ಮೈಸೂರು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಆಗ್ರಹಿಸಿ ಪ್ರಗತಿಪರರ ಧರಣಿ
ಮೈಸೂರು

ಮೈಸೂರು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಆಗ್ರಹಿಸಿ ಪ್ರಗತಿಪರರ ಧರಣಿ

February 15, 2019

ಮೈಸೂರು: ಪಾರಂ ಪರಿಕ ತಜ್ಞರ ಅಭಿಪ್ರಾಯ ಪಡೆದು ಮೈಸೂ ರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೈಸೂ ರಿನಲ್ಲಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಕಾರ್ಯಕರ್ತರು ಧರಣಿ ನಡೆಸಿದರು.

ಮೈಸೂರಿನ ನ್ಯಾಯಾಲಯದ ಮುಂಭಾಗವಿರುವ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಧರಣಿ ಆರಂಭಿಸಿದ ಪ್ರಗತಿ ಪರ ಚಿಂತಕರ ವೇದಿಕೆ ಕಾರ್ಯಕರ್ತರು, ಮೈಸೂರಿನ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್‍ಡೌನ್, ದೇವರಾಜ ಮಾರುಕಟ್ಟೆ ಕಟ್ಟಡಗಳ ಸಂರಕ್ಷಣೆಯಲ್ಲಿ ಸರ್ಕಾರವೇ ನೇಮಿಸಿರುವ `ಪಾರಂಪರಿಕ ತಜ್ಞರ ಸಮಿತಿ’ ಅಭಿಪ್ರಾಯವನ್ನು ನಗರ ಪಾಲಿಕೆ ಪಡೆ ದಿಲ್ಲ. ಪಾರಂಪರಿಕ ನಗರವೂ ಆಗಿರುವ ಮೈಸೂರಿನಲ್ಲಿ ಹಲವು ಪಾರಂಪರಿಕ ಕಟ್ಟಡಗಳಿವೆ. ಇವುಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಬಜೆಟ್‍ನಲ್ಲಿ 150 ಕೋಟಿ ರೂ. ನೀಡಲಾಗಿದೆ. ಈ ಮೊತ್ತದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕನಿಷ್ಠ 500 ಕೋಟಿ ರೂ. ಮೀಸಲಿಡಬೇಕು ಎಂದು ಪ್ರತಿ ಭಟನಾಕಾರರು ಒತ್ತಾಯಿಸಿದರು.

ಈ ಮಧ್ಯೆ ರಾಮಕೃಷ್ಣನಗರದ ಹೆಚ್.ಬ್ಲಾಕ್‍ನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವವರಿಗೆ ಇದುವರೆಗೂ `ಸ್ವಾಧೀನ ಪತ್ರ’ ನೀಡಿಲ್ಲ. ಈ ಭಾಗದಲ್ಲಿ ಅಲೆಮಾರಿ ಜನಾಂಗದವರು, ಬಡವರು ವಾಸಿಸುತ್ತಿರುವುದರಿಂದ ಈ ಬಡಾವಣೆಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಕಾಯಕ ಸಮಾಜಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ, ಡಾ.ಮಧು, ಶ್ರೀನಿವಾಸ್, ಮಮತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »