ಮೈಸೂರು: ಮೈಸೂರು ಸಿಸಿಬಿ ಪೊಲೀಸರು ನರಸಿಂಹರಾಜ ಠಾಣೆ ವ್ಯಾಪ್ತಿ ಯಲ್ಲಿ ವೇಶ್ಯಾವಾಣಿಕೆ ನಡೆಸುತ್ತಿದ್ದ ಆರೋಪದ ಮೇಲೆ ಎನ್.ಆರ್.ಮೊಹಲ್ಲಾದ ಶ್ರೀಲತಾ ಅಲಿಯಾಸ್ ಶಕೀಲ ಎಂಬ ಮಹಿಳೆಯನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಎನ್.ಆರ್.ಮೊಹಲ್ಲಾ ಶಿವಾಜಿ ರಸ್ತೆ 2ನೇ ಕ್ರಾಸ್, ರಜಪೂತ್ ಬ್ಲಾಕ್‍ನ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, 2600 ರೂ. ನಗದು, ಒಂದು ಮೊಬೈಲ್ ಅಮಾನತು ಪಡಿಸಿಕೊಂಡು ಮಹಿಳೆಯನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೆ ಮೈಸೂರಿನ ವಿಜಯನಗರ, ವಿ.ವಿ. ಪುರಂ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿ ಗಳಲ್ಲಿ ಮಸಾಜ್ ಸ್ಪಾಗಳು ಮತ್ತು ಅನುಮಾನಾಸ್ಪದ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ. ಸಿಸಿಬಿಯ ಎಸಿಪಿ ವಿ.ಮರಿಯಪ್ಪ ನೇತೃತ್ವದಲ್ಲಿ ಸಿಸಿಬಿ ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಸಿ.ಕಿರಣ್ ಕುಮಾರ್, ಮಲ್ಲೇಶ್, ರಾಜಶೇಖರ್, ಎಎಸ್‍ಐ ಅಲೆಕ್ಸಾಂಡರ್, ಚಂದ್ರೇಗೌಡ, ಸಿಬ್ಬಂದಿಗಳಾದ ರಾಜೇಂದ್ರ, ಎಂ.ಆರ್.ಗಣೇಶ್, ನಿರಂಜನ್, ಮುರಳಿ, ಚಾಮುಂಡಮ್ಮ, ವೀಣಾ, ಪುಷ್ಪಲತಾ, ಗೌತಮ್, ಶಿವಕುಮಾರ್ ಅವರುಗಳು ದಾಳಿ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.