ಪಾಕ್‍ಗೆ ಅಮೆರಿಕ ಎಚ್ಚರಿಕೆ
ಮೈಸೂರು

ಪಾಕ್‍ಗೆ ಅಮೆರಿಕ ಎಚ್ಚರಿಕೆ

February 16, 2019

ವಾಷಿಂಗ್ಟನ್: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ನಡೆದಿರುವ ಪೈಶಾಚಿಕ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ, ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ತಕ್ಷಣ ನಿಲ್ಲಿಸದಿದ್ದರೆ ಪಾಕಿಸ್ತಾನ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದೆ.

ಪಾಕ್ ಮೂಲದ ಜೈಷ್-ಎ-ಮೊಹ ಮ್ಮದ್ ಸಂಘಟನೆಯ ಉಗ್ರರು ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ 40 ಭಾರತೀಯ ಯೋಧರನ್ನು ಬರ್ಬರವಾಗಿ ಹತ್ಯೆ ಗೈದಿದ್ದಾರೆ. ಈ ಘಟನೆಗೆ ವಿಶ್ವಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಉಗ್ರರು ಪಾಕ್ ನೆಲದಿಂದಲೇ ಇಂತಹ ಹೀನಕೃತ್ಯಗಳನ್ನು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ನಿಮ್ಮ ಕುಮ್ಮಕ್ಕಿನಿಂದಲೇ ಉಗ್ರರು ಇಂದು ವಿಶ್ವದ ಶಾಂತಿಗೆ ಭಂಗ ಉಂಟಾಗುತ್ತಿದೆ. ಉಗ್ರರ ಸ್ವರ್ಗವಾಗಿರುವ ಪಾಕಿಸ್ತಾನ ಈಗಲಾ ದರೂ ಉಗ್ರಗಾಮಿ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲ ವನ್ನು ನಿಲ್ಲಿಸುವಂತೆ ಕಠಿಣ ಪದಗಳಲ್ಲಿಯೇ ಅಮೆರಿಕ ತರಾಟೆಗೆ ತೆಗೆದುಕೊಂಡಿದೆ. ಕಣ್ಣೊರೆಸುವ ತಂತ್ರ ನಿಲ್ಲಿಸಿ, ಮೊದಲು ಉಗ್ರರ ವಿರುದ್ಧ ಕ್ರಮಕ್ಕೆ ಮುಂದಾಗಿ. ಇಲ್ಲದಿದ್ದರೆ ಪರಿಣಾಮ ಎದುರಿಸಿ ಎಂದು ಅಮೆರಿಕದ ವೈಟ್‍ಹೌಸ್‍ನ ಪತ್ರಿಕಾ ಕಾರ್ಯದರ್ಶಿ ಸರ್ಹ ಸಂಡೇರ್ಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Translate »