ಕರ್ನಾಟಕ, ಕೇರಳ ವಾಕ್-ಶ್ರವಣ ಸಂಸ್ಥೆಗಳ 300 ವಿದ್ಯಾರ್ಥಿಗಳು ಭಾಗಿ
ಮೈಸೂರು

ಕರ್ನಾಟಕ, ಕೇರಳ ವಾಕ್-ಶ್ರವಣ ಸಂಸ್ಥೆಗಳ 300 ವಿದ್ಯಾರ್ಥಿಗಳು ಭಾಗಿ

March 2, 2019

ಮೈಸೂರು: ಜೆಎಸ್‍ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ `ಸಂವೇದನಾ ಸಾಮಥ್ರ್ಯ, ಕೇಳುವಿಕೆ ಮತ್ತು ಮಾತು-ಭಾಷೆಯ ಪ್ರಕ್ರಿಯೆ’ ವಿಷಯ ಕುರಿತ ಎರಡು ದಿನದ ರಾಷ್ಟ್ರೀಯ ಸಮ್ಮೇಳನಕ್ಕೆ ಶುಕ್ರ ವಾರ ಮೈಸೂರಿನ ರಾಜೇಂದ್ರ ಭವನದಲ್ಲಿ ಚಾಲನೆ ದೊರೆಯಿತು. ಮೈಸೂರು ಜೆಎಸ್‍ಎಸ್ ವಾಕ್-ಶ್ರವಣ ಸಂಸ್ಥೆ, ಧಾರವಾಡ ಜೆಎಸ್‍ಎಸ್ ವಾಕ್-ಶ್ರವಣ ಸಂಸ್ಥೆ, ಕೇರಳದ ಐಕಾನ್ ಮತ್ತು ಅಮೃತ ವಾಕ್-ಶ್ರವಣ ಸಂಸ್ಥೆಗಳ ಒಟ್ಟು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಮೆದುಳಿನ ಕ್ರಿಯೆಯು ಮಾತು, ಭಾಷೆ ಹಾಗೂ ಕೇಳು ವಿಕೆಯ ಪ್ರಕ್ರಿಯೆಗಳ ಮೇಲೆ, ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಹಾಗೆಯೇ ಮಾತು, ಭಾಷೆ ಮತ್ತು ಶ್ರವಣ ದೋಷವುಳ್ಳ ವ್ಯಕ್ತಿಗಳಿಗೆ ಮೆದುಳಿನ ಅರಿವಿನ ಶಕ್ತಿಯ ಆಧಾರಿತ ಪರೀಕ್ಷೆಗಳು ಹಾಗೂ ಪುನರ್ವಸತಿಗಳ ಪ್ರಾಮುಖ್ಯತೆಗಳ ಕುರಿತು ಸಮ್ಮೇಳನದಲ್ಲಿ ಮಾಹಿತಿ ನೀಡಲಾಯಿತು.

ಸಮ್ಮೇಳನಕ್ಕೆ ಜೆಎಸ್‍ಎಸ್ ವೈದ್ಯಕೀಯ ಮಹಾ ವಿದ್ಯಾಲಯದ ನರಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ.ಎಸ್.ಹರ್ಷಾ ಸಮ್ಮೇಳನಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ, ಶುಭ ಕೋರಿದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಶ್ರವಣ ಶಾಸ್ತ್ರದ ಪ್ರಾಧ್ಯಾಪಕರಾದ ಡಾ.ಆಶಾ ಯತಿರಾಜ್ ಅವರು, ಕೇಳುವಿಕೆ ಮತ್ತು ಕೇಳುವಿಕೆಯ ಸಮಸ್ಯೆಗಳಿಗೂ ಇರುವ ಸಂವೇದನಾ ಸಾಮಥ್ರ್ಯ, ಶ್ರವಣೇಂದ್ರಿಯ ಪ್ರಕ್ರಿಯೆ ಮತ್ತು ಸಂವೇದನೆ ಇನ್ನಿತರ ವಿಚಾರಗಳ ಕುರಿತು ಉಪನ್ಯಾಸ ನೀಡಿದರು. ಜೆಎಸ್‍ಎಸ್ ವೈದ್ಯಕೀಯ ಸಂಸ್ಥೆಗಳ ವಿಭಾ ಗದ ನಿರ್ದೇಶಕ ಆರ್.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ನಟರಾಜ್, ಪ್ರಾಂಶುಪಾಲರಾದ ಸುಮಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Translate »