ಮೈಸೂರು: ಪ್ರಸ್ತುತ ರಾಜಕಾರಣ ಜಾದುವಿನಂತಾಗಿದ್ದು, ಪ್ರಧಾನಿ ಮೋದಿ ಒಬ್ಬ ಜಾದೂಗಾರರಂತೆ ದೇಶದ ಜನರನ್ನು ಮೋಡಿ ಮಾಡಿ ದಿಕ್ಕು ತಪ್ಪಿಸುತ್ತಿ ದ್ದಾರೆ ಎಂದು ಸಾಹಿತಿ ದೇವನೂರ ಮಹದೇವ ಕಿಡಿಕಾರಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಎಐಡಿವೈಒ ಸಂಘಟನೆಯಿಂದ ಫೆ.27ರ `ನಿರುದ್ಯೋಗದ ವಿರುದ್ಧ ಪಾರ್ಲಿಮೆಂಟ್ ಚಲೋ’ ಅಂಗ ವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಜನ ಸಮಾವೇಶದಲ್ಲಿ ಮಾತನಾಡಿದ ಅವರು, ಜಾದು ಸಮ್ಮೋಹನ ವಿದ್ಯೆ. ಕೆಲ ಜಾದೂ ಗಾರರು ವಿಮಾನವನ್ನು ಮಾಯ ಮಾಡ್ತಾ ರಂತೆ. ಖಾಲಿ ಪಾತ್ರೆಗೆ ಕೈಯಾಡಿಸಿ…
ಪ್ರಸ್ತುತ ದಿನಗಳಲ್ಲಿ ಜನ ಆಯುರ್ವೇದ ಔಷಧಿ ಹೆಚ್ಚಾಗಿ ಬಳಸಲಾರಂಭಿಸಿದ್ದಾರೆ
February 16, 2019ಮೈಸೂರು: ಪ್ರಸ್ತುತ ದಿನಗಳಲ್ಲಿ ಬಹುತೇಕ ಜನರು ಆಯುರ್ವೇದ ಔಷಧಿಯನ್ನು ಬಳಸು ತ್ತಿದ್ದಾರೆ ಎಂದು `ಸ್ಟಾರ್ ಆಫ್ ಮೈಸೂರ್’ ಹಾಗೂ `ಮೈಸೂರು ಮಿತ್ರ’ ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ ಅಭಿಪ್ರಾಯಪಟ್ಟರು. ಶುಕ್ರವಾರ ಆಲನಹಳ್ಳಿಯಲ್ಲಿರುವ ಜೆಎಸ್‍ಎಸ್ ಆಯು ರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವಾರ್ಷಿಕೋ ತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ, 1999ರಲ್ಲಿ ಬೆಂಗಳೂರಿನ ಹಿಮಾಲಯ ಫಾರ್ಮಸ್ಯೂಟಿಕಲ್‍ನ ನಿರ್ದೇಶಕರೊಬ್ಬರು ಸಭೆಯಲ್ಲಿ ಇನ್ನು 20ವರ್ಷಗಳಲ್ಲಿ ಜನರು ಆಯುರ್ವೇದ ಔಷಧಿಗೆ ಮರಳುತ್ತಾರೆ ಎಂದು ಹೇಳಿದ್ದರು. ಅದರಂತೆ ಇಂದು ಬಹುತೇಕ ಜನರು ಆಯುರ್ವೇದ ಔಷಧಿಯನ್ನೇ ಬಳಸುತ್ತಿದ್ದಾರೆ ಎಂದರು….
ಇಬ್ಬರು ಖದೀಮರ ಬಂಧನ: ಲಕ್ಷಾಂತರ ರೂ. ಮೌಲ್ಯದ ಪದಾರ್ಥ ವಶ
February 16, 2019ಮೈಸೂರು: ಕಳವು ಮಾಡಿದ್ದ ಮೊಬೈಲ್‍ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಕಳ್ಳರನ್ನು ವಿವಿಪುರಂ ಪೊಲೀಸರು ಬಂಧಿಸಿ, 2.50 ಲಕ್ಷ ರೂ. ಮೌಲ್ಯದ 25 ಗ್ರಾಂ ಸರ, ಸ್ಕೂಟರ್ ಮತ್ತು 2 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ಬಿ.ಎಂ.ಶ್ರೀನಗರ ನಿವಾಸಿ ಮುರುಳಿ(24), ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮೊಗರಹಳ್ಳಿ ಮಂಟಿ ನಿವಾಸಿ ವಿನಯ್ ಕುಮಾರ್(24) ಬಂಧಿತರು. ಮೈಸೂರು ವಿವಿ ಮೊಹಲ್ಲಾ ಕಾಳಿದಾಸ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಕಳವು ಮಾಡಿದ್ದ ಮೊಬೈಲ್‍ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ…
ಬಿ.ವಿ.ಮಂಜುನಾಥ್ ಬೆಂಬಲಕ್ಕೆ ಮನವಿ
February 16, 2019ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಬಿ.ವಿ.ಮಂಜುನಾಥ್ ಅವರನ್ನು ಬೆಂಬಲಿಸಲು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಬಿ.ಆರ್. ನಟರಾಜ್ ಜೋಯಿಸ್ ಮನವಿ ಮಾಡಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಿಂತ ನೀರಾಗಿದೆ. ಇದಕ್ಕೆ ಪುನಶ್ಚೇತನ ನೀಡಲು ಬಿ.ವಿ.ಮಂಜುನಾಥ್ ಸಮರ್ಥ ಅಭ್ಯರ್ಥಿ ಯಾಗಿದ್ದಾರೆ. ಹಿಂದಿನ ಆಡಳಿತ ಮಂಡಳಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಆದ್ದರಿಂದ ಬದಲಾವಣೆ ಅವಶ್ಯವಾಗಿದೆ. ಸ್ಥಳೀಯರಾದ ಮಂಜುನಾಥ್ ಅವರು ಸಮಾಜ ಸೇವೆಯೊಂದಿಗೆ ಸಂಘದಲ್ಲೂ ಗುರುತಿಸಿಕೊಂಡಿರುವ…
ಇಂದು, ನಾಳೆ ಕೆಲವೆಡೆ ನೀರು ಸರಬರಾಜಲ್ಲಿ ವ್ಯತ್ಯಯ
February 16, 2019ಮೈಸೂರು: ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ ಬೆಳಗೊಳ ಯಂತ್ರಾಗಾರ ಹಾಗೂ ಬೂಸ್ಟರ್ ಯಂತ್ರಾಗಾರದಲ್ಲಿ ತುರ್ತು ಕಾರ್ಯ ನಿರ್ವಹಣೆಯ ಸಲುವಾಗಿ ಫೆ.16ರಂದು ಜನತಾನಗರ, ಕೆ.ಹೆಚ್.ಬಿ. ಕಾಲೋನಿ, ಹೂಟಗಳ್ಳಿ, ವಿಜಯನಗರ 2ನೇ ಹಂತ, ಫೆ.17ರಂದು ವಾರ್ಡ್ ನಂ. 1ರಿಂದ 6, ವಾರ್ಡ್ ನಂ. 20, 23, 38, ವಾರ್ಡ್ ನಂ.42ರಿಂದ 45, ವಾರ್ಡ್ ನಂ. 47ಕ್ಕೆ ಸಂಬಂಧಿಸಿದ ಪ್ರದೇಶಗಳಾದ ಹೆಬ್ಬಾಳ, ಕುಂಬಾರ ಕೊಪ್ಪಲು, ಮಂಚೇಗೌಡನಕೊಪ್ಪಲು, ಕೆ.ಜಿ.ಕೊಪ್ಪಲು, ಲೋಕನಾಯಕನಗರ, ಬೃಂದಾವನ ಬಡಾವಣೆ, ಒಂಟಿಕೊಪ್ಪಲು, ಪಡುವಾರಹಳ್ಳಿ, ವಿನಾಯಕನಗರ, ಮಂಡಿ ಮೊಹಲ್ಲಾ,…
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕೆ.ಮರೀಗೌಡರ ಕಣಕ್ಕಿಳಿಸಲು ಒತ್ತಾಯ
February 16, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡರನ್ನು ಕಣಕ್ಕಿಳಿಸುವಂತೆ ಕೆ.ಮರಿಗೌಡ ಅಭಿ ಮಾನಿಗಳ ಬಳಗದ ಮುಖಂಡ, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮೆಲ್ಲಹಳ್ಳಿ ಮಹದೇವಸ್ವಾಮಿ ಒತ್ತಾ ಯಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷದಿಂದ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಕೆ.ಮರೀಗೌಡ ಅವರು ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ರಾಗಿರುವ ಮರೀಗೌಡರು ಈ ಹಿಂದೆ ಜಿ.ಪಂ…
ಜಮೀನು ಮಂಜೂರಾತಿಗೆ ಆಗ್ರಹಿಸಿ ರಾಷ್ಟ್ರಕ್ರಾಂತಿ ಸೇವಾ ದಳ ಪ್ರತಿಭಟನೆ
February 16, 2019ಮೈಸೂರು: ರಾಷ್ಟ್ರಕ್ರಾಂತಿ ಫೌಂಡೇಷನ್ ಸಂಸ್ಥೆಗೆ ನಾಡನಹಳ್ಳಿ ಸರ್ವೆ ನಂಬರ್ 131ರಲ್ಲಿ 2 ಎಕರೆ ಜಮೀನನ್ನು ಮಂಜೂರು ಮಾಡುವಂತೆ ಆಗ್ರಹಿಸಿ ರಾಷ್ಟ್ರಕ್ರಾಂತಿ ಸೇವಾ ದಳದ ಕಾರ್ಯಕರ್ತರು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈಗಾಗಲೇ ಸದರಿ ಜಮೀನಿನಲ್ಲಿ ಫೌಂಡೇ ಷನ್ ಕಚೇರಿ ಸ್ಥಾಪಿಸಲಾಗಿದೆ. ಈ ವಿಳಾಸದಲ್ಲಿ ಆಧಾರ್ ಸಂಖ್ಯೆ ಹೊಂದಿ ರುವುದೇ ಇದಕ್ಕೆ ಸಾಕ್ಷಿಯಾಗಿದೆ. ಆ ಬಗ್ಗೆ 2013-14ರಿಂದ ಈವರೆಗೆ ಸರ್ಕಾರ ದೊಂದಿಗೆ ಪತ್ರ ವ್ಯವಹಾರ ಮಾಡಿರುವ ಬಗ್ಗೆ ದಾಖಲೆಗಳಿರುವುದರಿಂದ ಜಮೀನನ್ನು ರಾಷ್ಟ್ರಕ್ರಾಂತಿ…
ನಾಳೆ ವಿದ್ಯುತ್ ನಿಲುಗಡೆ
February 16, 2019ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮದ ಎನ್.ಆರ್ ಮೊಹಲ್ಲಾ ವಿಭಾಗದ ವತಿ ಯಿಂದ 66/11 ಕೆವಿ ಸೌತ್ ವಿದ್ಯುತ್ ವಿತರಣಾ ಕೇಂದ್ರ ದಿಂದ ಹೊರಹೊಮ್ಮುವ 11 ಕೆ.ವಿ. ಇಂಡಸ್ಟ್ರಿಯಲ್ ಫೀಡರ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಫೆ.17ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ಇಂಡಸ್ಟ್ರಿಯಲ್ ಸಬರ್ಬ್, ವಿಶ್ವೇಶ್ವರ ನಗರ ಸುತ್ತಮುತ್ತ ಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಎನ್.ಆರ್ ಮೊಹಲ್ಲಾ ವಿಭಾಗದ ವತಿಯಿಂದ 220/66/11 ಏಗಿ ಕಡಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ…
ದಕ್ಷಿಣ ಭಾರತದ 11ನೇ ಕುಂಭಮೇಳಕ್ಕೆ ಕ್ಷಣಗಣನೆ
February 16, 2019ಡಿಸಿ, ಸೇನಾ ಮುಖ್ಯಸ್ಥರಿಂದ ಅಂತಿಮ ಸಿದ್ಧತೆ ಪರಿಶೀಲನೆ ತಿ.ನರಸೀಪುರ: ದಕ್ಷಿಣ ಭಾರತದ 11ನೇ ಕುಂಭಮೇಳಕ್ಕೆ ಕ್ಷಣಗಣನೆ ಆರಂಭ ಗೊಂಡಿದ್ದು, ಅಂತಿಮ ಗಳಿಗೆ ಸಿದ್ಧತೆಗಳು ಮುಕ್ತಾಯ ಹಂತದಲ್ಲಿವೆ. ಈಗಾಗಲೇ ಭಾರತೀಯ ಸೇನಾ ಯೋಧರು ಭಕ್ತಾದಿಗಳ ಅನುಕೂಲಕ್ಕಾಗಿ ಕಪಿಲಾ ನದಿಗೆ ಅಡ್ಡಲಾಗಿ ಆಕರ್ಷಣೀಯವಾದ ತೇಲುವ ಸೇತುವೆ ನಿರ್ಮಿಸಿದ್ದು, ಸೇನೆ ಮೇಜರ್ ಜನರಲ್ ಕೆ.ಜೆ.ಬಾಬು ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇಂದು ಸೇತುವೆ ಪರಿಶೀಲಿಸಿದರು. ಸದ್ಯ ತ್ರಿವೇಣಿ ಸಂಗಮದ ಮಧ್ಯ ಭಾಗ ದಲ್ಲಿ ವೃತ್ತಾಕಾರವಾಗಿ ನಿರ್ಮಾಣವಾಗುತ್ತಿ ರುವ ಧಾರ್ಮಿಕ ವೇದಿಕೆಯ ಕಾಮಗಾರಿಗೆ…
ರಾಸಲೀಲೆಗೆ ಪೀಡಿಸಿದ ವ್ಯಕ್ತಿಯ ಬರ್ಬರ ಹತ್ಯೆ
February 16, 2019ತಂದೆ, ಮಗಳು ಸೇರಿ ಮೂವರ ಬಂಧನ ಶನಿದೇವರೇ ಹತ್ಯೆಗೆ ಸೂಚನೆ ನೀಡಿದ್ದನಂತೆ…! ಸರಗೂರು: ನಾಲ್ಕು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಚಂಗೌಡನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಕೊಲೆಯಾಗಿದ್ದು, ಕೇವಲ ನಾಲ್ಕು ದಿನಗಳಲ್ಲೇ ಪ್ರಕರಣವನ್ನು ಪತ್ತೆ ಹಚ್ಚಿ ತಂದೆ, ಮಗಳು ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಹೆಚ್.ಡಿ.ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆಯೋರ್ವಳನ್ನು ರಾಸಲೀಲೆಗಾಗಿ ಪೀಡಿಸಿದ ಕಾರಣ ಆಕೆ ತನ್ನ ತಂದೆ ಮತ್ತು ಶನೇಶ್ವರ ದೇವಸ್ಥಾನದ ಪೂಜಾರಿ ಜೊತೆ ಸೇರಿ ಕಾಮುಕ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾಳೆ ಎಂಬುದು ಬಯಲಾಗಿದೆ. ಚಾಮರಾಜ ನಗರ ತಾಲೂಕು ಸಾಗಡೆ…










