ನವದೆಹಲಿ: ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತ ಮಾನ್ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಿಗ್ಗೆ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ವಾಯುಪಡೆ ಅಧಿಕಾರಿಗಳ ಸಮ್ಮುಖದಲ್ಲೇ ಅಭಿನಂದನ್ ಜೊತೆ ಮಾತನಾಡಿದ ಸಚಿವೆ, ಅಭಿ ನಂದನ್ ಪಾಕ್ ಸೇನೆಯ ವಶದಲ್ಲಿದ್ದಾಗ ಏನಾಯಿತು ಎಂಬುದರ ಬಗ್ಗೆ ವಿಚಾರಿಸಿದರು. ಪಾಕಿಸ್ತಾನದಲ್ಲಿ ನಿಮ್ಮನ್ನು ಹೇಗೆ ನಡೆಸಿಕೊಳ್ಳಲಾಯಿತು. ಅಲ್ಲಿನ ಪರಿಸ್ಥಿತಿ ಹೇಗಿದೆ? ಎಂಬ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಈ ವೇಳೆ…
ಮುಡಾದಿಂದ 2.6 ಕೋಟಿ ಉಳಿತಾಯ ಬಜೆಟ್
March 3, 2019ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು 2019-20ನೇ ಸಾಲಿಗೆ 2.6 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದೆ. ಪ್ರಸಕ್ತ ಸಾಲಿನಲ್ಲಿ 40, 587 ಲಕ್ಷ ರೂ ಆದಾಯ ನಿರೀಕ್ಷಿಸಿ, 40,320.97 ಲಕ್ಷ ರೂ. ಗಳ ವೆಚ್ಚ ಭರಿಸಲು ಉದ್ದೇಶಿಸಿರುವ ಪ್ರಾಧಿ ಕಾರವು 266.03 ಲಕ್ಷ ರೂ.ಗಳ ಉಳಿ ತಾಯದ ಆಯ-ವ್ಯಯವನ್ನು ಮಂಡಿಸಿದೆ. ಮುಡಾ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಆಯುಕ್ತ ಪಿ.ಎಸ್. ಕಾಂತರಾಜು ಅವರು 2019-20ನೇ ಸಾಲಿನ ಆಯ-ವ್ಯಯವನ್ನು…
40 ಲಕ್ಷ ವೆಚ್ಚದಲ್ಲಿ ಚರಂಡಿ ಕಾಮಗಾರಿಗೆ ಮೇಯರ್ ಚಾಲನೆ
March 3, 2019ಮೈಸೂರು: ಮೈಸೂ ರಿನ 44ನೇ ವಾರ್ಡ್ ವ್ಯಾಪ್ತಿಯ ಜನತಾ ನಗರದ 9 ಮತ್ತು 10ನೇ ಕ್ರಾಸ್‍ನಲ್ಲಿ 40 ಲಕ್ಷ ರೂ.ವೆಚ್ಚದ ಚರಂಡಿ ಕಾಮ ಗಾರಿಗೆ ಮೇಯರ್ ಪುಷ್ಪಲತಾ ಜಗ ನ್ನಾಥ್ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಈ ಭಾಗದಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡ ಬೇಕಾಗಿದೆ. ಪಾಲಿಕೆಯಿಂದ ಈ ಭಾಗದ ಅಭಿವೃದ್ಧಿಗೆ ಬೇಕಾದ ಸಹಕಾರ ನೀಡಿದ್ದು, ಹೆಚ್ಚಿನ ಅನುದಾನಕ್ಕಾಗಿ ನೀಡಿರುವ ಬೇಡಿಕೆ ಕುರಿತು ಸದ್ಯದಲ್ಲಿಯೇ ತಿರ್ಮಾ ನಿಸಲಾಗುವುದು. ಇಲ್ಲಿರುವ ನೀರಿನ ಸಮಸ್ಯೆಯನ್ನು…
ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು
March 3, 2019ಮೈಸೂರು: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಸಾವನ್ನಪ್ಪಿದ ಘಟನೆ ಮೈಸೂರಿನ ಬಂಡಿ ಪಾಳ್ಯ ಎಪಿಎಂಸಿ ಬಳಿ ರಿಂಗ್ ರಸ್ತೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ತಿ.ನರಸೀಪುರ ತಾಲೂಕು, ಉಕ್ಕಲಗೆರೆ ನಿವಾಸಿ ಎಂ.ನಾಗೇಂದ್ರಮೂರ್ತಿ ಅವರ ಮಗ ಮಹೇಂದ್ರ(20) ಸಾವನ್ನ ಪ್ಪಿದ ಯುವಕ. ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಆತ ಹೀರೋ ಹೋಂಡಾ ಪ್ಯಾಷನ್ ಪ್ರೋ (ಕೆಎ09, ಹೆಚ್‍ಜೆ 1895) ಬೈಕ್‍ನಲ್ಲಿ ಬರುತ್ತಿದ್ದಾಗ ಮೈಸೂರಿನ ಬಂಡೀಪಾಳ್ಯ ಎಪಿಎಂಸಿ ಸಮೀಪ ರಿಂಗ್ ರಸ್ತೆಯಲ್ಲಿ ಮುಂಜಾನೆ ಸುಮಾರು 4 ಗಂಟೆ ವೇಳೆ…
ಭಾರತಕ್ಕೆ ‘ಅಭಿನಂದನ’
March 2, 2019ಶುಕ್ರವಾರ ರಾತ್ರಿ 9.30ಕ್ಕೆ ವಾಘಾ ಗಡಿ ಮೂಲಕ ತಾಯ್ನಾಡಿಗೆ ಮರಳಿದ ವೀರ ಸೇನಾನಿ ನವದೆಹಲಿ: ಕಳೆದ 2 ದಿನಗಳಿಂದ ಪಾಕ್ ಸೇನೆ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಇಂದು ರಾತ್ರಿ ವಾಘಾ ಹಾಗೂ ಅಟಾರಿ ಗಡಿ ಮೂಲಕ ಭಾರತ ಪ್ರವೇಶಿಸಿದರು. ರಾತ್ರಿ 9.20ರ ವೇಳೆಗೆ ಇಬ್ಬರು ಪಾಕ್ ಸೈನಿ ಕರು ಬಂದೂಕುಗಳನ್ನು ಕೆಳಮುಖವಾಗಿರಿಸಿ ಕೊಂಡು ವಾಘಾ ಗಡಿಯ ಪಾಕ್ ಪ್ರದೇಶದಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬರುತ್ತಿದ್ದಂತೆಯೇ ಅವರ ಹಿಂದೆ ಓರ್ವ…
ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ವಿಳಂಬ ನಾನಾ ಊಹಾಪೋಹ, ಹೆಚ್ಚಿದ್ದ ಆತಂಕ…
March 2, 2019ನವದೆಹಲಿ: ಎರಡು ದಿನಗಳ ಕಾಲ ಪಾಕ್ ಸೇನಾ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಬಿಡುಗಡೆಯಾಗಿ ಬರುತ್ತಾರೆ ಎಂಬ ಸಂಭ್ರಮ ಇಂದು ಬೆಳಿಗ್ಗೆಯಿಂದಲೇ ದೇಶದೆಲ್ಲೆಡೆ ಮನೆ ಮಾಡಿತ್ತು. ದೇಶದ ಜನತೆ ಅವರ ಆಗಮನವನ್ನು ಕಾತುರದಿಂದ ಎದುರು ನೋಡುತ್ತಿದ್ದರು. ಆದರೆ ಅಭಿನಂದನ್ ಹಸ್ತಾಂತರ ವಿಳಂಬವಾ ಗುತ್ತಿದ್ದಂತೆಯೇ ಹಲವು ಊಹಾಪೋಹಗಳು ಗರಿ ಬಿಚ್ಚಿಕೊಂಡವು. ಅಭಿನಂದನ್ ಅವರನ್ನು ಇಂದು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ನಿನ್ನೆ ಸಂಜೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಅಲ್ಲಿನ ಸಂಸತ್‍ನಲ್ಲಿ ಪ್ರಕಟಿಸಿದ್ದ…
ವಿಜಯಶ್ರೀಪುರ, ಕೆ.ಆರ್.ಮಿಲ್ ನಿವಾಸಿಗಳು, ಫಾಲ್ಕನ್ ಟೈರ್ಸ್ ಉದ್ಯೋಗಿಗಳ ಸಮಸ್ಯೆ ಪರಿಹಾರ
March 2, 2019ಮೈಸೂರು: ಮೈಸೂರಿನ ವಿಜಯಶ್ರೀಪುರ, ಕೆ.ಆರ್. ಮಿಲ್ ಕಾಲೋನಿ ನಿವಾಸಿಗಳು ಹಾಗೂ ಫಾಲ್ಕನ್ ಟೈರ್ಸ್ ಕಾರ್ಖಾನೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಸಮಾ ರಂಭದಲ್ಲಿ ಮೈಸೂರು ಜಿಲ್ಲೆಯ ಜನತೆ ಪರವಾಗಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತ ನಾಡುವ ಸಂದರ್ಭದಲ್ಲಿ ವಿಜಯಶ್ರೀಪುರ ಹಾಗೂ ಕೆ.ಆರ್.ಮಿಲ್ ಕಾಲೋನಿ ನಿವಾಸಿ ಗಳು ತಮ್ಮ ಸಮಸ್ಯೆ ಬಗ್ಗೆ ಗಮನ ಸೆಳೆ ದರು. ಇದಕ್ಕೆ ಪ್ರತಿಕ್ರಿಯಿಸಿದ…
ಮೈಸೂರು ಮೈತ್ರಿ ಅಭ್ಯರ್ಥಿ ದೇವೇಗೌಡರೋ ಇಲ್ಲ ನಿಖಿಲ್ ನಿಲ್ತಾರೋ…
March 2, 2019ಮೈಸೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್‍ಕುಮಾರ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಎಂಬುದು ಇಂದು ಮೈಸೂರಿನಲ್ಲಿ ಬಹಿರಂಗವಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸುವಾರಿ ಸಚಿವ ಜಿ.ಟಿ.ದೇವೇಗೌಡರು ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ನೀವೇ ಸ್ಪರ್ಧಿಸಬೇಕೆಂದು ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರನ್ನು ಮನವಿ ಮಾಡಿಕೊಂಡೆವು. ಅದೇನೇ ಇರಲಿ ಯಾರೇ ಅಭ್ಯರ್ಥಿಯಾದರೂ ದೇವೇಗೌಡರು ಹಾಗೂ ಕುಮಾರಸ್ವಾಮಿ…
ನಿಗದಿತ ಅವಧಿಯಲ್ಲೇ ಲೋಕಸಭಾ ಚುನಾವಣೆ
March 2, 2019ಲಖನೌ: ಭಾರತ- ಪಾಕಿಸ್ತಾನ ನಡುವಣ ಪ್ರಕ್ಷುಬ್ದ ಪರಿಸ್ಥಿತಿಯ ನಡುವೆ ನಿಗದಿತ ಅವಧಿಯಲ್ಲಿಯೇ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಹೇಳಿದ್ದಾರೆ. ಉತ್ತರ ಪ್ರದೇಶದ ಲಖನೌದಲ್ಲಿ ಕಳೆದೆರಡು ದಿನಗಳಿಂದ ಚುನಾವಣೆ ಪೂರ್ವ ಸಿದ್ಧತೆ ಪರಿಶೀಲನೆಯಲ್ಲಿ ತೊಡಗಿರುವ ಸುನೀಲ್ ಅರೋರ, ಪಾಕಿಸ್ತಾನ ಹಾಗೂ ಪರಿಸ್ಥಿತಿ ಬಿಗಡಾಯಿಸಿದ್ದರೂ ನಿಗದಿತ ಅವಧಿಯಲ್ಲಿಯೇ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು. ಚುನಾವಣಾ ಆಯೋಗದ ಹೊಸ ಅಧಿಸೂಚನೆ ಪ್ರಕಾರ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ದೇಶದಲ್ಲಿ ಮಾತ್ರವಲ್ಲದೇ, ವಿದೇಶದಲ್ಲಿ ಇರುವ ಆಸ್ತಿಪಾಸ್ತಿಗಳ…
ನಿಷ್ಪಕ್ಷಪಾತ ವರದಿ ಮಾಡಿ: ಪತ್ರಕರ್ತರಿಗೆ ಸಿಎಂ ಸಲಹೆ
March 2, 2019ಸುತ್ತೂರು: ಸರ್ಕಾರದ ಆಡಳಿತ ವೈಖರಿ, ನೀತಿ-ನಿರೂಪಣೆ ಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪತ್ರ ಕರ್ತರು ನಿಷ್ಪಕ್ಷಪಾತವಾಗಿ ಕೆಲಸ ಮಾಡ ಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಸಲಹೆ ನೀಡಿದ್ದಾರೆ. ಮೈಸೂರು ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಇಂದು ಆರಂಭವಾದ ಎರಡು ದಿನಗಳ ಪತ್ರಕರ್ತರ 34ನೇ ರಾಜ್ಯ ಸಮ್ಮೇ ಳನದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಮಾಧ್ಯಮಗಳು ಅತ್ಯಂತ ಜವಾ ಬ್ದಾರಿಯುತವಾಗಿ ಕಾರ್ಯ ನಿರ್ವಹಿ ಸುವ ಮೂಲಕ ಸರ್ಕಾರ ಹಮ್ಮಿ ಕೊಳ್ಳುವ ಜನಪರ ಕೆಲಸಗಳನ್ನು ನಾಡಿನ ಕಟ್ಟ ಕಡೆಯ ವ್ಯಕ್ತಿಗೆ…










