ಪ್ರಜಾತಂತ್ರ ಉಳಿಸುವ ಮಾಧ್ಯಮ
ಮೈಸೂರು

ಪ್ರಜಾತಂತ್ರ ಉಳಿಸುವ ಮಾಧ್ಯಮ

March 2, 2019

ಸುತ್ತೂರು: ಪ್ರಜಾ ತಂತ್ರವನ್ನು ಉಳಿಸುವ ಸಾಮಥ್ರ್ಯ ಮಾಧ್ಯಮ ರಂಗದ ಕೈಯ್ಯಲ್ಲಿದೆ ಎಂದು ಶಾಸಕ ಎ.ಹೆಚ್. ವಿಶ್ವನಾಥ್ ಅವರು ಇಂದಿಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆರಂಭವಾದ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನದ ಅಂಗವಾಗಿ ನಡೆದ ಗೋಷ್ಠಿ ಯಲ್ಲಿ ಪಾಲ್ಗೊಂಡು `ಮಾಧ್ಯಮ ಮತ್ತು ರಾಜಕಾರಣ’ ವಿಷಯ ಕುರಿತು ಮಾತ ನಾಡುತ್ತಿದ್ದ ಅವರು, ಈಗ ಮಾಧ್ಯಮ ವನ್ನು ಸಂಶಯದಿಂದ ನೋಡುವಂತಾ ಗಿದೆ. ಹಿಂದೆ ಹಿರಿಯರು ಪತ್ರಿಕಾ ಧರ್ಮ ಕಾಪಾಡುತ್ತಿದ್ದರು. ರಾಜಕಾರಣಿಗಳು ಮತ್ತು ಪತ್ರಿಕಾ ಮಾಧ್ಯಮ ಧರ್ಮ ಪರಿ ಪಾಲನೆಯನ್ನು ಮರೆತಿರುವುದು ವಿಷಾದನೀಯ ಎಂದರು.

ಪ್ರಜಾತಂತ್ರವನ್ನು ಉಳಿಸಬೇಕಾದ ಮಾಧ್ಯಮ ರಂಗ ಮೌಲ್ಯ, ಬದ್ಧತೆ ಮರೆತು ಯಾವುದೋ ಪಕ್ಷದ ಪ್ರತಿನಿಧಿಗಳಂತೆ ಕೆಲಸ ಮಾಡಿದರೆ, ಸ್ವಾಸ್ಥ್ಯ ನಿರೀಕ್ಷಿಸು ವುದಾದರೂ ಯಾರಿಂದ ಎಂದ ಅವರು, ಇಂದು ಪತ್ರಿಕೋದ್ಯಮ ಬಡತನದ ವೃತ್ತಿಯಾಗಿ ಉಳಿದಿಲ್ಲ ಎಂದರು.

ಎಲೆಕ್ಟ್ರಾನಿಕ್ ಮಾಧ್ಯಮದ ಆ್ಯಂಕರ್ ಗಳು ಯಾವುದೇ ವಿಷಯಗಳನ್ನು ತಾತ್ವಿಕ ಹಂತಕ್ಕೆ ಕೊಂಡೊಯ್ಯುವುದೇ ಇಲ್ಲ. ಕೆಲವೊಮ್ಮೆ ನಗೆಪಾಟಲಿಗೀಡಾಗುವುದೂ ಇದೆ ಎಂದ ವಿಶ್ವನಾಥ್, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸದೃಢ ಗೊಳಿಸುವ ಅತಿರಥ ಜವಾ ಬ್ದಾರಿ ನಿಮ್ಮ ಮೇಲಿದೆ ಎಂದರು.

ಶಾಸಕ ಜೆ..ಸಿ.ಮಾಧು ಸ್ವಾಮಿ ಅವರು ಮಾತ ನಾಡಿ, ತಪ್ಪು ಮಾಹಿತಿ ನೀಡುವುದರಿಂದ 4ನೇ ಎಸ್ಟೇಟ್ ಎಂದು ಕರೆಯುವ ಪತ್ರಿಕಾ ರಂಗದ ಗೌರವ ಕಡಿಮೆಯಾಗುತ್ತಿದೆ. ಟೀಕೆ ಮಾಡುವುದೇ ಮಾಧ್ಯಮದ ಕೆಲಸವಲ್ಲ. ಎಕ್ಸ್‍ಪಟ್ರ್ಸ್ ವಿತೌಟ್ ಎಕ್ಸ್‍ಪೀರಿಯನ್ಸ್ ವ್ಯಕ್ತಿಗಳಿಂದ ಇಂತಹ ಅವಘಡಗಳು ನಡೆಯುತ್ತಿವೆ ಎಂದರು.
ಮಾಧ್ಯಮ `ಮಿಷನ್’ ಆಗಬೇಕೇ ಹೊರತು `ಕಮರ್ಷಿಯಲ್’ ಆಗಬಾರದು. ನಿಮ್ಮ ಸುದ್ದಿಯಿಂದ ರಾಜಕಾರಣಿಗಳನ್ನು ರೂಪಿಸ ಬೇಕೇ ಹೊರತು, ತೇಜೋವಧೆ ಮಾಡು ವುದೇ ಗುರಿಯಾಗಬಾರದು ಎಂದ ಅವರು, ಜಾಹೀರಾತಿನ ಹಂಗಿಗಾಗಿ ನಿಷ್ಠೆ ಮರೆಯ ಬೇಡಿ ಎಂದು ಸಲಹೆ ನೀಡಿದರು.

ಜೆಡಿಎಸ್ ವಕ್ತಾರ ರಮೇಶ್ ಬಾಬು ಅವರು ಮಾತನಾಡಿ, ತತ್ ಕ್ಷಣದ ಸುದ್ದಿ ಗಾಗಿ ಬದ್ಧತೆ, ಜವಾಬ್ದಾರಿ ಮರೆಯ ಬಾರದು. ಸತ್ಯಾಸತ್ಯತೆ ಪರಿಶೀಲಿಸಿ ನೈಜ ಚಿತ್ರಣ ನೀಡುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿ ಎಂದು ಪತ್ರ ಕರ್ತರಿಗೆ ಕಿವಿಮಾತು ಹೇಳಿದರು.

Translate »