ಹಳೆ ಟ್ಯೂಬ್‍ಲೈಟ್ ಚೋಕ್(ಹೋಲ್ಡರ್)  ಹಿಡಿದು ಬಿಜೆಪಿ ಸದಸ್ಯರಿಂದ ಪ್ರತಿಭಟನೆ
ಮೈಸೂರು

ಹಳೆ ಟ್ಯೂಬ್‍ಲೈಟ್ ಚೋಕ್(ಹೋಲ್ಡರ್) ಹಿಡಿದು ಬಿಜೆಪಿ ಸದಸ್ಯರಿಂದ ಪ್ರತಿಭಟನೆ

February 15, 2019

ಮೈಸೂರು: ಮೈಸೂರು ನಗರದಲ್ಲಿ ಕಳೆದ ಒಂದೂವರೆ ವರ್ಷದಿಂದ ಬೀದಿ ದೀಪ ಅಳವಡಿಸದೆ ಪಾಲಿಕೆ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಪಾಲಿಕೆ ಕಚೇರಿ ಮುಂದೆ ಬಿಜೆಪಿ ಪಾಲಿಕೆ ಸದ ಸ್ಯರು ಹಳೆ ಟ್ಯೂಬ್ ಲೈಟ್‍ನ ಚೋಕ್(ಹೋಲ್ಡರ್) ಹಿಡಿದು ಪ್ರತಿಭಟನೆ ನಡೆಸಿದರು.

ಸಾಂಸ್ಕೃತಿಕ ನಗರಿ ಮೈಸೂರಿನ 65 ವಾರ್ಡ್‍ಗಳಲ್ಲಿಯೂ ಬಹುತೇಕ ಕಡೆ ಬೀದಿ ದೀಪವಿಲ್ಲದೆ ಸಾರ್ವಜನಿಕರು ಪರ ದಾಡುವಂತಾಗಿದೆ. ವಿದ್ಯುತ್ ಮಿತ ಬಳಕೆ ಹಿನ್ನೆಲೆಯಲ್ಲಿ ಎಲ್ಲೆಡೆ ಎಇಡಿ ಬಲ್ಬ್ ಅಳ ವಡಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಇದು ಒಳ್ಳೆ ಬೆಳವಣಿಗೆ. ಆದರೆ ಎಲ್ಲಾ ವಾರ್ಡ್ ಗಳಲ್ಲಿಯೂ ಎಲ್‍ಇಡಿ ಬಲ್ಬ್ ಅಳವಡಿ ಸಲು ಇದುವರೆಗೂ ಕ್ರಿಯಾ ಯೋಜನೆ ತಯಾರಿಸಿಲ್ಲ. ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಇದಕ್ಕೆ ಇನ್ನೂ ಎರಡು ವರ್ಷ ಬೇಕಾಗು ತ್ತದೆ. ಆದರೆ ಕನಿಷ್ಠ ಕೆಟ್ಟು ಹೋಗಿರುವ ಬೀದಿ ದೀಪಗಳನ್ನು ದುರಸ್ತಿ ಮಾಡು ವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಇದೇ ವೇಳೆ ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್ ಮಾತನಾಡಿ, ಎಲ್‍ಇಡಿ ಬಲ್ಬ್ ಅಳವಡಿಸುವುದು ಸೂಕ್ತ ನಿರ್ಧಾರ. ಇದಕ್ಕೆ ನಮ್ಮ ಸಮ್ಮತಿಯೂ ಇದೆ. ಆದರೆ ಇನ್ನೂ ಕ್ರಿಯಾ ಯೋಜನೆಯನ್ನೇ ರೂಪಿಸಿಲ್ಲ. ಇದಕ್ಕೆ ಸಾಕಷ್ಟು ಸಮಯಾ ವಾಕಾಶ ಬೇಕಾಗುತ್ತದೆ. ಈಗ ಕೆಟ್ಟಿರುವ ಬೀದಿ ದೀಪ ದುರಸ್ತಿ ಮಾಡದೆ ಪಾಲಿಕೆ ಅಧಿಕಾರಿಗಳು ಮೈಮರೆತಿದ್ದಾರೆ. ಎಲ್‍ಇಡಿ ಬಲ್ಬ್ ಬಿಟ್ಟು ಬೇರೆ ಬಲ್ಬ್ ಬಳಸಲು ಅನುಮತಿ ನೀಡಿಲ್ಲ ಎಂಬ ಉತ್ತರವನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಬಹುತೇಕ ವಾರ್ಡ್‍ಗಳಲ್ಲಿ, ಪ್ರಮುಖ ರಸ್ತೆಗಳು, ಜನ ವಸತಿ ಬಡಾವಣೆಯಲ್ಲಿ ಕತ್ತಲು ಆವರಿಸಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಸರಗಳ್ಳತನ, ಬೈಕ್ ಕಳ್ಳತನ, ಮನೆಗಳ್ಳ ತನಗಳು ನಡೆಯುತ್ತಿವೆ. ರಸ್ತೆಯಲ್ಲಿರುವ ಗುಂಡಿ ಕಾಣಿಸದೆ ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಮೇಯರ್, ಆಯುಕ್ತರು ಸರ್ಕಾರಕ್ಕೆ ಬೀದಿ ದೀಪ ಅಳವಡಿಕೆ ಸಂಬಂಧ ಪತ್ರ ಬರೆದು ಸುಮ್ಮ ನಾಗಿದ್ದಾರೆ. ವಾಸ್ತವ ಸಂಗತಿ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿಲ್ಲ. ಇನ್ನಾದರೂ ಕೆಟ್ಟಿರುವ ಬೀದಿ ದೀಪ ದುರಸ್ತಿ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಾಲಿಕೆ ಬಿಜೆಪಿ ಸದಸ್ಯರಾದ ಶಿವಕುಮಾರ್, ಸತೀಶ್, ಸಾತ್ವಿಕ್ ಸಂದೇಶ್‍ಸ್ವಾಮಿ, ಎಂ.ಯು. ಸುಬ್ಬಯ್ಯ, ಸುನಂದ ಪಾಲನೇತ್ರ ಸೇರಿ ದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »