ತಿರುಪತಿಯಲ್ಲಿ ಕಾರ್ಬನ್ ಮೊಬೈಲ್ ತಯಾರಿಕಾ ಘಟಕ ಆರಂಭ
ಮೈಸೂರು

ತಿರುಪತಿಯಲ್ಲಿ ಕಾರ್ಬನ್ ಮೊಬೈಲ್ ತಯಾರಿಕಾ ಘಟಕ ಆರಂಭ

February 16, 2019

ತಿರುಪತಿ: ಭಾರತದ ಪ್ರಮುಖ ಮೊಬೈಲ್ ಫೋನ್ ತಯಾರಿಕಾ ಕಂಪನಿ ಯಾದ `ಕಾರ್ಬನ್’ ಆಂಧ್ರಪ್ರದೇಶ ಸರ್ಕಾರದ ಆಶ್ರಯದಲ್ಲಿ ತಿರುಪತಿಯ ಲ್ಲಿನ ಶ್ರೀ ವೆಂಕಟೇಶ್ವರ ಮೊಬೈಲ್ ಅಂಡ್ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಹಬ್‍ನಲ್ಲಿ ರಾಜ್ಯದ ಮೊದಲ ಮೊಬೈಲ್ ಫೋನ್ ತಯಾರಿಕಾ ಘಟಕ ಸ್ಥಾಪಿಸಿದೆ.

ಮೊದಲ ಹಂತವಾಗಿ 200 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ಸ್ಥಾಪಿಸಲಾಗಿದ್ದು, ವಾರ್ಷಿಕ 10 ಲಕ್ಷ ಕಾರ್ಬನ್ ಮೊಬೈಲ್ ಫೋನ್ಸ್ ತಯಾ ರಿಕಾ ಸಾಮಥ್ರ್ಯವನ್ನು ಈ ಘಟಕ ಹೊಂದಿದೆ. ಇದು ಭಾರತದಲ್ಲಿ ಕಾರ್ಬನ್ ಮೊಬೈಲ್‍ನ 4ನೇ ತಯಾರಿಕಾ ಘಟಕ ವಾಗಿದೆ. ಒಂದು ಘಟಕ ಹರಿಯಾಣದ ಬಾವಲ್‍ನಲ್ಲಿ ಮತ್ತು ಎರಡು ಘಟಕಗಳು ಉತ್ತರ ಪ್ರದೇಶದ ನೋಯಿಡಾದಲ್ಲಿವೆ.

ಕಾರ್ಬನ್‍ನ ನೂತನ ಘಟಕವನ್ನು ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಪಂಚಾ ಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾದ ನಾರಾ ಲೋಕೇಶ್ ಅವರು ಉದ್ಘಾಟಿಸಿದರು. ಬಳಿಕ ಸಚಿವರು ಘಟಕ ವನ್ನು ಪರಿಶೀಲಿಸಿ, ಕಾರ್ಬನ್ ಮೊಬೈಲ್ ತಂಡದೊಂದಿಗೆ ಸಂವಾದ ನಡೆಸಿದರು.

ಕಾರ್ಬನ್ ಮೊಬೈಲ್ ತಯಾರಿಕಾ ಘಟಕವನ್ನು ರಾಜ್ಯದಲ್ಲಿ ಪ್ರಥಮವಾಗಿ ಸ್ಥಾಪಿಸಲಾಗಿದೆ. ಇದರೊಂದಿಗೆ ಆಂಧ್ರ ಪ್ರದೇಶವನ್ನು ಭಾರತದ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಭಾರತವು ಮೊಬೈಲ್ ಫೋನ್ ಮಾರು ಕಟ್ಟೆಯಲ್ಲಿ ಅತೀ ವೇಗದಲ್ಲಿ ಬೆಳೆಯು ತ್ತಿದೆ. ಡಿವೈಸ್ ಮೇಕರ್ಸ್‍ಗಳು ಮೊಬೈಲ್ ತಯಾರಿಕಾ ಘಟಕವನ್ನು ನಮ್ಮ ರಾಜ್ಯ ದಲ್ಲಿ ಸ್ಥಾಪಿಸುವುದಕ್ಕೆ ಯಾವುದೇ ಅಡ ಚಣೆಗಳು ಇಲ್ಲ ಎಂದರು.

ಕಾರ್ಬನ್ ಮೊಬೈಲ್ ಕಂಪನಿ ಅಧ್ಯಕ್ಷ ಸುಧೀರ್ ಹಸಿಜಾ ಮಾತನಾಡಿ “ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ದೂರದೃಷ್ಟಿ ಹಾಗೂ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಪಂಚಾಯತ್‍ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾದ ನಾರಾ ಲೋಕೇಶ್ ಅವರ ನಿರ್ದೇಶನದೊಂದಿಗೆ ತಿರುಪತಿಯಲ್ಲಿ ಮೊಬೈಲ್ ತಯಾರಿಕಾ ಘಟಕ ಆರಂಭಿಸಿರುವುದು ನಮಗೆ ಹೆಮ್ಮೆ ಉಂಟುಮಾಡಿದೆ ಎಂದರು. ಇದರಿಂದಾಗಿ ಸ್ಥಳೀಯರಿಗೆ ಉದ್ಯೋ ಗಾವಕಾಶ ಕಲ್ಪಿಸಿದಂತಾಗಿದೆ. ಒಂದು ಲಕ್ಷ ಚದರ ಅಡಿಯಲ್ಲಿ ಸ್ಥಾಪನೆ ಯಾಗಿರುವ ಘಟಕದಲ್ಲಿ ಕೌಶಲವಿರುವ 1000 ಕಾರ್ಮಿಕರಿಗೆ ಉದ್ಯೋಗ ಕಲ್ಪಿಸ ಲಾಗುವುದು. ಇದರೊಂದಿಗೆ ಆಂಧ್ರ ಪ್ರದೇಶದ ಮಹಿಳೆಯರು ಹಾಗೂ ಪುರುಷರ ದುಡಿಮೆಗೆ ಅವಕಾಶ ಮಾಡಿ ಕೊಡಲಾಗುವುದು ಎಂದರು.

Translate »