ಅಪರಿಚಿತ ವಾಹನ ಡಿಕ್ಕಿ;  ಬೈಕ್ ಸವಾರ ಸಾವು
ಮೈಸೂರು

ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

March 3, 2019

ಮೈಸೂರು: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಸಾವನ್ನಪ್ಪಿದ ಘಟನೆ ಮೈಸೂರಿನ ಬಂಡಿ ಪಾಳ್ಯ ಎಪಿಎಂಸಿ ಬಳಿ ರಿಂಗ್ ರಸ್ತೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ತಿ.ನರಸೀಪುರ ತಾಲೂಕು, ಉಕ್ಕಲಗೆರೆ ನಿವಾಸಿ ಎಂ.ನಾಗೇಂದ್ರಮೂರ್ತಿ ಅವರ ಮಗ ಮಹೇಂದ್ರ(20) ಸಾವನ್ನ ಪ್ಪಿದ ಯುವಕ.

ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಆತ ಹೀರೋ ಹೋಂಡಾ ಪ್ಯಾಷನ್ ಪ್ರೋ (ಕೆಎ09, ಹೆಚ್‍ಜೆ 1895) ಬೈಕ್‍ನಲ್ಲಿ ಬರುತ್ತಿದ್ದಾಗ ಮೈಸೂರಿನ ಬಂಡೀಪಾಳ್ಯ ಎಪಿಎಂಸಿ ಸಮೀಪ ರಿಂಗ್ ರಸ್ತೆಯಲ್ಲಿ ಮುಂಜಾನೆ ಸುಮಾರು 4 ಗಂಟೆ ವೇಳೆ ಅಪರಿಚಿತ ವಾಹನ ವೊಂದು ಡಿಕ್ಕಿ ಹೊಡೆದು, ಪರಾರಿಯಾಗಿದೆ. ತೀವ್ರ ಗಾಯಗಳಾಗಿ ಒದ್ದಾಡುತ್ತಿದ್ದ ಮಹೇಂದ್ರರನ್ನು ಸಾರ್ವಜನಿಕರು ಕೆ.ಆರ್.ಆಸ್ಪತ್ರೆಗೆ ಕರೆದೊಯ್ದರಾದರೂ, ಆತ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Translate »