ಮೈಸೂರು: ವ್ಯಕ್ತಿಯೋರ್ವ ಕುಟುಂಬ ಸಮೇತ ನಾಪತ್ತೆಯಾಗಿರುವ ಬಗ್ಗೆ ಮೈಸೂರಿನ ಯರಗನಹಳ್ಳಿಯಿಂದ ವರದಿಯಾಗಿದೆ.
ಯರಗನಹಳ್ಳಿಯಲ್ಲಿ ವಾಸವಿದ್ದು, ಬನ್ನೂರು ರಸ್ತೆಯಲ್ಲಿ ಹೋಟೆಲ್ ನಡೆಸುತ್ತಿದ್ದ ರಘು(30), ತಮ್ಮ ಪತ್ನಿ ಶಾಂತ(30), ಪುತ್ರಿ ಯಶಸ್ವಿನಿ ಮತ್ತು ಪುತ್ರ ಚಂದನ್(2) ಅವರೊಂದಿಗೆ ಫೆ.11ರಂದು ಬೆಳಿಗ್ಗೆ 5 ಗಂಟೆಯಿಂದ ನಾಪತ್ತೆಯಾಗಿದ್ದಾರೆ ಎಂದು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರ ಬಗ್ಗೆ ಮಾಹಿತಿ ಇರುವವರು ಆಲನಹಳ್ಳಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2418311ನ್ನು ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.
ಮೈಸೂರು