ಮೈಸೂರು: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾ ನಿಲಯವು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಿದೆ. ಜೆಎಲ್‍ಬಿ ರಸ್ತೆಯಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಂಗಾಮಿ ಕುಲಪತಿ ಪ್ರೊ. ನಾಗೇಶ ವಿ.ಬೆಟ್ಟಕೋಟೆ ಅವರು, ಸ್ವಂತ ಜಾಗ, ಆಡಳಿತ ಕಟ್ಟಡದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೂ, ಮೈಸೂರು, ಮಂಡ್ಯ ಜಿಲ್ಲೆಗೆ ಸೀಮಿತವಾಗಿದ್ದ ಕಾರ್ಯ ವ್ಯಾಪ್ತಿಯನ್ನು ರಾಜ್ಯದ ಇನ್ನಿತರೆಡೆಗೂ ವಿಸ್ತರಿಸಲು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯು ಅನುಮೋದನೆ ನೀಡಿದೆ ಎಂದರು. ಬೆಂಗಳೂರು,…
ಕುಟುಂಬ ಸಮೇತ ವ್ಯಕ್ತಿ ನಾಪತ್ತೆ
February 15, 2019ಮೈಸೂರು: ವ್ಯಕ್ತಿಯೋರ್ವ ಕುಟುಂಬ ಸಮೇತ ನಾಪತ್ತೆಯಾಗಿರುವ ಬಗ್ಗೆ ಮೈಸೂರಿನ ಯರಗನಹಳ್ಳಿಯಿಂದ ವರದಿಯಾಗಿದೆ. ಯರಗನಹಳ್ಳಿಯಲ್ಲಿ ವಾಸವಿದ್ದು, ಬನ್ನೂರು ರಸ್ತೆಯಲ್ಲಿ ಹೋಟೆಲ್ ನಡೆಸುತ್ತಿದ್ದ ರಘು(30), ತಮ್ಮ ಪತ್ನಿ ಶಾಂತ(30), ಪುತ್ರಿ ಯಶಸ್ವಿನಿ ಮತ್ತು ಪುತ್ರ ಚಂದನ್(2) ಅವರೊಂದಿಗೆ ಫೆ.11ರಂದು ಬೆಳಿಗ್ಗೆ 5 ಗಂಟೆಯಿಂದ ನಾಪತ್ತೆಯಾಗಿದ್ದಾರೆ ಎಂದು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರ ಬಗ್ಗೆ ಮಾಹಿತಿ ಇರುವವರು ಆಲನಹಳ್ಳಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2418311ನ್ನು ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.
ಗಾರ್ಮೆಂಟ್ಸ್ ಉದ್ಯೋಗಿ ನಾಪತ್ತೆ
February 15, 2019ಮೈಸೂರು: ಗಾರ್ಮೆಂಟ್ಸ್‍ಗೆ ಕೆಲಸಕ್ಕೆ ಹೋದ ಮಹಿಳೆ ನಾಪತ್ತೆ ಯಾಗಿರುವ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಟಗಳ್ಳಿಯ ಗಾರ್ಮೆಂಟ್ಸ್‍ವೊಂದರಲ್ಲಿ ಕೆಲಸ ಮಾಡುವ ಸುಧಾ(33) ಎಂಬುವರು ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತನ್ನ ತಂದೆ ಮನೆಯಲ್ಲಿ ಇಬ್ಬರು ಮಕ್ಕಳ ಸಮೇತ ವಾಸವಾಗಿದ್ದರು. ಈಕೆ ಕಳೆದ ಡಿ13ರಂದು ಬೆಳಿಗ್ಗೆ ಗಾರ್ಮೆಂಟ್ಸ್‍ಗೆ ಹೋಗುವುದಾಗಿ ತಿಳಿಸಿ ತೆರಳಿದವರು ಈವರೆಗೆ ವಾಪಸಾಗಿಲ್ಲ ಎಂದು ಫೆ.4ರಂದು ಆಕೆಯ ತಂದೆ ಮಹ ದೇವ್ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈಕೆಯ ಬಗ್ಗೆ ಮಾಹಿತಿ ಇರುವವರು ಆಲನಹಳ್ಳಿ…
ಸಂತಾನಹರಣ ಶಸ್ತ್ರಚಿಕಿತ್ಸೆ ನಂತರ 27 ಸಾವಿರವಿದ್ದ ಬೀದಿನಾಯಿ 40 ಸಾವಿರಕ್ಕೇರಿಕೆ!
February 14, 2019ಮೈಸೂರು: ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ದಿಂದ ಬೀದಿ ನಾಯಿಗಳ ಉಪಟಳ ವೇನೂ ಕಡಿಮೆಯಾಗಿಲ್ಲ ಎಂಬ ಅಭಿಪ್ರಾಯವನ್ನು ಗುರುವಾರ ನಡೆದ ಮೈಸೂರು ಮಹಾನಗರ ಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆ ಯಲ್ಲಿ ಅನೇಕ ಸದಸ್ಯರು ವ್ಯಕ್ತಪಡಿಸಿ, ಸದರಿ ಕಾರ್ಯಕ್ರಮಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಪ್ರಯೋಜನ ವಾದರೂ ಏನು ಎಂದು ಪ್ರಶ್ನಿಸಿದರು. ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂ ಗಣದಲ್ಲಿ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ…
ಮೈಸೂರು ಪಾಲಿಕೆಯಿಂದ ಮುಡಾ ಸದಸ್ಯರಾಗಿ ಎಸ್‍ಬಿಎಂ ಮಂಜು ಆಯ್ಕೆ
February 14, 2019ಮೈಸೂರು: ಮೈಸೂರು ಮಹಾನಗರ ಪಾಲಿಕೆಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸದಸ್ಯರಾಗಿ ಪಾಲಿಕೆ ಜೆಡಿಎಸ್ ಸದಸ್ಯ ಎಸ್‍ಬಿಎಂ ಮಂಜು ಆಯ್ಕೆಯಾದರು. ಮೈಸೂರು ಮಹಾನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಕೌನ್ಸಿಲ್ ಸಭೆ ಯಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾ ಯಿತು. ಏಕೈಕ ಪ್ರತಿಸ್ಪರ್ಧಿ ಪಾಲಿಕೆ ಬಿಜೆಪಿ ಸದಸ್ಯ ಎಂ.ಯು. ಸುಬ್ಬಯ್ಯ ಅವರನ್ನು ಮಣಿಸಿ, ಎಸ್‍ಬಿಎಂ ಮಂಜು ಆಯ್ಕೆಯಾದರು. ಸ್ಥಳೀಯ ಸಂಸ್ಥೆಯ ಚುನಾಯಿತ ಸದಸ್ಯರೊಬ್ಬರು ಮುಡಾಗೆ ಸದಸ್ಯರಾಗಲು ಅವಕಾಶವಿದ್ದ ಹಿನ್ನೆಲೆಯಲ್ಲಿ ಸ್ವಪಕ್ಷ ಜೆಡಿಎಸ್ ಹಾಗೂ…
ಹೆಬ್ಬಾಳಲ್ಲಿ ಚರ್ಚ್ ನಿರ್ಮಾಣ ವಿಚಾರ: ಮೈಸೂರು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಗದ್ದಲ
February 14, 2019ಅಂತಿಮವಾಗಿ ಚರ್ಚ್ ನಿರ್ಮಾಣಕ್ಕೆ ಸಮ್ಮತಿ ಮೈಸೂರು: ಮೈಸೂರಿನ ಹೆಬ್ಬಾಳು ಬಡಾವಣೆಯ ನಾಗರಿಕ ಸೌಲಭ್ಯ(ಸಿಎ) ನಿವೇಶನದಲ್ಲಿ ಚರ್ಚ್ ನಿರ್ಮಾಣಕ್ಕೆ ಅನುಮತಿ ನೀಡುವ ಸಂಬಂಧ ನಗರಪಾಲಿಕೆ ಕೌನ್ಸಿಲ್ ಸಭೆ ಯಲ್ಲಿ ಚರ್ಚೆ ನಡೆಯುವ ಸಂದರ್ಭದಲ್ಲಿ ಗದ್ದಲ ಉಂಟಾಗಿ, ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು. ಮೈಸೂರು ನಗರಪಾಲಿಕೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಭಾಂಗಣದಲ್ಲಿ ಗುರು ವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಚರ್ಚ್ ವಿಚಾರ ಕೋಲಾಹಲಕ್ಕೆ ಕಾರಣ ವಾಯಿತು. ಹೆಬ್ಬಾಳು,…
ಮೋದಿಯೇ ಮತ್ತೆ ಪ್ರಧಾನಿಯಾಗಲಿ ಪ್ರತಿಪಕ್ಷದ ಹಿರಿಯ ಸದಸ್ಯ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಆಶಯ
February 14, 2019ಮಹಾಘಟಬಂಧನ್‍ಗೆ ಭಾರೀ ಆಘಾತ ನವದೆಹಲಿ: ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ಕೊನೆಯ ದಿನವಾದ ಬುಧ ವಾರ ಲೋಕಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಪ್ರಮುಖ ನಾಯಕರು ಸೇರಿ ದಂತೆ ಎಲ್ಲಾ ನಾಯಕರೂ ದಿಗ್ಭ್ರಮೆಗೆ ಒಳಗಾಗುವಂತಹ ಪ್ರಸಂಗ ನಡೆಯಿತು. ಪ್ರತಿಪಕ್ಷಗಳ ಮಹಾಘಟಬಂಧನದ ಭಾಗವಾಗಿರುವ, ಸಮಾಜವಾದಿ ಪಕ್ಷದ ಮಾಜಿ ಅಧ್ಯಕ್ಷರೂ ಆದ ಹಿರಿಯ ಸಂಸದ ಮುಲಾಯಂಸಿಂಗ್ ಯಾದವ್ ಆಡಿದ ಮಾತುಗಳೇ ಈ ದಿಗ್ಭ್ರಮೆಗೆ ಕಾರಣವಾದವು. `ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗಲಿ’ ಎಂಬ ಹಾರೈಕೆಯ ಮಾತುಗಳನ್ನು ಮುಲಾಯಂ ಆಡಿದ್ದು ರಾಷ್ಟ್ರ ರಾಜಕಾರಣದಲ್ಲಿ…
ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ, ಕಲ್ಲು ತೂರಾಟ
February 14, 2019ಹಾಸನ: ಆಪರೇಷನ್ ಕಮಲದ ಸುಮಾರು 82 ನಿಮಿಷಗಳ ಆಡಿಯೋ ಸುದ್ದಿವಾಹಿನಿಗಳಲ್ಲಿ ಇಂದು ಪ್ರಸಾರವಾಗು ತ್ತಿದ್ದಂತೆಯೇ ಹಾಸನದಲ್ಲಿ ಪ್ರಕ್ಷುಬ್ಧ ವಾತಾ ವರಣ ನಿರ್ಮಾಣವಾಯಿತು. ಸ್ಥಳೀಯ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಮನೆ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿ ದರು. ಈ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ವಿವರ: ಗುರು ಮಿಟ್ಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣ್ ಗೌಡ ಜೊತೆ ಆಪರೇಷನ್ ಕಮಲ…
ಬತ್ತಿದ ಕಾರಂಜಿಕೆರೆ: ದೋಣಿ ವಿಹಾರ ಸ್ಥಗಿತ
February 14, 2019ಮೈಸೂರು: ನೀರಿನ ಪ್ರಮಾಣ ಗಣನೀಯವಾಗಿ ಕುಸಿದ ಹಿನ್ನೆಲೆಯಲ್ಲಿ ಮೈಸೂರಿನ ಕಾರಂಜಿಕೆರೆ ಯಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ವಲಸೆ ಪಕ್ಷಿಗಳ ಸಂತಾನಾಭಿವೃದ್ಧಿ ಸಂದರ್ಭದಲ್ಲಿಯೇ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿದಿರುವುದು ಪಕ್ಷಿ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಮೈಸೂರಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾರಂಜಿ ಕೆರೆಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡಿ, ದೋಣಿ ವಿಹಾರ ಮಾಡಿ ಸಂಭ್ರಮಿಸುತ್ತಿದ್ದರು. ಕಳೆದ ಸಾಲಿನಲ್ಲಿ ವಾಡಿಕೆ ಮಳೆ ಬಾರದೆ ಕಾರಂಜಿಕೆರೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆ ನೀರು ಸಂಗ್ರಹವಾಗಿತ್ತು. ರಾಜಕಾಲುವೆ ಒತ್ತುವರಿ ಯಾಗಿರುವುದರಿಂದ ಚಾಮುಂಡಿಬೆಟ್ಟದಿಂದ ಮಳೆ…
ವಿಧಾನ ಮಂಡಲ ಅಧಿವೇಶನ ಮತ್ತೆ ಮುಂದೂಡಿಕೆ
February 14, 2019ಬೆಂಗಳೂರು: ಧ್ವನಿ ಸುರುಳಿ ವಿವಾದ ವಿಧಾನಸಭೆಯ ಮೂರನೇ ದಿನದ ಕಲಾಪವನ್ನೂ ನುಂಗಿ ಹಾಕಿತು. ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ನಡೆಸಿದ ಸಂಧಾನ ಸಭೆ ವಿಫಲಗೊಂಡ ನಂತರ ಪ್ರತಿಪಕ್ಷ ಬಿಜೆಪಿ ಸದಸ್ಯರು ಸರ್ಕಾರದ ನಡೆ ವಿರೋಧಿಸಿ ಧರಣಿ ನಡೆಸಿದರು. ಸರ್ಕಾರದ ವಿರುದ್ಧದ ಘೋಷಣೆ ನಡುವೆಯೇ ನಾಲ್ಕು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಮಾನ್ಯತೆ ನೀಡುವ ಮಸೂದೆ ಸೇರಿದಂತೆ ಕೆಲವು ತಿದ್ದುಪಡಿ ಕಾಯಿದೆಗಳಿಗೆ ಅಂಗೀಕಾರ ಪಡೆದುಕೊಂಡಿತು. ಸಭಾಧ್ಯಕ್ಷರು, ಗೊಂದಲ ತಿಳಿಗೊಳಿಸಲು ನಡೆಸಿದ ಪ್ರಯತ್ನ ವಿಫಲವಾದ ನಂತರ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನ ಸದನ…










