ತಿರುಪತಿ: ಭಾರತದ ಪ್ರಮುಖ ಮೊಬೈಲ್ ಫೋನ್ ತಯಾರಿಕಾ ಕಂಪನಿ ಯಾದ `ಕಾರ್ಬನ್’ ಆಂಧ್ರಪ್ರದೇಶ ಸರ್ಕಾರದ ಆಶ್ರಯದಲ್ಲಿ ತಿರುಪತಿಯ ಲ್ಲಿನ ಶ್ರೀ ವೆಂಕಟೇಶ್ವರ ಮೊಬೈಲ್ ಅಂಡ್ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಹಬ್‍ನಲ್ಲಿ ರಾಜ್ಯದ ಮೊದಲ ಮೊಬೈಲ್ ಫೋನ್ ತಯಾರಿಕಾ ಘಟಕ ಸ್ಥಾಪಿಸಿದೆ. ಮೊದಲ ಹಂತವಾಗಿ 200 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ಸ್ಥಾಪಿಸಲಾಗಿದ್ದು, ವಾರ್ಷಿಕ 10 ಲಕ್ಷ ಕಾರ್ಬನ್ ಮೊಬೈಲ್ ಫೋನ್ಸ್ ತಯಾ ರಿಕಾ ಸಾಮಥ್ರ್ಯವನ್ನು ಈ ಘಟಕ ಹೊಂದಿದೆ. ಇದು ಭಾರತದಲ್ಲಿ ಕಾರ್ಬನ್ ಮೊಬೈಲ್‍ನ 4ನೇ ತಯಾರಿಕಾ ಘಟಕ…
ಕಾರು ಗ್ಲಾಸ್ ಒಡೆದು ಕಳವು ಮಾಡುತ್ತಿದ್ದ ಮೂವರು ಅಂತರರಾಜ್ಯ ಖದೀಮರ ಬಂಧನ
February 16, 2019ಮೈಸೂರು,: ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದ ಕಾರಿನ ಗ್ಲಾಸ್ ಒಡೆದು ಕಳವು ಮಾಡುತ್ತಿದ್ದ ತಮಿಳುನಾಡಿನ ರಾಮ್‍ಜೀನಗರ ಗ್ಯಾಂಗ್‍ನ ಮೂವರು ಅಂತರ ರಾಜ್ಯ ಕಳ್ಳರನ್ನು ದೇವರಾಜ ಪೊಲೀಸರು ಬಂಧಿಸಿದ್ದಾರೆ. ಇವರಿಂದ 4,180 ರೂ. ನಗದು ಹಾಗೂ 6 ಲ್ಯಾಪ್‍ಟಾಪ್ ಬ್ಯಾಗ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಶ್ರೀರಂಗಂ ತಾಲೂಕಿನ ಗಾಂಧಿನಗರದ ನಿವಾಸಿಗಳಾದ ಭಾರತೀರಾಜನ್(38), ಜ್ಞಾನಪ್ರಕಾಶ(35) ಅವರನ್ನು ಫೆ.7 ರಂದು ಟೌನ್‍ಹಾಲ್ ಬಳಿ ಕಾರ್ಯಾಚರಣೆ ನಡೆಸಿ, ಬಂಧಿಸಲಾಗಿತ್ತು. ಇವರ ಸುಳಿವಿನ ಮೇರೆಗೆ ಮತ್ತೋರ್ವ ಆರೋಪಿ ಟೈಲರ್ ಪ್ರಕಾಶ್ ಎಂಬಾತನ್ನು ಬಂಧಿಸಿ, ತೀವ್ರ…
ಜಮ್ಮುವಿನಲ್ಲಿ ಉಗ್ರರ ದಾಳಿಗೆ ಮೈಸೂರಲ್ಲಿ ತೀವ್ರ ಆಕ್ರೋಶ
February 16, 2019ವಕೀಲರು, ಹೋಟೆಲ್ ಮಾಲೀಕರು, ಸಂಘ-ಸಂಸ್ಥೆಗಳಿಂದ ಪ್ರತಿಭಟನೆ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಮೈಸೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿ 44 ಮಂದಿ ಭಾರತೀಯ ಯೋಧರನ್ನು ಬಲಿ ತೆಗೆದುಕೊಂಡ ಪಾಕ್ ಉಗ್ರರ ಕೃತ್ಯಕ್ಕೆ ಮೈಸೂರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೈಸೂರು ಹೋಟೆಲ್ ಮಾಲೀಕರ ಸಂಘ, ಮೈಸೂರು ವಕೀಲರ ಸಂಘ, ವಿಶ್ವ ಹಿಂದೂ ಪರಿಷತ್, ಮೈಸೂರು ಕನ್ನಡ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿ ಕಾರಿಗಳು ಇಂದು ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿದರಲ್ಲದೆ, ದಾಳಿಯಲ್ಲಿ ವೀರ ಮರಣ ಹೊಂದಿದ ಭಾರತೀಯ ಯೋಧರಿಗೆ…
ಹುತಾತ್ಮ ಭಾರತೀಯ ಯೋಧರಿಗೆ ಮೈಸೂರಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
February 15, 2019ಮೈಸೂರು: ಜಮ್ಮುವಿನ ಪುಲ್ವಾಮಾದಲ್ಲಿ ಭಾರತೀಯ ಸೇನೆ ಮೇಲೆ ನಡೆದ ಪಾಕ್ ಪ್ರಾಯೋ ಜಿತ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಮೈಸೂರಿನ ವಿವಿಧೆಡೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು, ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಸೈನಿಕರ ನೆತ್ತರಿಗೆ ಪ್ರತೀಕಾರಬೇಕೆಂದು ಆಗ್ರಹಿಸಿದರು. ಮಹಾತ್ಮ ಗಾಂಧೀ ವೃತ್ತದಲ್ಲಿ ನೂರಾರು ಸೈನಿಕ ಅಭಿಮಾನಿಗಳು ಒಗ್ಗೂಡಿ, ಮೇಣದ ಬತ್ತಿ ಹೊತ್ತಿಸಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಭಯೋತ್ಪಾದನಾ ದಾಳಿಗೆ ಕುಮ್ಮಕ್ಕು ನೀಡಿರುವ ಪಾಕ್ ವಿರುದ್ಧ ಹರಿಹಾಯ್ದರು. `ಹರಿದ ರಕ್ತ ಕೇಳುತ್ತಿದೆ…
ಹುತಾತ್ಮರಾದ ಭಾರತದ 44 ವೀರ ಯೋಧರು
February 15, 2019ಶ್ರೀನಗರ: ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಯಲ್ಲಿ 44 ಭಾರತೀಯ ವೀರ ಯೋಧರು ಹುತಾತ್ಮರಾಗಿದ್ದಾರೆ. 30ಕ್ಕೂ ಹೆಚ್ಚು ಯೋಧರು ತೀವ್ರವಾಗಿ ಗಾಯಗೊಂಡಿದ್ದು, ಅವರಲ್ಲಿ 18 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಇಂದು ಬೆಳಿಗ್ಗೆ 3.30ರ ಸುಮಾರಿನಲ್ಲಿ ರಜೆ ಮುಗಿಸಿ ಕೊಂಡು ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‍ಪಿಎಫ್ ವಾಹನಗಳಲ್ಲಿ 2547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ ಕೇವಲ 20 ಕಿ.ಮೀ. ಅಂತರವಿದ್ದಾಗ ಹೆದ್ದಾರಿ ಯಲ್ಲಿ ವಿರುದ್ಧ ದಿಕ್ಕಿನಿಂದ ವೇಗವಾಗಿ 350 ಕೆ.ಜಿ. ಸುಧಾ ರಿತ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರಿನಲ್ಲಿ…
ಮಂಡ್ಯ ಯೋಧ ಹುತಾತ್ಮ
February 15, 2019ಭಾರತೀನಗರ: ಜಮ್ಮು-ಕಾಶ್ಮೀರದಲ್ಲಿ ಇಂದು ಮಧ್ಯಾಹ್ನ ನಡೆದ ಉಗ್ರರ ದಾಳಿಗೆ ಮಂಡ್ಯ ಜಿಲ್ಲೆಯ ಯೋಧ ನೋರ್ವ ಹುತಾತ್ಮನಾಗಿದ್ದಾನೆ ಎಂದು ವರದಿಯಾಗಿದೆ. ಮದ್ದೂರು ತಾಲೂಕು ಭಾರತೀ ನಗರ ಸಮೀಪದ ಗುಡಿಗೆರೆ ಗ್ರಾಮದ ಪೊನ್ನಯ್ಯ ಮತ್ತು ಚಿಕ್ಕೋಳಮ್ಮ ದಂಪತಿ ಪುತ್ರ ಹೆಚ್. ಗುರು (33) ಹುತಾತ್ಮರಾದ ಯೋಧರಾಗಿದ್ದು, ಇವರು ರಜೆಗಾಗಿ ಗ್ರಾಮಕ್ಕೆ ಬಂದಿದ್ದು, ಕಳೆದ ವಾರವಷ್ಟೇ ಕರ್ತವ್ಯಕ್ಕೆ ಹಿಂತಿರುಗಿದ್ದರು ಎಂದು ಹೇಳಲಾಗಿದೆ. ಹುತಾತ್ಮ ಗುರು ಕಳೆದ ಆರು ತಿಂಗಳ ಹಿಂದೆಯಷ್ಟೇ ಸಾತನೂರು ಬಳಿಯ ಸಾಸಲಪುರ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರು. ಮಂಡ್ಯ ಜಿಲ್ಲೆಯ…
ಉಗ್ರರ ದಂಡಿಸುವ ಅಧಿಕಾರ ಭಾರತಕ್ಕಿದೆ: ಪಾಕ್‍ಗೆ ಕಟು ಎಚ್ಚರಿಕೆ
February 15, 2019ಹೊಸದಿಲ್ಲಿ: ಪುಲ್ವಾಮಾದಲ್ಲಿ ಇಂದು 44ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಪಾಕ್ ಪ್ರಾಯೋಜಿತ ಭಯೋತ್ಪಾದಕ ದಾಳಿಯನ್ನು ಕಟು ಶಬ್ದಗಳಿಂದ ಖಂಡಿಸಿ ಭಾರತ ಸರಕಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ವಿವರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆ ಯಲ್ಲಿ ಇಂದು ನಮ್ಮ ಭದ್ರತಾ ಪಡೆಯ ಶೂರ ಯೋಧರ ಮೇಲೆ ನಡೆದ ಹೇಡಿತನದ ಉಗ್ರರ ದಾಳಿಯನ್ನು ಸಾಧ್ಯ ವಿರುವ ಎಲ್ಲ ಕಠಿಣ ಪದಗಳಿಂದ ಭಾರತ ಸರಕಾರ ಖಂಡಿಸುತ್ತದೆ. ಇದೊಂದು ಹೀನಾತಿಹೀನ ಕೃತ್ಯವಾಗಿದ್ದು ಪಾಕಿಸ್ತಾನ ಮೂಲದ ಜೈಷ್ ಇ…
ಇಂದು ಮಹತ್ವದ ಭದ್ರತಾ ಸಂಪುಟ ಸಮಿತಿ ಸಭೆ
February 15, 2019ಹೊಸದಿಲ್ಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 44ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ಹಿನ್ನೆಲೆ ಯಲ್ಲಿ ಉದ್ಭವಿಸಿದ ಪರಿಸ್ಥಿತಿಯನ್ನು ಚರ್ಚಿಸಲು ಭದ್ರತೆ ಕುರಿತ ಸಂಪುಟ ಸಮಿತಿ ನಾಳೆ ಮಹತ್ವದ ಸಭೆ ನಡೆಸಲಿದೆ. ಗುರುವಾರ ಮಧ್ಯಾಹ್ನ ಪುಲ್ವಾಮಾ ಜಿಲ್ಲೆಯಲ್ಲಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್‍ಪಿಎಫ್ ಯೋಧರ ಬೆಂಗಾವಲು ವಾಹನಗಳ ಮೇಲೆ ನಡೆದ ಉಗ್ರರ ದಾಳಿಯಲ್ಲಿ 44ಕ್ಕೂ ಹೆಚ್ಚು ಯೋಧರು ಬಲಿದಾನ ಮಾಡಿ ದ್ದಾರೆ. ಪಾಕ್ ಪ್ರಾಯೋಜಿತ ಭಯೋತ್ಪಾದಕ ಸಂಘಟನೆ ಜೈಷ್ ಇ ಮೊಹಮ್ಮದ್ ಈ…
ಆತಿಥೇಯ ಭಾರತಕ್ಕೆ 252 ರನ್‍ಗಳ ಮುನ್ನಡೆ
February 15, 2019ಮೈಸೂರು: ಮೈಸೂರಿನ ಮಾನಸಗಂಗೋತ್ರಿಯಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ(ಗ್ಲೇಡ್ಸ್) ನಡೆಯುತ್ತಿ ರುವ ಭಾರತ `ಎ’ ಹಾಗೂ ಇಂಗ್ಲೆಂಡ್ ಲಯನ್ಸ್ ತಂಡದ ನಡುವಿನ ಮೊದಲ ಟೆಸ್ಟ್‍ನಲ್ಲಿ ಆತಿಥೇಯ ಭಾರತ ಎರಡನೇ ದಿನದಾಟದಲ್ಲಿ ಪಾರುಪತ್ಯ ಮೆರೆದು, ಎದುರಾಳಿಯನ್ನು 140 ರನ್‍ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿ 252ರನ್ ಮುನ್ನಡೆ ಸಾಧಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದು ಕೊಂಡು 282 ರನ್ ಗಳಿಸಿದ್ದ ಭಾರತ ಗುರುವಾರ ಆಟ ಮುಂದುವರೆಸಿ 110 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು 114.4 ಓವರ್‍ಗಳಲ್ಲಿ…
ಹಳೆ ಟ್ಯೂಬ್‍ಲೈಟ್ ಚೋಕ್(ಹೋಲ್ಡರ್) ಹಿಡಿದು ಬಿಜೆಪಿ ಸದಸ್ಯರಿಂದ ಪ್ರತಿಭಟನೆ
February 15, 2019ಮೈಸೂರು: ಮೈಸೂರು ನಗರದಲ್ಲಿ ಕಳೆದ ಒಂದೂವರೆ ವರ್ಷದಿಂದ ಬೀದಿ ದೀಪ ಅಳವಡಿಸದೆ ಪಾಲಿಕೆ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಪಾಲಿಕೆ ಕಚೇರಿ ಮುಂದೆ ಬಿಜೆಪಿ ಪಾಲಿಕೆ ಸದ ಸ್ಯರು ಹಳೆ ಟ್ಯೂಬ್ ಲೈಟ್‍ನ ಚೋಕ್(ಹೋಲ್ಡರ್) ಹಿಡಿದು ಪ್ರತಿಭಟನೆ ನಡೆಸಿದರು. ಸಾಂಸ್ಕೃತಿಕ ನಗರಿ ಮೈಸೂರಿನ 65 ವಾರ್ಡ್‍ಗಳಲ್ಲಿಯೂ ಬಹುತೇಕ ಕಡೆ ಬೀದಿ ದೀಪವಿಲ್ಲದೆ ಸಾರ್ವಜನಿಕರು ಪರ ದಾಡುವಂತಾಗಿದೆ. ವಿದ್ಯುತ್ ಮಿತ ಬಳಕೆ ಹಿನ್ನೆಲೆಯಲ್ಲಿ ಎಲ್ಲೆಡೆ ಎಇಡಿ ಬಲ್ಬ್ ಅಳ ವಡಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಇದು ಒಳ್ಳೆ ಬೆಳವಣಿಗೆ. ಆದರೆ…










