅವರು, ಈಗ ಮಾಧ್ಯಮ ವನ್ನು ಸಂಶಯದಿಂದ ನೋಡುವಂತಾ ಗಿದೆ. ಹಿಂದೆ ಹಿರಿಯರು ಪತ್ರಿಕಾ ಧರ್ಮ ಕಾಪಾಡುತ್ತಿದ್ದರು. ರಾಜಕಾರಣಿಗಳು ಮತ್ತು ಪತ್ರಿಕಾ ಮಾಧ್ಯಮ ಧರ್ಮ ಪರಿ ಪಾಲನೆಯನ್ನು…
ಗೋ.ಮಧುಸೂದನ್ ಆಕ್ಷೇಪ: ಮೈಸೂರು ಜಿಲ್ಲಾಧಿಕಾರಿಗೆ ಪತ್ರ
March 2, 2019ಮೈಸೂರು: ಮೈಸೂರು ತಾಲೂಕು ಕಸಬಾ ಹೋಬಳಿ ಕುರುಬಾರಹಳ್ಳಿಯ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41 ಹಾಗೂ ಚೌಡಹಳ್ಳಿ ಸರ್ವೆ ನಂ. 39 ಸರ್ಕಾರಿ ಜಮೀನು (ಬಿ ಖರಾಬು) ಎಂದು 2015ರ ಮೇ 26ರಂದೇ ಅಂದಿನ ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ಹಾಗಿದ್ದೂ ಸರ್ವೆ ನಂ. 4ರ ಜಾಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಶಂಕುಸ್ಥಾಪನೆ ನೆರವೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಅವರು ಈ ಸಂಬಂಧ ಜಿಲ್ಲಾಧಿಕಾರಿಗೆ…
ಪರಿಶಿಷ್ಟ ಅಧಿಕಾರಿಗಳ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಸುಪ್ರೀಂ ತಡೆ
March 2, 2019ನವದೆಹಲಿ: ರಾಜ್ಯ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ವಿವಾದ ಇತ್ಯರ್ಥ ಪಡಿಸಲು ಕರ್ನಾಟಕ ಸರ್ಕಾರ ಜಾರಿ ಗೊಳಿಸಿದ್ದ ನೂತನ ಕಾಯ್ದೆಗೆ ಆರಂಭ ದಲ್ಲೇ ಕಾನೂನು ತೊಡಕು ಎದುರಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಫೆ.27 ರಂದು ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ.ಪವಿತ್ರ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗೆ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠ,…
ಕರ್ನಾಟಕ, ಕೇರಳ ವಾಕ್-ಶ್ರವಣ ಸಂಸ್ಥೆಗಳ 300 ವಿದ್ಯಾರ್ಥಿಗಳು ಭಾಗಿ
March 2, 2019ಮೈಸೂರು: ಜೆಎಸ್‍ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ `ಸಂವೇದನಾ ಸಾಮಥ್ರ್ಯ, ಕೇಳುವಿಕೆ ಮತ್ತು ಮಾತು-ಭಾಷೆಯ ಪ್ರಕ್ರಿಯೆ’ ವಿಷಯ ಕುರಿತ ಎರಡು ದಿನದ ರಾಷ್ಟ್ರೀಯ ಸಮ್ಮೇಳನಕ್ಕೆ ಶುಕ್ರ ವಾರ ಮೈಸೂರಿನ ರಾಜೇಂದ್ರ ಭವನದಲ್ಲಿ ಚಾಲನೆ ದೊರೆಯಿತು. ಮೈಸೂರು ಜೆಎಸ್‍ಎಸ್ ವಾಕ್-ಶ್ರವಣ ಸಂಸ್ಥೆ, ಧಾರವಾಡ ಜೆಎಸ್‍ಎಸ್ ವಾಕ್-ಶ್ರವಣ ಸಂಸ್ಥೆ, ಕೇರಳದ ಐಕಾನ್ ಮತ್ತು ಅಮೃತ ವಾಕ್-ಶ್ರವಣ ಸಂಸ್ಥೆಗಳ ಒಟ್ಟು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಮೆದುಳಿನ ಕ್ರಿಯೆಯು ಮಾತು, ಭಾಷೆ ಹಾಗೂ ಕೇಳು ವಿಕೆಯ ಪ್ರಕ್ರಿಯೆಗಳ ಮೇಲೆ, ಹೇಗೆ…
ವಿದ್ಯಾವರ್ಧಕದಲ್ಲಿ `ವಿಧ್ವತ್-2ಕೆ19’ ಚಾಲನೆ
March 2, 2019ಮೈಸೂರು: ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಮಟ್ಟದ ವಾಣಿಜ್ಯ ಮತ್ತು ನಿರ್ವಹಣೆ ಉತ್ಸವ `ವಿಧ್ವತ್’ಗೆ ಶುಕ್ರವಾರ ಚಾಲನೆ ದೊರೆಯಿತು. ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ 12ನೇ ವರ್ಷದ ಅಂತರ ಕಾಲೇಜು ವಿಧ್ವತ್ ಉತ್ಸವ ಇದಾಗಿದೆ. ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ `ವಿಧ್ವತ್-2ಕೆ19’ಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾನೂ ಇದೇ ಕಾಲೇಜು ವಿದ್ಯಾರ್ಥಿ. ಕಾಲೇಜಿನ ದಿನಗಳು ಮತ್ತೆ ನೆನಪಾಗುತ್ತಿವೆ. ಆಗ ವಾಣಿಜ್ಯ ಮತ್ತು ನಿರ್ವ ಹಣೆಗೆ ಸಂಬಂಧಿಸಿದ…
ಸ್ಪಾ, ಮನೆಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ
March 2, 2019ಮೈಸೂರು: ಮೈಸೂರು ಸಿಸಿಬಿ ಪೊಲೀಸರು ನರಸಿಂಹರಾಜ ಠಾಣೆ ವ್ಯಾಪ್ತಿ ಯಲ್ಲಿ ವೇಶ್ಯಾವಾಣಿಕೆ ನಡೆಸುತ್ತಿದ್ದ ಆರೋಪದ ಮೇಲೆ ಎನ್.ಆರ್.ಮೊಹಲ್ಲಾದ ಶ್ರೀಲತಾ ಅಲಿಯಾಸ್ ಶಕೀಲ ಎಂಬ ಮಹಿಳೆಯನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಎನ್.ಆರ್.ಮೊಹಲ್ಲಾ ಶಿವಾಜಿ ರಸ್ತೆ 2ನೇ ಕ್ರಾಸ್, ರಜಪೂತ್ ಬ್ಲಾಕ್‍ನ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, 2600 ರೂ. ನಗದು, ಒಂದು ಮೊಬೈಲ್ ಅಮಾನತು ಪಡಿಸಿಕೊಂಡು ಮಹಿಳೆಯನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಮೈಸೂರಿನ ವಿಜಯನಗರ, ವಿ.ವಿ. ಪುರಂ ಮತ್ತು ನರಸಿಂಹರಾಜ…
ಗ್ರಾಪಂ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮೈಸೂರು ತಾಪಂ ನಿರ್ಧಾರ
March 2, 2019ಮೈಸೂರು: ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಕಡೆಗಳಲ್ಲಿ ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಿಸಲು ತಾಲೂಕು ಪಂಚಾಯತಿ ಚಿಂತಿಸಿದ್ದು, ಶೀಘ್ರವೇ ಚಾಮುಂಡಿಬೆಟ್ಟ ಮತ್ತು ಹೊಸಹುಂಡಿಯಲ್ಲಿ ಆರಂಭವಾಗಲಿದೆ. ಮೈಸೂರು ತಾಲೂಕು ಪಂಚಾಯತ್ ತನ್ನ ವ್ಯಾಪ್ತಿಗೆ ಬರುವ ರಿಂಗ್‍ರಸ್ತೆ ಸುತ್ತಮುತ್ತ ಲಿನ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿಯ ಜತೆಗೆ ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದೆ. ಸ್ವಚ್ಛ ನಗರಿ ಬಿರುದು ಪಡೆದಿರುವ ಮೈಸೂರು ನಗರ ವನ್ನು ಮಾತ್ರ ಸ್ವಚ್ಛವಾಗಿಟ್ಟುಕೊಂಡು ಹೊರವಲ ಯವವನ್ನು ನಿರ್ಲಕ್ಷಿಸಿದೆ ಎಂದು ಹೊಸ…
ಇಂದು ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣದ ನೂತನ ಕಟ್ಟಡಗಳ ಉದ್ಘಾಟನೆ
March 2, 2019ಮೈಸೂರು: ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಂಜನಗೂಡು ತಾಲೂಕಿನ ಮುಳ್ಳೂರಿನಲ್ಲಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲಾ ಸಂಕೀರ್ಣದ ನೂತನ ಕಟ್ಟಡಗಳ ಹಾಗೂ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಸೇರಿದ ವಿವಿಧ ಕಟ್ಟಡಗಳ ಉದ್ಘಾಟನಾ ಸಮಾರಂಭವು ಮಾ.2ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸುವರು, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟಡಗಳ…
ಮಹಾ ಶಿವರಾತ್ರಿ ಹಿನ್ನೆಲೆ, ಪೊಲೀಸ್ ಆಯುಕ್ತರಿಂದ ಸಲಹೆ-ಸೂಚನೆ
March 2, 2019ಮೈಸೂರು: ಮಾ.4ರಂದು ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಮಹಾ ಶಿವರಾತ್ರಿ ಸಂದರ್ಭದಲ್ಲಿ ಕೆಲವು ಯುವಕರು ಅನಾವಶ್ಯಕವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ತಿರುಗಾಡುತ್ತಾ, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಹೆಂಗಸರು, ಮಕ್ಕಳು, ವೃದ್ಧರನ್ನು ಕೀಟಲೆ ಮಾಡುವುದು, ಸಾರ್ವಜನಿಕರ ಶಾಂತಿ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವವರ ಹಾಗೂ ಕಾನೂನು ಬಾಹಿರ ಕಾರ್ಯಗಳಲ್ಲಿ ತೊಡಗುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರಾತ್ರಿ ಜಾಗರಣೆ ಸಮಯದಲ್ಲಿ ಮನೆಗಳ ಮುಂದೆ ಹೂ…
ಪಾಕ್ ವಶದಲ್ಲಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್‍ಇಂದು ಬಿಡುಗಡೆ
March 1, 2019ನವದೆಹಲಿ: ಪಾಕಿಸ್ತಾನ ವಶದಲ್ಲಿರುವ ಭಾರತದ ಮಿಗ್-21 ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ನಾಳೆ (ಮಾ.1) ಬಿಡುಗಡೆಯಾಗಿ, ಭಾರತಕ್ಕೆ ಮರಳಲಿದ್ದಾರೆ. ಈ ಮೂಲಕ ಭಾರತ ಅತೀ ದೊಡ್ಡ ರಾಜತಾಂತ್ರಿಕ ಗೆಲುವು ಸಾಧಿಸಿದೆ. ಇಂದು ಮಧ್ಯಾಹ್ನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಅಲ್ಲಿನ ಸಂಸತ್‍ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಿಡುಗಡೆ ಘೋಷಿಸಿದರು. `ನಿನ್ನೆ ನಡೆದ ಘಟನೆಯಲ್ಲಿ ಭಾರತದ ಯುದ್ಧ ವಿಮಾನ ಮಿಗ್-21 ಪತನಗೊಂಡಿದ್ದು, ಅದರ ಪೈಲಟ್ ಸೆರೆ ಹಿಡಿದಿದ್ದೇವೆ. ಶಾಂತಿ ಸಂದೇಶದ ರೂಪದಲ್ಲಿ ಅವರನ್ನು…










