ಅತ್ಯುತ್ತಮ ವಿದ್ಯಾರ್ಥಿ ವಕೀಲ ಪ್ರಶಸ್ತಿ
ಮೈಸೂರು

ಅತ್ಯುತ್ತಮ ವಿದ್ಯಾರ್ಥಿ ವಕೀಲ ಪ್ರಶಸ್ತಿ

February 17, 2019

ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ನಡೆದ ಸುರಾನ ಮತ್ತು ಸುರಾನ ನ್ಯಾಷನಲ್ ಕಾರ್ಪೋರೇಟ್ ಲಾ ಮಾಕ್ ಕೋರ್ಟ್ ಕಾಂಪಿಟೇಷನ್ ಸ್ಪರ್ಧೆಯಲ್ಲಿ ಮೈಸೂರಿನ ಹಾಗೂ ಗುಜರಾತ್‍ನ ಗಾಂಧಿ ನಗರದಲ್ಲಿರುವ ನ್ಯಾಷನಲ್ ಲಾ ಸ್ಕೂಲ್‍ನ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿನಿ ಕಲ್ಲಿಚಂಡ ಪೂರ್ಣ ಪೂವಮ್ಮ ಅತ್ಯುತ್ತಮ ವಿದ್ಯಾರ್ಥಿ ವಕೀಲ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡರು. ದೇಶದ 9 ನ್ಯಾಷನಲ್ ಲಾ ಸ್ಕೂಲ್ಸ್ ಸೇರಿದಂತೆ ಸುಮಾರು 26 ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೈಸೂರಿನ ಸೇಂಟ್ ಜೋಸೆಫ್ ಮತ್ತು ಸಂಕಲ್ಪ ಪದವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿಯಾದ ಕಲ್ಲಿಚಂಡ ಪೂರ್ಣ ಪೂವಮ್ಮ ಮೈಸೂರಿನ ವಿಜಯನಗರ 4ನೇ ಹಂತದ ನಿವಾಸಿ ಜೆ.ಕೆ. ಟೈರ್‍ನ ಕಾರ್ಯ ನಿರ್ವಾಹಕ ಕಲ್ಲಿಚಂಡ ಮುದ್ದುರಾಜ್ ಮತ್ತು ಅನು (ಕುಟ್ಟಂಡ) ದಂಪತಿ ಪುತ್ರಿ.

Translate »