ಮೈಸೂರು: ಮೈಸೂರಿನ ಮಾನಸಗಂಗೋತ್ರಿಯಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ(ಗ್ಲೇಡ್ಸ್) ನಡೆಯುತ್ತಿ ರುವ ಭಾರತ `ಎ’ ಹಾಗೂ ಇಂಗ್ಲೆಂಡ್ ಲಯನ್ಸ್ ತಂಡದ ನಡುವಿನ ಮೊದಲ ಟೆಸ್ಟ್‍ನಲ್ಲಿ ಆತಿಥೇಯ ಭಾರತ ಎರಡನೇ ದಿನದಾಟದಲ್ಲಿ ಪಾರುಪತ್ಯ ಮೆರೆದು, ಎದುರಾಳಿಯನ್ನು 140 ರನ್‍ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿ 252ರನ್ ಮುನ್ನಡೆ ಸಾಧಿಸಿದೆ.
ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದು ಕೊಂಡು 282 ರನ್ ಗಳಿಸಿದ್ದ ಭಾರತ ಗುರುವಾರ ಆಟ ಮುಂದುವರೆಸಿ 110 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು 114.4 ಓವರ್‍ಗಳಲ್ಲಿ 392 ರನ್‍ಗೆ ಆಲೌಟ್ ಆಯಿತು. ಇಂದು ವಿಕೆಟ್ ಕೀಪರ್ ಕೆ.ಎಸ್.ಭರತ್(46) ಹೊರತುಪಡಿಸಿ ಬೇರ್ಯಾರು ಇಂಗ್ಲೆಂಡ್ ಬೌಲರ್‍ಗಳ ದಾಳಿಯನ್ನು ಸಮರ್ಥ ವಾಗಿ ಎದುರಿಸಲು ವಿಫಲರಾದರು. ಕರಾರುವಕ್ ದಾಳಿ ನಡೆಸಿದ ಜಾóಕ್ ಚಾಪೆಲ್ 22 ಓವರ್‍ಗಳಲ್ಲಿ 60 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಡ್ಯಾನಿ ಬ್ರಿಗ್ಸ್ 13.4 ಓವರ್‍ಗಳಲ್ಲಿ 71 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸವಾಲಿನ ಮೊತ್ತವನ್ನು ಬೆನ್ನಟ್ಟಲು ಕಣಕ್ಕಿಳಿದ ಇಂಗ್ಲೆಂಡ್ ಲಯನ್ಸ್ ತಂಡದ ಆರಂಭಿಕ ಆಟಗಾರರಾದ ಮ್ಯಾಕ್ಸ್ ಹೋಲ್ಡನ್, ಬೆನ್ ಡಕೇಟ್ ಭಾರತದ ಬೌಲಿಂಗ್ ದಾಳಿ ಎದುರಿಸಲು ತಿಣುಕಾಡಿ ದರು. 29 ಎಸೆತದಲ್ಲಿ 4 ಬೌಂಡರಿಯೊಂದಿಗೆ 19 ರನ್ ಗಳಿಸಿದ್ದ ಮ್ಯಾಕ್ಸ್ ಹೋಲ್ಡನ್, ನವ್‍ದೀಪ್ ಸೈನಿ ಎಸೆದ 5ನೇ ಓವರ್‍ನ ಕೊನೆ ಎಸೆತದಲ್ಲಿ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು. ಇದರ ಬೆನ್ನಲ್ಲೆ ಕೇವಲ 5 ರನ್ ಗಳಿಸಿದ್ದ ಸ್ಯಾಮ್ ಹೇನ್, ಆರೋನ್ ಎಸೆದ 13.3ನೇ ಎಸೆತದಲ್ಲಿ ವಿಕೇಟ್ ಕೀಪರ್ ಭರತ್‍ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಕ್ರೀಸ್‍ನಲ್ಲಿ ತಳವೂರುತ್ತಿದ್ದ ಆರಂಭಿಕ ಆಟಗಾರ ಬೆನ್ ಡಕೇಟ್ 15 ರನ್ ಗಳಿಸಿದ್ದಾಗ ನದೀಂ ಎಸೆತ ದಲ್ಲಿ ವಿಕೆಟ್ ಕೀಪರ್ ಭರತ್‍ಗೆ 2ನೇ ಬಲಿಯಾದರು. ನಂತರ ನವ್‍ದೀಪ್ ಸೈನಿ ಸತತ 2 ವಿಕೆಟ್‍ಗಳನ್ನು ಪಡೆದು, ಇಂಗ್ಲೆಡ್ ತಂಡದ ಆಟಗಾರರನ್ನು ಕಂಗಾಲಾಗಿಸಿ ದರು. 5 ರನ್ ಗಳಿಸಿದ್ದ ನಾಯಕ ಸ್ಯಾಮ್ ಬಿಲ್ಲಿಂಗ್ಸ್ ಹಾಗೂ 25 ರನ್ ಗಳಿಸಿದ್ದ ಓಲೈ ಪೋಪ್, ಈ ಇಬ್ಬರೂ ಸೈನಿ ದಾಳಿಗೆ ತತ್ತರಿಸಿ ಬೋಲ್ಡ್ ಆಗಿ ವಿಕೆಟ್ ಒಪ್ಪಿಸಿ ದರು. 2 ಬೌಂಡರಿಯೊಂದಿಗೆ 19 ರನ್ ಕಲೆ ಹಾಕಿದ್ದ ಸ್ಟೀವನ್ ಮುಲಾನೆ ನದೀಮ್ ಎಸೆದ ಚೆಂಡನ್ನು ಗುರುತಿಸದೆ ಬೌಲ್ಡ್ ಆದರು. ಇದಾದ ನಂತರ ಯಾವೊಬ್ಬ ಆಟಗಾರರೂ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ಒಬ್ಬರ ನಂತರ ಮತ್ತೊಬ್ಬರು ಪೆವಿಲಿಯನ್ ಪರೇಡ್ ನಡೆಸಿದರು. ಅರೋನ ಬೌಲಿಂಗ್‍ನಲ್ಲಿ 11 ರನ್ ಗಳಿಸಿದ್ದ ಲೆವಿಸ್ ಗ್ರೆಗೋರಿ, ಜಲಜ್ ಸಕ್ಸೇನಾ ಗೆ ಕ್ಯಾಚ್ ಇತ್ತು ನಿರ್ಗಮಿಸಿದರು. ಜಲಜ್ ಸಕ್ಸೇನಾ ಎಸೆತದಲ್ಲಿ 16 ರನ್ ಗಳಿಸಿದ್ದ ಡಾಮನಿಕ್ ಬೆಸ್ ಪಂಚಲ್‍ಗೆ ಕ್ಯಾಚ್ ನೀಡಿ ಔಟಾದರು. ಥಾಮಸ್ ಬೇಲಿ 13 ರನ್ ಗಳಿಸಿ ಅಜೇಯರಾಗಿ ಉಳಿದರೆ, 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಜಾóಕ್ ಚಾಪೆಲ್ ಯಾವುದೇ ರನ್ ಗಳಿಸದೆ ಜಲಜ್ ಸಕ್ಸೇನಾ ಬೌಲಿಂಗ್‍ನಲ್ಲಿ ಸಿದ್ದೇಶ್ ಲಾಡ್ ಹಿಡಿದ ಕ್ಯಾಚ್‍ಗೆ ಬಲಿಯಾದರು. 11ನೇ ಕ್ರಮಾಂಕದ ಆಟಗಾರ ಡ್ಯಾನಿ ಬ್ರಿಗ್ಸ್ 21 ಎಸೆತ ಎದುರಿಸಿ 6 ಗಳಿಸಿದ್ದಾಗ ನದೀಮ್ ಬೌಲಿಂಗ್‍ನಲ್ಲಿ ಬಲಿಯಾದರು. ಅಂತಿಮವಾಗಿ ಇಂಗ್ಲೆಂಡ್ ಲಯನ್ಸ್ ತಂಡ 48.4 ಓವರ್‍ಗಳಲ್ಲಿ ಎಲ್ಲಾ ವಿಕೆಟ್ ಒಪ್ಪಿಸಿ 140 ರನ್ ಗಳಿಸಲಷ್ಟೇ ತನ್ನ ಹೋರಾಟ ಸೀಮಿತಗೊಳಿಸಿತು. ಇದರಿಂದ ಭಾರತ 252 ರನ್ ಗಳ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡು ಪಂದ್ಯದ ಮೇಲಿನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಭಾರತ ತಂಡದ ಪರವಾಗಿ ನವ್‍ದೀಪ್ ಸೈನಿ 10 ಓವರ್‍ಗಳಲ್ಲಿ 30 ರನ್ ನೀಡಿ 3 ವಿಕೆಟ್, ಶಹಬಾಸ್ ನದೀಮ್ 9.4ಓವರ್‍ನಲ್ಲಿ 32ರನ್ ನೀಡಿ 3 ವಿಕೆಟ್, ವರುಣ್ ಆರೋನ್ 12 ಓವರ್‍ಗಳಲ್ಲಿ 47 ರನ್ ನೀಡಿ 2, ಜಲಜ್ ಸಕ್ಸೇನಾ 10 ಓವರ್‍ಗಳಲ್ಲಿ 10 ರನ್ ನೀಡಿ 2 ವಿಕೆಟ್ ಪಡೆದು ಇಂಗ್ಲೆಂಡ್ ಆಟ ಗಾರರನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾ ದರು. ಎರಡನೇ ದಿನದ ಅಂತ್ಯಕ್ಕೆ ಎರಡನೇ ಇನ್ನಿಂಗ್ ಆರಂಭಿಸಿರುವ ಇಂಗ್ಲೆಂಡ್ ಲಯನ್ಸ್ 6 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿದೆ. ಮ್ಯಾಕ್ಸ್ ಹೋಲ್ಡನ್ 19 ಎಸೆತದಲ್ಲಿ 5 ರನ್, ಬೆನ್ ಡಕೇಟ್ 18 ಎಸೆತದಲ್ಲಿ 13 ರನ್‍ಗಳಿಸಿ ಕಣದಲ್ಲಿದ್ದಾರೆ. ನಾಳೆ(ಫೆ.15) ಬೆಳಿಗ್ಗೆ 9.30ಕ್ಕೆ ಮೂರನೇ ದಿನದ ಆಟ ಆರಂಭವಾಗಲಿದೆ.