ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಬಿ.ವಿ.ಮಂಜುನಾಥ್ ಸ್ಪರ್ಧಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಿಂತ ನೀರಾಗಿದೆ. ಇದರಿಂದ ಸಮುದಾಯದ ಜನರು ಬೇಸತ್ತಿದ್ದಾರೆ. ಸಮುದಾಯದ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಈಗಾಗಲೇ ಹಲವು ವರ್ಷ ಗಳಿಂದ ಮಹಾಸಭಾ ಕೇಂದ್ರ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದೇನೆ. ಅಲ್ಲದೆ, ಪ್ರತಿ ವರ್ಷ ಸಮುದಾಯದ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ. ವೆಚ್ಚ ಮಾಡಿ ಪಠ್ಯ ಸಾಮಗ್ರಿಗಳನ್ನು ವಿತರಿಸುತ್ತಾ…
ಅತ್ಯುತ್ತಮ ವಿದ್ಯಾರ್ಥಿ ವಕೀಲ ಪ್ರಶಸ್ತಿ
February 17, 2019ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ನಡೆದ ಸುರಾನ ಮತ್ತು ಸುರಾನ ನ್ಯಾಷನಲ್ ಕಾರ್ಪೋರೇಟ್ ಲಾ ಮಾಕ್ ಕೋರ್ಟ್ ಕಾಂಪಿಟೇಷನ್ ಸ್ಪರ್ಧೆಯಲ್ಲಿ ಮೈಸೂರಿನ ಹಾಗೂ ಗುಜರಾತ್‍ನ ಗಾಂಧಿ ನಗರದಲ್ಲಿರುವ ನ್ಯಾಷನಲ್ ಲಾ ಸ್ಕೂಲ್‍ನ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿನಿ ಕಲ್ಲಿಚಂಡ ಪೂರ್ಣ ಪೂವಮ್ಮ ಅತ್ಯುತ್ತಮ ವಿದ್ಯಾರ್ಥಿ ವಕೀಲ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡರು. ದೇಶದ 9 ನ್ಯಾಷನಲ್ ಲಾ ಸ್ಕೂಲ್ಸ್ ಸೇರಿದಂತೆ ಸುಮಾರು 26 ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೈಸೂರಿನ ಸೇಂಟ್ ಜೋಸೆಫ್ ಮತ್ತು…
ಉಗ್ರರ ದಾಳಿಗೆ ತಕ್ಕ ಪ್ರತೀಕಾರ: ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಪ್ರಧಾನಿ ಮೋದಿ ಘೋಷಣೆ
February 16, 2019ನವದೆಹಲಿ: ಕಾಶ್ಮೀರದ ಪುಲ್ವಾಮಾದಲ್ಲಿ ನಮ್ಮ ವೀರ ಯೋಧರನ್ನು ಬಲಿತೆಗೆದು ಕೊಂಡ ಉಗ್ರರ ದಾಳಿಗೆ ಪ್ರತಿಯಾಗಿ ಕಾರ್ಯಾಚರಣೆ ನಡೆಸಲು ನಮ್ಮ ಭದ್ರತಾ ಪಡೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಸಂಪೂರ್ಣ ದೇಶೀ ನಿರ್ಮಿತ ಸ್ವಯಂಚಾಲಿತ ಅತಿವೇಗದ ರೈಲು, ದೆಹಲಿ-ವಾರಣಾಸಿ ನಡುವೆ ಸಂಚರಿಸುವ `ವಂದೇ ಭಾರತ’ ಎಕ್ಸ್ ಪ್ರೆಸ್‍ಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ವೀರಯೋಧರ ಬಲಿದಾನ, ದಾಳಿಗೆ ಕಾರಣರಾದವರಿಗೆ ತಕ್ಕ ಪಾಠ ಕಲಿಸುವ ಕುರಿತೇ ಹೆಚ್ಚು ಮಾತನಾಡಿದರು. ನಮ್ಮ ವೀರ…
ರಕ್ಷಕರಿಗೇ ರಕ್ಷಣೆ ಇಲ್ಲಾಂದ್ರೆ ಇನ್ಯಾರಿಗೆ ರಕ್ಷಣೆ ಇದೆ..!
February 16, 2019ಮಂಡ್ಯ: ದೇಶ ಕಾಯೋ ರಕ್ಷಕರಿಗೇ ರಕ್ಷಣೆ ಇಲ್ಲಾಂದ್ರೆ ಇನ್ಯಾರಿಗೆ ರಕ್ಷಣೆ ಇದೆ, ನನ್ನ ಗಂಡನನ್ನು ಕೊಂದವರನ್ನು ಬ್ಲಾಸ್ಟ್ ಮಾಡಿ, ಯಾವುದೇ ಕಾರಣಕ್ಕೂ ಬಿಡಬೇಡಿ..! ಜಮ್ಮು-ಕಾಶ್ಮೀರದ ಪುಲ್ವಾಮಾದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಹೆಚ್.ಗುರು ಅವರ ಪತ್ನಿ ಕಲಾವತಿ ಅವರ ಆಕ್ರೋಶದ ನುಡಿಗಳಿವು. ಪತಿಯನ್ನು ಕಳೆದುಕೊಂಡ ದುಃಖದ ನಡುವೆಯೇ ತನ್ನ ಪತಿ ಸಾವಿಗೆ ಪ್ರತೀಕಾರ ಸಾರಿದರು. ನಾನು ಪ್ರತಿದಿನ ಅವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದೆ. ಅವರು ನಿನ್ನೆ ಬೆಳಿಗ್ಗೆ 11 ಗಂಟೆಗೆ ಫೋನ್ ಮಾಡಿದ್ದರು. ನಾನು ಕೆಲಸ ಮಾಡು…
ಹುತಾತ್ಮ ವೀರ ಯೋಧರಿಗೆ ಪ್ರಧಾನಿ ಅಂತಿಮ ನಮನ
February 16, 2019ನವದೆಹಲಿ: ನವದೆಹಲಿಯ ಪಾಲಂ ವಿಮಾನ ನಿಲ್ದಾಣ ಶುಕ್ರವಾರ ಸಂಜೆ ಬಲು ಬಾವುಕ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಒಂದೆಡೆ ಸಾಲಾಗಿ ಜೋಡಿಸಲಾಗಿದ್ದ 40 ವೀರ ಯೋಧರ ಮೃತದೇಹಗಳಿದ್ದ ಪೆಟ್ಟಿಗೆಗಳ ಮೇಲೆ ತ್ರಿವರ್ಣ ಧ್ವಜ ಮೌನ ವಾಗಿ ರೋಧಿಸುತ್ತಿತ್ತು. ಶವಪೆಟ್ಟಿಗೆಗಳ ಮೇಲೆಲ್ಲ ಹರಡಿದ್ದ ಹೂಗಳೂ ಮಂಕಾಗಿದ್ದವು. ಶುಕ್ರವಾರ ಸಂಜೆ 7 ಗಂಟೆಗೆ ಸಿಆರ್‍ಪಿಎಫ್ ಯೋಧರ ಪಾರ್ಥಿವ ಶರೀರಗಳನ್ನು ಶ್ರೀನಗರದಿಂದ ಪಾಲಂ ವಿಮಾನ ನಿಲ್ದಾಣಕ್ಕೆ ಸೇನಾಪಡೆಯ ವಿಶೇಷ ವಿಮಾನದಲ್ಲಿ ತರಲಾಯಿತು. ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್, ವಾಯು ಪಡೆ ಹಾಗೂ ನೌಕಾದಳದ ಮುಖ್ಯಸ್ಥರು…
ಪಾಕ್‍ಗೆ ಅಮೆರಿಕ ಎಚ್ಚರಿಕೆ
February 16, 2019ವಾಷಿಂಗ್ಟನ್: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ನಡೆದಿರುವ ಪೈಶಾಚಿಕ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ, ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ತಕ್ಷಣ ನಿಲ್ಲಿಸದಿದ್ದರೆ ಪಾಕಿಸ್ತಾನ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದೆ. ಪಾಕ್ ಮೂಲದ ಜೈಷ್-ಎ-ಮೊಹ ಮ್ಮದ್ ಸಂಘಟನೆಯ ಉಗ್ರರು ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ 40 ಭಾರತೀಯ ಯೋಧರನ್ನು ಬರ್ಬರವಾಗಿ ಹತ್ಯೆ ಗೈದಿದ್ದಾರೆ. ಈ ಘಟನೆಗೆ ವಿಶ್ವಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಉಗ್ರರು ಪಾಕ್ ನೆಲದಿಂದಲೇ…
ಕಾರ್ಮಿಕರ ಸಹಕಾರ ಸಂಘದ ಮೂಲಕ ಫಾಲ್ಕನ್ ಟೈರ್ಸ್ ನಿರ್ವಹಣೆ
February 16, 2019ಬೆಂಗಳೂರು: ಕಂಪನಿಯ ನೌಕರರ ಮೂಲಕವೇ ಮೈಸೂರಿನ ಫಾಲ್ಕನ್ ಟೈರ್ಸ್ ಕಂಪನಿ ಪುನರ್ ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಕಂಪನಿಯಲ್ಲಿ ದುಡಿಯುತ್ತಿದ್ದ ನೌಕರರ ಸಹಕಾರಿ ಸಂಘ ರಚಿಸಿ, ಟೈರ್ ಕಂಪನಿಗೆ ಪುನರ್ಜೀವ ನೀಡುವುದೇ ಇದರ ಉದ್ದೇಶವಾಗಿದೆ. ಕಂಪನಿ ಪುನರ್ ಆರಂಭಿಸಲು 180 ಕೋಟಿ ರೂ.ಗಳ ಮೂಲ ಬಂಡವಾಳ ಅಗತ್ಯವಿದ್ದು, ಅದನ್ನು…
ಕುಡಿಯುವ ನೀರು ಕಾಮಗಾರಿಗಳ ಕೈಗೆತ್ತಿಕೊಳ್ಳದೇ ಅಧಿಕಾರಿಗಳಿಂದ ಕೋಟ್ಯಾಂತರ ರೂ. ಅವ್ಯವಹಾರ
February 16, 2019ಮೈಸೂರು: ಕುಡಿಯುವ ನೀರು ಪೂರೈಕೆ ಸಂಬಂಧ ಕಾಮಗಾರಿಗಳನ್ನೇ ಕೈಗೆತ್ತಿ ಕೊಂಡಿಲ್ಲ. ಆದರೆ ಅವೆಲ್ಲಾ ಪೂರ್ಣಗೊಂಡಿವೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ ಕೋಟ್ಯಾಂತರ ರೂ. ಅವ್ಯವಹಾರ ನಡೆಸಿ ದ್ದಾರೆ ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರೂ ಆದ ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರು ಜಿಪಂನ ಮಿನಿ ಮೀಟಿಂಗ್ ಹಾಲ್‍ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದ…
ಮೈಸೂರು ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಫೆ.23ರಂದು ಚುನಾವಣೆ
February 16, 2019ಮೈಸೂರು: ತೆರವಾಗಿ ರುವ ಮೈಸೂರು ಜಿಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಫೆ.23ರಂದು ಚುನಾ ವಣೆ ನಡೆಸಲು ಮೈಸೂರು ವಿಭಾಗದ ಪ್ರಾದೇ ಶಿಕ ಆಯುಕ್ತರು ದಿನಾಂಕ ನಿಗದಿಪಡಿಸಿದ್ದಾರೆ. ಮೈಸೂರು ಜಿಪಂನಲ್ಲಿ ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸೇರಿ ಅಧಿಕಾರ ಹಂಚಿಕೊಂಡಿದ್ದವು. ಪರಸ್ಪರ ಒಪ್ಪಂದದಂತೆ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‍ಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಎಂದು ನಿರ್ಧರಿಸಿ ಅದರಂತೆ ಅಧಿಕಾರ ಹಂಚಿ ಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದು ಳಿದ ವರ್ಗ-ಎ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ…
ಮೈಸೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ
February 16, 2019ಮೈಸೂರು: ಜಮ್ಮು ವಿನಲ್ಲಿ ಪಾಕ್ ಬೆಂಬಲಿತ ಉಗ್ರರು ಸಿಆರ್ ಪಿಎಫ್ ಬಸ್ ಮೇಲೆ ಆತ್ಮಾಹುತಿ ದಾಳಿ ನಡೆಸಿ 44 ಯೋಧರು ಹುತಾತ್ಮರಾದ ಹಿನ್ನೆಲೆ ಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂ ರಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮೈಸೂರಿನ ಪ್ರಮುಖ ಸಾರ್ವಜನಿಕ ಸ್ಥಳ, ಪ್ರವಾಸಿ ತಾಣಗಳು ಹಾಗೂ ಸೂಕ್ಷ್ಮ ಸ್ಥಳ ಗಳೆಂದು ಗುರ್ತಿಸಿರುವ ಕಡೆಗಳಲ್ಲಿ ಹೆಚ್ಚು ವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋ ಜಿಸಿ ಭಾರೀ ಬಂದೋಬಸ್ತ್ ಮಾಡಿ ತೀವ್ರ ನಿಗಾ ವಹಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷ್ನರ್ ಕೆ.ಟಿ. ಬಾಲಕೃಷ್ಣ…










